ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ನಗರದ ಶಾಲಾ ವಿದ್ಯಾರ್ಥಿಗಳು ಶಾಸಕ ಅನಿಲ ಬೆನಕೆಯವರೊಂದಿಗೆ ಇಂದಿನ ಯುವಜನಾಂಗ, ಯುವಶಕ್ತಿ ಹಾಗೂ ಮಕ್ಕಳ ಕಲಿಕಾ ಚಟುವಟಿಕೆ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಕ್ಕಳ ಕಲಿಕೆಯ ಶಕ್ತಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ದೇಶದ ಯುವ ಸಮೂಹದ ಹಾಗೂ ದೇಶದ ಅಭಿವೃದ್ಧಿ ಕುರಿತು ಶಾಲೆಯ ವಿದ್ಯಾರ್ಥಿಗಳು ಶಾಸಕರ ಅಭಿಪ್ರಾಯದ ಬಗ್ಗೆ, ಶಾಸಕರ ರಾಜಕೀಯದ ಹಾದಿ, ರಾಜಕೀಯದಲ್ಲಿನ ವಿಚಾರಧಾರೆಗಳ ಬಗ್ಗೆ, ಅವರ ಶಿಕ್ಷಣದ ಬಗ್ಗೆ, ಸಮಾಜದ ಮತ್ತು ಕ್ಷೇತ್ರದ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಇಂದಿನ ಪೀಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಆದ್ದರಿಂದ ಮಕ್ಕಳಲ್ಲಿ ಹಾಗೂ ಇಂದಿನ ಯುವಜನಾಂಗದಲ್ಲಿ ಭಾರತೀಯ ಸಂಸ್ಕೃತಿಯು ಅತ್ಯಮೂಲ್ಯವಾಗಿದ್ದು, ಸಮುದಾಯದಲ್ಲಿನ ನೈತಿಕತೆ ಹಾಗೂ ಉತ್ತಮ ಜ್ಞಾನದ ಆಧಾರದ ಮೇಲೆ ಇಂದಿನ ಶಿಕ್ಷಣವು ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ ಎಂದರು.
ನಂತರದಲ್ಲಿ ರಾಜಕೀಯದ ಬಗ್ಗೆ ಅಭಿಪ್ರಾಯ ಕೇಳಿದ ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ನ್ಯಾಯಾಂಗವನ್ನು ಅಥವಾ ಕಾನೂನನ್ನು ಹಾಗೂ ಸಮಾಜದ ಒಳಿತನ್ನು ಯಾರು ಗೌರವಿಸುತ್ತಾರೋ ಅಂತವರು ಉತ್ತಮ ಪ್ರಜೆಗಳಾಗುವಲ್ಲಿ ಹಾಗೂ ಉತ್ತಮ ರಾಜಕಾರಣಿಯಾಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಭಾರತ ದೇಶ ಪ್ರತಿಶತ ೭೦ ರಷ್ಟು ಹಳ್ಳಿಗಳಿಂದ ಕೂಡಿರುವುದರಿಂದ ಭಾರತ ಒಂದು ವೈವಿದ್ಯಮಯ ರಾಷ್ಟ್ರವಾಗಿದೆ ಹಾಗೂ ಭಾರತ ದೇಶವು ಪ್ರತಿಶತ ೬೫ ರಷ್ಟು ಯುವ ಜನಾಂಗವನ್ನು ಹೊಂದಿರುವುದರಿಂದ ಇಡೀ ಜಗತ್ತು ನಮ್ಮ ಯುವ ಸಮೂಹವನ್ನು ನೋಡುತ್ತಿದೆ ಎಂದರು.
ಯುವ ಸಮೂಹವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಭಾರತ ಸಮುದಾಯ ಅಭಿವೃಧ್ದಿಯಾಗಬೇಕಾದರೆ ವಿದ್ಯಾರ್ಥಿಗಳಲ್ಲಿನ ಆಚಾರ ವಿಚಾರಗಳು ಉತ್ತಮವಾಗಿರಬೇಕು ಹಾಗೂ ಮಾತೃಭಾಷೆಗೆ ಮೊದಲ ಆದ್ಯತೆಯನ್ನು ನೀಡಿ ನಂತರದಲ್ಲಿ ಉಳಿದ ಭಾಷೆಯ ಬಗ್ಗೆ ಗಮನಹರಿಸಬೇಕು ಮತ್ತು ಬಡವರ, ರೈತಾಪಿ ವರ್ಗದವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕೆಂದರು.
ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಇಂದಿನ ಯುವ ಸಮೂಹದ ಪಾತ್ರ ಮಹತ್ವಾದ್ದಾಗಿರುವುದರಿಂದ ಎಲ್ಲರೂ ಒಂದಾಗಿ ಭಾರತವನ್ನು ವಿಶ್ವಗುರುವಾಗಿಸೋಣ ಎಂದು ಶಾಲಾ ಮಕ್ಕಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಆಕಾಡೆಮಿ ನಿರ್ದೇಶಕರಾದ ಸುಧೀರ ಕಮತೆ, ಅಕಾಡೆಮಿ ಸಂಯೋಜಕರಾದ ರೇಖಾ ವಾಘೆ, ಮುಖ್ಯೋಪಾಧ್ಯಾಯರಾದ ಅನುಪಮಾ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ