
ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು ಬೆಂಗಳೂರಿನ ಎಎಂಬಿ ಮಾಲ್ನಲ್ಲಿ ಬಿಡುಗಡೆಯಾಗಿದೆ.
ಚಿತ್ರತಂಡಕ್ಕೆ ಶುಭ ಕೋರುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿದರು. 4:38 ನಿಮಿಷದ ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ನಲ್ಲಿ ಚಿತ್ರ ಕಥೆಯ ಸಾಕಷ್ಟು ಸುಳಿವುಗಳನ್ನು ನೀಡಲಾಗಿದೆ.ಯಶ್ ಅವರ ಪಾತ್ರದ ಜೊತೆಗೆ ಸಿನಿಮಾದ ನಾಯಕಿಯರ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.
ಟ್ರೈಲರ್ನಲ್ಲಿ ಆಕ್ಷನ್, ಪಂಚಿಂಗ್ ಡೈಲಾಗ್, ನಟಿಯರ ಗ್ಲಾಮರ್, ಸಸ್ಪೆನ್ಸ್, ಎಮೋಷನ್ ಸಹ ಇದೆ. ಟಾಕ್ಸಿಕ್ನಲ್ಲಿ ಯಶ್ ರಾಯನಾಗಿ ಹಾಗೂ ಟಿಕೆಟ್ ಆಗಿ ಅಬ್ಬರಿಸಿದ್ದಾರೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಯಶ್, ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ನಿರ್ದೇಶಕಿ ಗೀತು ಮೋಹನ್ದಾಸ್, ನಿರ್ಮಾಪಕ ಕೆವಿಎನ್ ವೆಂಕಟ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಟಾಕ್ಸಿಕ್ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


