
ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ನಿನ್ನೆ ಕರೆದಿದ್ದ ಕರ್ನಾಟಕ ಸಂಸದರ ಸಭೆ ಅಭೂತ ಪೂರ್ವ ಯಶಸ್ಸು ಕಂಡಿದೆ.
ಸಭೆಯಲ್ಲಿ ಹಾಜರಿದ್ದ ಪ್ರತಿಕ್ಷದವರು ಕೂಡ ಸಭೆಯ ಧ್ಯೇಯೋದ್ದೇಶ, ಸರ್ವರನ್ನೂ ಒಳಗೊಳ್ಳುವ ಸಿಎಂ ನಡೆ ಬಗ್ಗೆ ಶ್ಲಾಘನೆ ಮಾಡಿದ್ದಾರೆ.
ಬಿಜೆಪಿ ಮುಖಂಡರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಸೋಮಣ್ಣ, ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ರಾಜ್ಯಸಭೆ ಸದಸ್ಯೆ ಶ್ರೀಮತಿ ಸುಧಾ ಮೂರ್ತಿವರೆಗೂ ಹಿಂದೆಂದೂ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರು ಸೇರಿರಲಿಲ್ಲ, ಇದೇ ಮೊದಲು ಎಂದು ಕೊಂಡಾಡಿದರು.
ಇಷ್ಟೊಂದು ಅಚ್ಚುಕಟ್ಟಾಗಿ ಸಭೆ ಆಯೋಜನೆ ಮಾಡಿದ ಸಿಎಂ ಡಿ ಕೆ ಶಿವಕುಮಾರ್ ಅಭಿನಂದನಾರ್ಹರು ಎಂದೂ ಹೊಗಳಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರಿದರು.

ಕರ್ನಾಟಕದ ಅಭಿವೃದ್ಧಿ ವಿಚಾರ ಬಂದಾಗ ಪಕ್ಷಬೇಧ ಮರೆತು ಒಟ್ಟಿಗೆ ಕೆಲಸ ಮಾಡೋಣ ಎಂಬ ಸಿಎಂ ಡಿ ಕೆ ಶಿವಕುಮಾರ್ ಅವರ ಮಾತಿಗೆ ಧ್ವನಿಗೂಡಿಸಿದರು.
ಕೇಂದ್ರದ ಮುಂದೆ ಬಾಕಿ ಇರುವ ಯೋಜನೆಗಳು, ಬಿಡುಗಡೆ ಆಗಬೇಕಾದ ಅನುದಾನ, ಬರ ಪರಿಸ್ಥಿತಿ ನಿರ್ವಹಣೆ ನೆರವು – ಮತ್ತಿತರ ವಿಚಾರಗಳ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಪ್ರಸ್ತಾಪಕ್ಕೆ ಸಕಾರಾತ್ಮಕ ಸ್ಪಂದನೆ ಸಭೆಯ ವಿಶೇಷ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ, ಶೋಭಾ ಕರಂದ್ಲಾಜೆ, ಲೋಕಸಭೆ ಸದಸ್ಯರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪಿ ಸಿ ಗದ್ದಿಗೌಡರ, ರಮೇಶ್ ಜಿಗಜಣಗಿ, ಸಾಗರ್ ಖಂಡ್ರೆ, ಡಾ. ಮಂಜುನಾಥ್, ಇ ತುಕಾರಾಮ್, ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ಗೋವಿಂದ ಕಾರಜೋಳ, ಡಾ. ಸುಧಾಕರ್, ಸುನಿಲ್ ಬೋಸ್, ಪ್ರಿಯಾಂಕ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್, ರಾಧಾಕೃಷ್ಣ, ಶ್ರೇಯಸ್ ಪಟೇಲ್, ರಾಜಶೇಖರ ಹಿಟ್ನಾಳ್, ಮಲ್ಲೇಶ್ ಬಾಬು, ಬ್ರಿಜೇಶ್ ಚೌಟ, ಯಧುವೀರ್ ಒಡೆಯರ್, ಕುಮಾರ ನಾಯಕ್, ಬಿ ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಸಭೆ ಸದಸ್ಯರಾದ ಸುಧಾ ಮೂರ್ತಿ, ಜೈರಾಮ್ ರಮೇಶ್, ಅಜಯ್ ಮಕೆನ್, ಜಿ ಸಿ ಚಂದ್ರಶೇಖರ, ಸೈಯದ್ ನಾಸಿರ್ ಹುಸೇನ್, ನಾರಾಯಣ ಭಂಡಗೆ, ಎಂ ನಾಗರಾಜ, ಮನ್ಸೂರ್ ಖಾನ್, ಪವನ್ ಖೇರಾ ಸಭೆಯಲ್ಲಿ ಇದ್ದರು.
ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಜಗ್ಗೇಶ್, ಲೆಹರ್ ಸಿಂಗ್, ಡಾ. ವೀರೇಂದ್ರ ಹೆಗಡೆ ಅವರು ಅನ್ಯ ಕಾರ್ಯಗಳ ನಿಮಿತ್ತ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಒಟ್ಟಾರೆ ಸಭೆ ಭರ್ಜರಿ ಯಶಸ್ಸು ಕಂಡಿದೆ.



