Kannada NewsLatestNational

*ಬಸ್ ಚಾಲಕನ ಮನೆಯಲ್ಲಿ ಬರೋಬ್ಬರಿ 28 ಕೋಟಿ ರೂ. ಕಂತೆ ಕಂತೆ ಹಣ, 15 ಕೆಜಿ ಚಿನ್ನ ಪತ್ತೆ: ದಾಳಿಗೆ ಹೋದ ಅಧಿಕಾರಿಗಳೇ ಶಾಕ್*

ಪ್ರಗತಿವಾಹಿನಿ ಸುದ್ದಿ: ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಮಾಜಿ ಬಸ್ ಚಾಲಕನೊಬ್ಬನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 28 ಕೋಟಿ ರೂಪಾಯಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್‌ ನಲ್ಲಿ ನಡೆದ ಮೆಗಾ ರೇಡ್ ವೇಳೆ ಈ ಘಟನೆ ನಡೆದಿದೆ. ಬಸ್ ಚಾಲಕನಾಗಿದ್ದ ಮಿನಾರ್ ಮೊಂಡಲ್ ಎಂಬಾತನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯ ಕಪಾಟಿನಲ್ಲಿ 33 ಬ್ಯಾಗ್ ಗಳು ಪತ್ತೆಯಾಗಿವೆ. ಬ್ಯಾಗ್ ತುಂಬೆಲ್ಲ ಕಂತೆ ಕಂತೆ ನೋಟುಗಳು, ಚಿನ್ನಾಭರಣಗಳು ಇದ್ದವು.

ದಾಳಿಯಲ್ಲಿ ಸಿಕ್ಕ ಹಣ ಎಣಿಸಲು ಅಧಿಕಾರಿಗಳು ಹಣ ಎಣಿಸುವ ಯಂತ್ರ ಬಳಸಿದ್ದಾರೆ. ಹಣ ಎಣಿಸುತ್ತಿದ್ದ ವೇಳೆ ಯಂತ್ರಗಳೇ ಕೆಟ್ಟು ಹೋಗಿವೆ. ಒಟ್ಟು ಐದು ಹಣ ಎಣಿಸುವ ಯಂತ್ರದ ಮೂಲಕ ಪತ್ತೆಯಾದ ಹಣ ಎಣಿಸಲಾಗಿದ್ದು, ಬರೋಬ್ಬರಿ 28 ಕೋಟಿ ರೂಪಾಯಿ ಪತ್ತೆಯಾಗಿದೆ. ಇದೇ ವೇಳೆ 15 ಕೆಜಿ ಚಿನ್ನ ಕೂಡ ಸಿಕ್ಕಿದೆ. ಮಿನಾರ್ ಮೊಂಡಲ್ ಟಿಎಂಸಿ ನಾಯಕರೊಬ್ಬರ ಪರಮಾಪ್ತ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಮನೆಯಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button