*ಮೇ ಹಾಗೂ ಜೂನ್ ತಿಂಗಳ ಪಡಿತರ ಒಟ್ಟಿಗೆ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಕಾರರ ಆದ್ಯ ಗಮನಕ್ಕೆ ಸರಕಾರದಿಂದ ಮೇ-2026 ನೇ ಮಾಹೆಯಲ್ಲಿ NFSA (ಕೇಂದ್ರ ಸರಕಾರದ) ಮೇ-2026ನೇ ಮಾಹೆಯ ಹಾಗೂ ಜೂನ-2026ನೇ ಮಾಹೆಯ ಅಕ್ಕಿಯನ್ನು ಒಟ್ಟಿಗೆ ವಿತರಿಸಲಾಗುವುದು. ಅಂತ್ಯೋದಯ ಪಡಿತರ ಚೀಟಿ ಪ್ರತಿ ಕಾರ್ಡಿಗೆ=35 ಕೆ.ಜಿ. ಅಕ್ಕಿ (ಮೇ-2026) + 35 ಕೆ.ಜಿ.ಅಕ್ಕಿ (ಜೂನ-2026) ಒಟ್ಟು 70 ಕೆ.ಜಿ.ಅಕ್ಕಿ ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ = 5 ಕೆ.ಜಿ.ಅಕ್ಕಿ (ಮೇ-2026) + 5 ಕೆ.ಜಿ.ಅಕ್ಕಿ (ಜೂನ-2026) ಒಟ್ಟು 10 ಕೆ.ಜಿ.ಅಕ್ಕಿ ವಿತರಿಸಲಾಗುವುದು.
ವಿಶೇಷ ಸೂಚನೆ: ಪ್ರತಿ ಕಾರ್ಡಿಗೆ ಮೊದಲನೆಯದಾಗಿ ಮೇ-2026ನೇ ಮಾಹೆಯ ಬಯೋ ಪಡೆದುಕೊಂಡು ಪಡಿತರ ವಿತರಣೆ ಮಾಡಿ ಅದೇ ಪಡಿತರ ಚೀಟಿಯನ್ನು ಇನ್ನೊಮ್ಮೆ ಜೂನ-2026ನೇ ಮಾಹೆಯ ಬಯೋ ಪಡೆದುಕೊಂಡು ಪಡಿತರ ವಿತರಿಸತಕ್ಕದ್ದು,
ಪ್ರತಿ ಪಡಿತರ ಚೀಟಿದಾರರಿಂದ 2 ಬಾರಿ (ಮೇ-2026 ಹಾಗೂ ಜೂನ-2026ನೇ ಮಾಹೆಯ) ಬಯೋ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ಸಾರ್ವಜನಿಕರೇ ನೇರ ಹೊಣೆಗಾರರು ಎಂದು ಬೆಳಗಾವಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




