Kannada NewsKarnataka NewsLatest

*BREAKING: ಶಾಪಿಂಗ್ ಕಾಂಪ್ಲೆಕ್ಸ್ ಕುಸಿದು ಬಿದ್ದು ಮೂವರು ವಿದ್ಯಾರ್ಥಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಆಲ್ಬಂ ಸಾಂಗ್ ಪೋಸ್ಟರ್ ಅಂಟಿಸುವಾಗ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ಕುಸಿದು ಬಿದ್ದು ಮೂವರು ವಿದ್ಯರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ಬಸ್ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ವಿದ್ಯಾರ್ಥಿಗಳ ತಂಡ ಆಲ್ಬಂ ಸಾಂಗ್ ಸಿದ್ಧ ಪಡಿಸಿತ್ತು. ಮ್ಯೂಸಿಕ್ ಟೀಂ ಕಟ್ಟುವ ನಿಟ್ಟಿನಲ್ಲಿ ಒಂದು ಆಲ್ಬಂ ಸಾಂಗ್ ಮಾಡಿದ್ದರು, ಆಲ್ಬಂ ಸಾಂಗ್ ಬಿಡುಗಡೆಗೆ ಪೋಸ್ಟರ್ ಅಳವಡಿಸಲೆಂದು ಶಾಪಿಂಗ್ ಕಾಂಪ್ಲೆಕ್ಸ್ ಬಳಿ ತೆರಳಿದ್ದರು. ಪೋಸ್ಟರ್ ಕಟ್ಟುವಾಗ ಕಾಂಪ್ಲೆಕ್ಸ್ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಾಗರಾಜ್, ರವಿಚಂದ್ರ ಹಾಗೂ ಅರ್ಜುನ್ ಮೃತ ದುರ್ದೈವಿಗಳು. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

ನಾಗರಾಜ್ ಗೆ ಸಿನಿಮಾ ಹಿರೋ ಆಗಬೇಕು ಎಂಬ ಕನಸಿತ್ತು. ಹಾಗಾಗಿ ಕಾಲೇಜು ದಿನಗಳಲ್ಲಿಯೇ ಶಾರ್ಟ್ ಫಿಲ್ಮ್, ರೀಲ್ಸ್, ಸ್ಟೋರಿ ರೈಟಿಂಗ್ ಮಾಡುತ್ತಿದ್ದ. ವಿದ್ಯಾರ್ಥಿಗಳ ತಂಡ ಕಟ್ಟಿ ಆಲ್ಬಂ ಸಾಂಗ್ ಮಾಡಿದ್ದ. ಆಲ್ಬಂ ಸಾಂಗ್ ಅದ್ಧೂರಿಯಾಗಿ ಬಿಡುಗಡೆ ಮಾಡಬೆಂದು ಸಿದ್ಧತೆ ನಡೆಸಿದ್ದರು. ಆಲ್ಬಂ ಬಿಡುಗಡೆಗೂ ಮುನ್ನವೇ ಪೋಸ್ಟರ್ ಳವಡಿಸುವಾಗಲೇ ವಿದ್ಯಾರ್ಥಿಗಳು ದಾರುಣ ಅಂತ್ಯಕಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button