Belagavi NewsBelgaum NewsKannada NewsKarnataka NewsNationalPolitics

*24 ವರ್ಷದ ಮಹಿಳೆ ಕಾಣೆ: ಪತ್ತೆಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿಯಾದ ನೇತ್ರಾ ಶಿವಾನಂದ ಗಸ್ತಿ ಎಂಬ 24 ವರ್ಷದ ಮಹಿಳೆ ಜುಲೈ 12, 2026 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ತನ್ನ ಇಬ್ಬರು ಮಕ್ಕಳನ್ನು ಗೋಕಾಕ ತಾಲೂಕಿನ ಕೆಮ್ಮನಕೋಲ ಗ್ರಾಮದಲ್ಲಿ ತನ್ನ ತವರು ಮನೆಯಲ್ಲಿ ಬಿಟ್ಟು ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದರ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ಮಹಿಳೆಯ ಚಹರೆ: ಎತ್ತರ 5 ಫೂಟ, ಸದೃಢ ಮೈಕಟ್ಟು, ದುಂಡು ಮುಖ, ದುಂಡು ಮೂಗು, ಗೋದಿಗೆಂಪು ಮೈಬಣ್ಣ, ಕಪ್ಪು ಕೂದಲು, ತಿಳಿ ಹಸಿರು ಬಣ್ಣದ ಚೂಡಿದಾರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್ ಠಾಣೆ ಪೋನ ನಂ:08334-222233 ಅಥವಾ ಇ ಮೇಲ್ ಐಡಿ- [email protected] ಗೆ ಸಂಪರ್ಕಿಸಬಹುದಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button