Belagavi NewsBelgaum NewsKannada NewsKarnataka NewsLatest

*ದೇವಾಲಯದ ಶಿವಲಿಂಗ, ನಂದಿ, ತುಳಸಿ ಧ್ವಂಸ: ದೂರು ದಾಖಲು*

ನಿಡಗಲ್ ಗ್ರಾಮದ ಹೊರವಲಯದ ಸಿದ್ಧೇಶ್ವರ ದೇವಾಲಯದ ಶಿವಲಿಂಗ, ನಂದಿ, ತುಳಸಿ ಧ್ವಂಸ
ಶನಿವಾರ ನಡೆದ ಕಿಡಿಗೇಡಿಗಳ ಕೃತ್ಯ: ಗ್ರಾಮಸ್ಥರಿಂದ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ನಿಡಗಲ್ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಸಿದ್ಧೇಶ್ವರ ದೇವಾಲಯದ ಶಿವಲಿಂಗ, ನಂದಿ, ತುಳಸಿಯನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳು ದೇವಾಲಯಕ್ಕೆ ಹಾನಿಯುಂಟುಮಾಡಿದ ಆಘಾತಕಾರಿ ಘಟನೆ ಶನಿವಾರ ಸಂಭವಿಸಿದ್ದು, ಭಾನುವಾರ ಬೆಳಕಿಗೆ ಬಂದಿದೆ.

Home add -Advt

ನಿಡಗಲ್ ಗ್ರಾಮದಿಂದ 2 ಕಿಮೀ ದೂರದಲ್ಲಿ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟದ ಮೇಲೆ ಗ್ರಾಮದ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನವಿದೆ. ಶನಿವಾರ ದೇವಸ್ಥಾನದ ಸುತ್ತಮುತ್ತ ಯಾರೂ ಇಲ್ಲದ್ದನ್ನು ಗಮನಿಸಿ ದೇವಸ್ಥಾನ ಪ್ರವೇಶಿಸಿರುವ ಕಿಡಿಗೇಡಿಗಳು ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದ ದೇವಾಲಯದ ವಿಗ್ರಹಗಳನ್ನು ಭಗ್ನಗೊಳಿಸಿ ದೇವಾಲಯದ ಪಾವಿತ್ರ್ಯಕ್ಕೆ ಹಾನಿ ಉಂಟುಮಾಡಿದ್ದಾರೆ ಎಂದು ಗ್ರಾಮದ ಹಿರಿಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಿಡಗಲ್ ಗ್ರಾಮದೇವತೆ ಸಿದ್ಧೇರ್ಶವರ ದೇವಸ್ಥಾನ ಗ್ರಾಮದ ಜನರ ಆರಾಧ್ಯದೈವವಾಗಿದೆ. ಈ ದೇವಸ್ಥಾನ ಮತ್ತು ಸುತ್ತಲಿನ ಪ್ರಶಾಂತ ವಾತಾವರಣ ಅಪಾರ ಭಕ್ತರನ್ನು ಆಕಷರ್ಿಸಿದೆ. ನಿಡಗಲ್ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರ ಪಾಲಿಗೆ ಇದು ಪ್ರಮುಖ ಧಾಮರ್ಿಕ ಶ್ರದ್ಧಾಕೇಂದ್ರವಾಗಿದ್ದು, ಕಿಡಿಗೇಡಿಗಳು ದೇವಸ್ಥಾನದಲ್ಲಿದ್ದ ಶಿವಲಿಂಗ, ನಂದಿ, ಆಮೆ ಹಾಗೂ ಗರ್ಭಗುಡಿಯ ಮುಂಭಾಗದಲ್ಲಿರುವ ತುಳಸಿ ವೃಂದಾವನಕ್ಕೆ ಹಾನಿ ಉಂಟುಮಾಡಿದ್ದಾರೆ. ದೇವಾಲಯದಲ್ಲಿ ಹಣ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಟ ನಡೆಸಿರುವ ದುರುಳರು ಬಳಿಕ ದೇವಾಲಯದ ಅವಶೇಷಗಳಿಗೆ ಧಕ್ಕೆ ಉಂಟುಮಾಡಿ ತೆರಳಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೃತ್ಯದಿಂದ ನಿಡಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶ್ರೀ ಸಿದ್ಧೇಶ್ವರ ದೇವಸ್ಥಾನವು ಈ ಭಾಗದ ಪ್ರಮುಖ ಧಾಮರ್ಿಕ ಹಾಗೂ ಐತಿಹಾಸಿಕ ಶ್ರದ್ಧಾಕೇಂದ್ರವಾಗಿದ್ದು, ನಿತ್ಯವೂ ಹಲವು ಭಕ್ತರು ಭೇಟಿ ನೀಡುತ್ತಾರೆ. ಶ್ರಾವಣ ಮಾಸ ಆರಂಭವಾಗುವ ನಿಮಿತ್ತ ಭಾನುವಾರ ದೇವಸ್ಥಾನವನ್ನು ಸ್ವಚ್ಛಗೊಳಿಸಲು ಬಂದ ಭಕ್ತರಿಗೆ ಈ ಕೃತ್ಯ ಕಂಡುಬಂದಿದೆ. ಭಕ್ತರು ಭಕ್ತಿಯಿಂದ ಪೂಜಿಸುವ ಪವಿತ್ರ ವಿಗ್ರಹಗಳಿಗೆ ಹಾನಿ ಮಾಡಿರುವುದು ಆತಂಕಕಾರಿ ಹಾಗೂ ಅಸಮಾಧಾನಕಾರಿ ಕೃತ್ಯವಾಗಿದೆ. ಈ ಕೃತ್ಯಕ್ಕೆ ಕಾರಣವಾಗಿರುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಪೊಲೀಸರನ್ನು ಆಗ್ರಹಿಸಲಾಗಿದೆ. ಪೊಲೀಸರ ತಂಡ ಸ್ಥಳ ಪರಿಶೀಲಿಸಿ ತೆರಳಿದೆ ಎಂದು ಗ್ರಾಮಸ್ಥರು ಘಟನೆಯ ಬಗ್ಗೆ ವಿವರಿಸಿದ್ದಾರೆ.

Related Articles

Back to top button