Belagavi NewsBelgaum NewsKannada NewsKarnataka NewsNationalSports

*ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರ ಅದ್ಭುತ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರಿನ, ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ಜುಲೈ 6 ರಿಂದ ಜುಲೈ 11, 2026 ರವರೆಗೆ ಹರಿಯಾಣದ ಹಿಸ್ಸಾರ್‌ನ ವಿದ್ಯಾದೇವಿ ಜಿಂದಾಲ್ ಶಾಲೆಯಲ್ಲಿ ಆಯೋಜಿಸಲಾದ ಅಖಿಲ ಭಾರತ ಐಪಿಎಸ್‌ಸಿ ಹಾಕಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 14 ವರ್ಷ, 17 ವರ್ಷ ಮತ್ತು 19 ವರ್ಷ ವಿಭಾಗಕ್ಕೆ ಒಳಪಟ್ಟ ಬಾಲಕಿಯರ ತಂಡಗಳು ಭಾಗವಹಿಸಿದ್ದವು.

ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 15 ಪ್ರತಿಷ್ಠಿತ ಬಾಲಕಿಯರ ಶಾಲೆಗಳು ಭಾಗವಹಿಸಿದ್ದವು. ನಮ್ಮ ಶಾಲೆಯು ವಿಭಾಗದಲ್ಲಿ ರನ್ನರ್ ಆಫ್ ಟ್ರೋಫಿಯನ್ನು ಪಡೆದುಕೊಂಡಿತು. 17 ವರ್ಷ ತಂಡದ ನಾಯಕಿ ಕೆಡೆಟ್ ತನೀಷಾ ಯು ತಂಡವನ್ನು ಮುನ್ನಡೆಸಿದರೆ ಕೆಡೆಟ್ ಅನ್ನಪೂರ್ಣೇಶ್ವರಿ ಪಿ. “ಬೆಸ್ಟ್ ಅಟ್ಯಾಕರ್” ಪ್ರಶಸ್ತಿ ಪಡೆದಳು. 

17 ವರ್ಷ ವಿಭಾಗದಲ್ಲಿ ಕೆಡೆಟ್ ಸಂಭ್ರಮಾ ಎಸ್. ಎಂ, ಅನ್ನಪೂರ್ಣೇಶ್ವರಿ ಪಿ., ಪ್ರಜ್ಞಾಪಿ ಮತ್ತು ನಮ್ರತಾ ಎಚ್ ಡಿ ಇವರು ಎಸ್‌ಜಿ ಎಫ್‌ಆಯ್ (SGFI) ಗೆ ಆಯ್ಕೆಯಾಗಿದ್ದಾರೆ. 19 ವರ್ಷ ವಿಭಾಗದಲ್ಲಿ ಕೆಡೆಟ್ ತನೀಷಾ ಯು ಶ್ರಾವಣಿ ಪಿ. ಕೆ, ಸಹನಾ ಕೆ ಮತ್ತು ಲಕ್ಷಣಾ ಎಸ್‌ಎಚ್ ಇವರು ಎಸ್‌ಜಿ ಎಫ್‌ಆಯ್ (SGFI) ಗೆ ಆಯ್ಕೆಯಾಗಿದ್ದಾರೆ.

Home add -Advt

Related Articles

Back to top button