Kannada NewsKarnataka News

ಸವದತ್ತಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಶಾಸಕ ಆನಂದ ಮಾಮನಿ ಕ್ಷೇತ್ರದ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ ಗೊರಗುದ್ದಿ ಗ್ರಾಮದಲ್ಲಿ  2019-20 ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಂದಾಜು 10 ಲಕ್ಷ ರೂ ಗಳಲ್ಲಿ  ಕುಡಿಯುವ ನೀರಿನ ಪೈಪ್ ಲೈನ್  ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.

 

ಕೊಡ್ಲಿವಾಡ ಗ್ರಾಮದಲ್ಲಿ  2019-20 ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಂದಾಜು 12 ಲಕ್ಷ ರೂ ಗಳಲ್ಲಿ  ಕುಡಿಯುವ ನೀರಿನ ಪೈಪ್ ಲೈನ್  ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.

ಯರಗಟ್ಟಿ ಗ್ರಾಮದಲ್ಲಿ  2019-20 ನೇ ಸಾಲಿನ ಪಂಚಾಯತ ರಾಜ್ ಇಲಾಖೆಯ ಅಂದಾಜು 10 ಲಕ್ಷ ರೂ ಅನುದಾನದಲ್ಲಿ  ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಯಿತು.

 ಯರಗಣವಿ ಗ್ರಾಮದಲ್ಲಿ  2019-20 ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಂದಾಜು 10 ಲಕ್ಷ ರೂ ಗಳಲ್ಲಿ  ಕುಡಿಯುವ ನೀರಿನ ಟ್ಯಾಂಕ್(ಮೆಲ್ಮಟ್ಟ ನೀರು ಸಂಗ್ರಹ) ನಿರ್ಮಾಣ  ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.
 ಕಲ್ಲಾಪೂರ ಗ್ರಾಮದಲ್ಲಿ  2019-20 ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಂದಾಜು 10ಲಕ್ಷ ರೂ ಗಳಲ್ಲಿ  ಕುಡಿಯುವ ನೀರಿನ ಮೆಲ್ಮಟ್ಟ ನೀರು ಸಂಗ್ರಹ ಮತ್ತು ಕಲ್ಲಾಪೂರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ  ಆರ್.ಐ.ಡಿ.ಎಪ್-24ರ ಅಂದಾಜು 75ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಯಿತು.
ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಜನರ ಸಹಕಾರದಿಂದ  ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಮಾಮನಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button