Kannada NewsKarnataka NewsPolitics

*ವಿಧಾನ ಪರಿಷತ್ ಚುನಾವಣೆ:ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಶಾಸಕರಿಂದ ಆಯ್ಕೆಯಾಗುವ ಕರ್ನಾಟಕ ವಿಧಾನ ಪರಿಷತ್‌ನ  ದೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ  ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಘಟಕದಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಾಲ್ವರು ಪ್ರಮುಖ ನಾಯಕರ ಉಮೇದುವಾರಿಕೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.

ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್  ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾದ ತಿಪ್ಪಣ್ಣಪ್ಪ ಕಮಕನೂರ್‌, ಕರಾವಳಿ ಭಾಗದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮತ್ತು ಮುಂಚೂಣಿ ನಾಯಕರಾಗಿ ಸುದೀರ್ಘ ಕಾಲದಿಂದ ಗುರುತಿಸಿಕೊಂಡಿರುವ ಪಿ.ವಿ. ಮೋಹನ್ ಅವರಿಗೆ ಹೈಕಮಾಂಡ್ ಈ ಬಾರಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಇವರ ಜೊತೆಗೆ ಹಳೆಯ ಮೈಸೂರು ಭಾಗದ ಮಳವಳ್ಳಿಯ ಪ್ರಮುಖ ದಲಿತ ನಾಯಕರಾದ ಶಿವಣ್ಣ ಮಳವಳ್ಳಿ ಅವರಿಗೂ ಕೂಡ ಪರಿಷತ್ ಟಿಕೆಟ್ ಭಾಗ್ಯ ಒಲಿದುಬಂದಿದೆ. 

ಮಳವಳ್ಳಿ ಭಾಗದಲ್ಲಿ ಸಾಮಾಜಿಕ ಹೋರಾಟಗಳು ಮತ್ತು ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಶಿವಣ್ಣ ಅವರಿಗೆ ಮಣೆ ಹಾಕಲಾಗಿದೆ.

Home add -Advt

Related Articles

Back to top button