Karnataka NewsLatestPolitics

*ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದಿಂದ ಹಿಂದೆ ಸರಿದ ಬಿಜೆಪಿ ನಾಯಕರು*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ, ಆಣೆ ಪ್ರಮಾಣದ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಧರ್ಮಸ್ಥಳದಲ್ಲಿ ನಾಅವು ಸಹಸಕಾಂಗ ಪಕ್ಷದ ಸಭೆ ನಡೆಸಲ್ಲ ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು. ಅದನ್ನು ಧರ್ಮಸ್ಥಳಕ್ಕೆ ಹೋಗಿ ಚರ್ಚಿಸಬೇಕಿಲ್ಲ. ಇಲ್ಲಿಯೂ ಚರ್ಚಿಸಬಹುದು ಎಂಬ ಅಭಿಪ್ರಾಯ ಬಂದಿದೆ. ಹಾಗಾಅಗಿ ನಾವು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವುದಿಲ್ಲ ಎಂದರು.

ಅಡ್ಡಮತದಾನ ಹಾಗೂ ಅಂತವರ ವಿರುದ್ಧ ಕ್ರಮದ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇವೆ. ನಂತರ ಮುಂದಿನದನ್ನು ನಿರ್ಧರಿಸುತ್ತೇವೆ. ಅಡ್ಡಮತದಾನದ ಮೂಲಕ ಪಕ್ಷಕ್ಕೆ ಮೋಸ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು . ಯಾರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೋ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಇಂತಹ ಕೃತ್ಯ ಮತ್ತೆ ಮಾಡಬಾರದು ಎಂದರು.

Home add -Advt

Related Articles

Back to top button