*ಬೆಳಗಾವಿಯಿಂದ ಠಾಣಾ, ಬೆಂಗಳೂರು, ಧರ್ಮಸ್ಥಳಕ್ಕೆ ರಾಜರಥ ಬಸ್ ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಪ್ರಯಾಣ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಆ.1 ರಿಂದ ಬೆಳಗಾವಿಯಿಂದ ಮಹಾರಾಷ್ಟ್ರದ ಠಾಣಾ , ಬೆಂಗಳೂರು ಹಾಗೂ ಧರ್ಮಸ್ಥಳಕ್ಕೆ ಹೊಸ ವಿನ್ಯಾಸದೊಂದಿಗೆ ನೂತನ ರಾಜರಥ ಎ/ಸಿ ಕ್ಲೀಪರ್ ಸಾರಿಗೆಯನ್ನು ಪ್ರಾರಂಭಿಸಲಾಗುತ್ತಿದೆ.
ಬೆಳಗಾವಿಯಿಂದ ಠಾಣೆ ಹೊಸ ಬಸ್
ಈ ಸಾರಿಗೆಗೆ ಇ-ಟಿಕೇಟನ್ನು ಆನ್ ಲೈನ್, www.ksrtc.in, www.nwkrtc.in ಹಾಗೂ ಮೊಬೈಲ್ ಮುಖಾಂತರ ಪಡೆಯಬಹುದಾಗಿದೆ. ಅಲ್ಲದೆ ಬೆಳಗಾವಿ ಬಸ್ ನಿಲ್ದಾಣದ ರಿಜರ್ವೇಷನ್ ಕೌಂಟರ್ ನಲ್ಲಿಯೂ ಸಹ ಮುಂಗಡ ಟಿಕೇಟ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸದರಿ ಸಾರಿಗೆಗೆ ಬೆಳಗಾವಿಯಿಂದ-ಠಾಣಾಗೆ ಪ್ರಯಾಣ ದರ ರೂ 1250/- (ಎಲ್ಲಾ ಸೇರಿ) ಇರುತ್ತದೆ.
ಸದರಿ ವಾಹನದ ಮಾರ್ಗವು ಬೆಳಗಾವಿಯಿಂದ 20.15 ಗಂಟೆಗೆ ಹೊರಟು ವ್ಹಾಯಾ ಸಂಕೇಶ್ವರ-ನಿಪ್ಪಾಣಿ-ಕೊಲ್ಲಾಪುರ-ಪೂನಾ ಠಾಣಾಗೆ 6.30 ಗಂಟೆಗೆ ತಲುಪುತ್ತದೆ. ಮರಳಿ ಠಾಣಾದಿಂದ 20 ಗಂಟೆಗೆ ಹೊರಟು ವ್ಹಾಯಾ ಪೂಣಾ-ಕೊಲ್ಲಾಪುರ-ನಿಪ್ಪಾಣಿ-ಸಂಕೇಶ್ವರ ಮೂಲಕ 6.45 ಗಂಟೆಗೆ ಬೆಳಗಾವಿಗೆ ತಲುಪುತ್ತದೆ.
ಬೆಳಗಾವಿಯಿಂದ-ಧರ್ಮಸ್ಥಳಕ್ಕೆ ನೂತನ ಬಸ್ ವ್ಯವಸ್ಥೆ
ಈ ಮಾರ್ಗದಲ್ಲಿ ಹೊಸ ವಿನ್ಯಾಸದೊಂದಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಪಲ್ಲಕ್ಕಿ ನಾನ್ ಎ/ಸಿ ಸ್ಲೀಪರ್ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.
ಈ ಸಾರಿಗೆಗೆ ಇ-ಟಿಕೇಟನ್ನು ಆನ್ ಲೈನ್, www.ksrtc.in, www.nwkrtc.in ಹಾಗೂ ಮೊಬೈಲ್ ಮುಖಾಂತರ ಪಡೆಯಬಹುದಾಗಿದೆ. ಅಲ್ಲದೆ ಬೆಳಗಾವಿ ಬಸ್ ನಿಲ್ದಾಣದ ರಿಜರ್ವೇಷನ್ ಕೌಂಟರ್, ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜಂಟರಲ್ಲಿಯೂ ಮುಂಗಡ ಟಿಕೇಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸದರಿ ಸಾರಿಗೆಗೆ ಬೆಳಗಾವಿಯಿಂದ-ಧರ್ಮಸ್ಥಳಕ್ಕೆ ಪ್ರಯಾಣ ದರ ರೂ 1150/-(ಎಲ್ಲಾ ಸೇರಿ) ಇರುತ್ತದೆ.
ಸದರಿ ವಾಹನದ ಮಾರ್ಗವು ಬೆಳಗಾವಿಯಿಂದ 20.30 ಗಂಟೆಗೆ ಹೊರಟು ನ್ಯಾಯಾ ಹುಬ್ಬಳ್ಳಿ-ಅಂಕೋಲಾ-ಕುಮಟಾ-ಭಟ್ಕಳ-ಕುಂದಾಪುರ-ಉಡುಪಿ-ಮೂಡಬಿದರೆ ಮೂಲಕ 7, ಗಂಟೆಗೆ ಧರ್ಮಸ್ಥಳ ತಲುಪುತ್ತದೆ. ಮರಳಿ ಧರ್ಮಸ್ಥಳದಿಂದ 20.30 ಗಂಟೆಗೆ ಹೊರಟು ವ್ಯಾಯಾ ಮೂಡಬಿದರೆ-ಉಡುಪಿ-ಕುಂದಾಪುರ-ಭಟ್ಕಳ-ಕುಮಟಾ-ಅಂಕೋಲಾ-ಹುಬ್ಬಳ್ಳಿ ಮೂಲಕ 7, ಗಂಟೆಗೆ ಬೆಳಗಾವಿಗೆ ತಲುಪುತ್ತದೆ.
ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ಹೊಸ ಬಸ್
ಈ ಮಾರ್ಗದಲ್ಲಿ ಹೊಸ ವಿನ್ಯಾಸದೊಂದಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಪಲ್ಲಕ್ಕಿ ನಾನ್ ಎ/ಸಿ ಸ್ಲೀಪರ್ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.
ಈ ಸಾರಿಗೆಗೆ ಇ-ಟಿಕೇಟನ್ನು ಆನ್ ಲೈನ್, www.ksrtc.in, www.nwkrtc.in ಹಾಗೂ ಮೊಬೈಲ್ ಮುಖಾಂತರ ಪಡೆಯಬಹುದಾಗಿದೆ. ಅಲ್ಲದೆ ಬೆಳಗಾವಿ ಬಸ್ ನಿಲ್ದಾಣದ ರಿಜರ್ವೇಷನ್ ಕೌಂಟರ್ ನಲ್ಲಿಯೂ ಸಹ ಮುಂಗಡ ಟಿಕೇಟ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸದರಿ ಸಾರಿಗೆಗೆ ಬೆಳಗಾವಿಯಿಂದ-ಬೆಂಗಳೂರಿಗೆ ಪ್ರಯಾಣ ದರ ರೂ 1300/- (ಎಲ್ಲಾ ಸೇರಿ) ಇರುತ್ತದೆ.
ಸದರಿ ವಾಹನದ ಮಾರ್ಗವು ಬೆಳಗಾವಿಯಿಂದ 20.45 ಗಂಟೆಗೆ ಹೊರಟು ವ್ಹಾಯಾ ಧಾರವಾಡ, ಹುಬ್ಬಳ್ಳಿ ಮೂಲಕ 6.45 ಗಂಟೆಗೆ ಬೆಂಗಳೂರು ತಲುಪುತ್ತದೆ. ಮರಳಿ ಬೆಂಗಳೂರಿನಿಂದ 23.15 ಗಂಟೆಗೆ ಹೊರಟು ವ್ಹಾಯಾ – ಹುಬ್ಬಳ್ಳಿ-ಧಾರವಾಡ ಮೂಲಕ 9.15 ಗಂಟೆಗೆ ಬೆಳಗಾವಿಗೆ ತಲುಪುತ್ತದೆ.
ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯವನ್ನು ಪಡೆದು ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ವಾಕರಸಾಸಂಸ್ಥೆ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




