Belagavi NewsBelgaum NewsKannada NewsKarnataka NewsLatestNational

*ಐಆರ್‌ಸಿಟಿಸಿ ನಿರ್ದೇಶಕರಾಗಿ ಸಚಿನ್ ಸಬ್ನಿಸ್ ನೇಮಕ*

ಐಆರ್‌ಸಿಟಿಸಿ ನಿರ್ದೇಶಕರಾಗಿ ಸಚಿನ್ ಸಬ್ನಿಸ್ ನೇಮಕ
3 ವರ್ಷ ಅವಧಿಗೆ ಕೇಂದ್ರ ಸರ್ಕಾರದ ಆದೇಶ

ಪ್ರಗತಿವಾಹಿನಿ ಸುದ್ದಿ/ ನವದೆಹಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (IRCTC) ಮಂಡಳಿಯ ನಿರ್ದೇಶಕರಾಗಿ ಬೆಳಗಾವಿಯ ಉದ್ಯಮಿ ಸಚಿನ್ ಬಾಲಕೃಷ್ಣ ಸಬ್ನಿಸ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ರಾಷ್ಟ್ರಪತಿಗಳ ಆದೇಶದಂತೆ ಸಚಿನ್ ಸಬ್ನಿಸ್ ಅವರನ್ನು ಐಆರ್‌ಸಿಟಿಸಿ ಮಂಡಳಿಯ ನಿರ್ದೇಶಕರಾಗಿ ನೇಮಿಸಲಾಗಿದೆ.

ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, 3 ವರ್ಷಗಳ ಅವಧಿಗೆ ಇರಲಿದೆ. ಅಥವಾ ಮುಂದಿನ ಆದೇಶದವರೆಗೆ – ಇವೆರಡರಲ್ಲಿ ಯಾವುದು ಮೊದಲು ಬರುತ್ತದೋ ಅಲ್ಲಿಯವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

IRCTC ಭಾರತೀಯ ರೈಲ್ವೆಯ ಅಡುಗೆ, ಆಹಾರ, ಆನ್‌ಲೈನ್ ಟಿಕೆಟ್ ಬುಕಿಂಗ್ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ನೋಡಿಕೊಳ್ಳುವ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button