Belagavi NewsBelgaum NewsKannada NewsKarnataka NewsLatest

*ಮಹಿಳೆ ನಾಪತ್ತೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
: ತಾಲೂಕಿನ ಜೈತುನಮಾಳ ಗ್ರಾಮದ ಶಬರಿ ಕಾಲೋನಿಯ ನಿವಾಸಿಯಾದ ನಾಗವ್ವಾ ಕೊಂ. ಚನ್ನಬಸಪ್ಪ ನಾಯಿಕ ಎಂಬ ೨೦ ವರ್ಷದ ಮಹಿಳೆಯು ಜೂನ್ ೨೭ ರಂದು ರಾತ್ರಿ ೧೧ ಗಂಟೆಯ ನಂತರ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ಮಹಿಳೆಯ ಚಹರೆ: ೫.೨ ಇಂಚ ಎತ್ತರ, ಹೋಳು ಮುಖ, ಗಿಡ್ಡ ಮೂಗು, ಅಗಲ ಹಣೆ, ಮೈಯಿಂದ ಸಡಪಾತಳ, ಗೋದಿ ಕೆಂಪು ಮೈ ಬಣ್ಣ, ಕೆಂಪ್ಪು ಬಣ್ಣಧ ಚೂಡಿದಾರ ಧರಿಸಿದ್ದು, ಬಲಗೈ ಮೋಣ ಕೈ ಹತ್ತಿರ ಹಳೆ ಗಾಯದ ಕಲೆ ಇರುತ್ತದೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ (ಪೊಲೀಸ್ ಕಂಟ್ರೋಲ್ ರೂಂ) ೦೮೩೧-೨೪೦೫೨೩೩ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪಿಐ, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ- ೯೪೮೦೮೦೪೦೩೧, ಬೆಳಗಾವಿ ಗ್ರಾಮೀಣ ಠಾಣೆ ೦೮೩೧-೨೪೦೫೨೫೨ ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಗ್ರಾಮಿಣ ಪೊಲೀಸ್ ಠಾಣೆಯ ಎಸ್ ಡಿ/ಪಿಎಸ್‌ಎಚ್‌ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button