
ಪ್ರಗತಿವಾಹಿನಿ ಸುದ್ದಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿಯೇ ಪೊಲಿಸ್ ಅಧಿಕಾರಿಗಳ ನಿರ್ಲಕ್ಷ್ಯ ಜಗಜ್ಜಾಹೀರಾಗಿದೆ. ಪೊಕ್ಸೋ ಪ್ರಕರಣದ ಆರೋಪಿ ಪೊಲೀಸ್ ಠಾನೆಯಿಂದಲೇ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಪಿಕ್ಸೋ ಪ್ರಕರಣದ ಆರೋಪಿ ಮಂಜುನಾಥ್ ಎಸ್ಕೇಪ್ ಆಗಿರುವ ಆರೋಪಿ. ಮಂಜುನಾಥ್ ವಿರುದ್ಧ ವಾರದ ಹಿಂದೆ ಪೋಕ್ಸೋ ಕೇಸ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆತಂದಿದ್ದರು. ಗುರುವಾರ ಮಧ್ಯರಾತ್ರಿ ಆರೋಪಿ ಲಾಕಪ್ ನಿಂದ ಪರಾರಿಯಾಗಿದ್ದಾನೆ.
ಪೋಕ್ಸೋ ಪ್ರಕರಣದ ಆರೋಪಿ ಲಾಕಪ್ ನಿಂದ ಓಡಿ ಹೋಗುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರೇ? ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಆರೋಪಿ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.




