*ರೌಡಿಶೀಟರ್ ಮನೆಗಳ ಮೇಲೆ ಪೊಲೀಸ್ ರಿಂದ ಅನೀರಿಕ್ಷಿತ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವ್ಯಾಪ್ತಿಯ 5 ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರುಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೂನ್ 10 2026 ರಂದು ಬೆಳಗಿನ ಜಾವ ಅನೀರಿಕ್ಷಿತವಾಗಿ ಒಟ್ಟು 456 ಸಕ್ರಿಯವಾದ ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಈ ದಾಳಿಯಲ್ಲಿ ಅವರ ಮನೆಗಳನ್ನು ಪರಿಶೀಲನೆ ಮಾಡಲಾಗಿ ಒಟ್ಟು ರೂ. 8.5 ಲಕ್ಷ ನಗದು ಹಣ, ನಂಬರ್ ಪ್ಲೇಟ್ ಮತ್ತು ದಾಖಲಾತಿಗಳಿಲ್ಲದ 10 ವಾಹನಗಳು, ಹಾಗೂ 2 ಮಚ್ಚುಗಳನ್ನು ವಶಪಡಿಸಿಕೊಂಡು, ನ್ಯಾಯಾಲಯಗಳಿಂದ ಎನ್ಬಿಡಬ್ಲ್ಯೂ ಆಗಿ ಪರಾರಿಯಾಗಿರುವ ಇಬ್ಬರು ರೌಡಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ರೀತಿಯಾಗಿ ಅನೀರಿಕ್ಷಿತವಾಗಿ ಸಕ್ರಿಯವಾದ ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ಮಾಡಿ ಅಕ್ರಮ ಆಯುಧಗಳು, ನಗದು ಹಣ, ದಾಖಲಾತಿಗಳಿಲ್ಲದ ವಾಹನಗಳನ್ನು ವಶಪಡಿಸಿಕೊಂಡು ಮತ್ತು ಪರಾರಿಯಾದ ಆರೋಪಿಗಳನ್ನು ದಸ್ತಗಿರಿ ಮಾಡಿದ ಉತ್ತರ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಈ ಕಾರ್ಯಕ್ಕೆ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


