*ವ್ಯಾಪಾರೋದ್ಯಮಿಗಳ ಸಮಸ್ಯೆಗಳನ್ನು ಪರಿಹರಿಸಲು ಗರಿಷ್ಠ ಪ್ರಯತ್ನ : ಸ್ವಪ್ನಿಲ್ ಶಹ*

ವ್ಯಾಪಾರೋದ್ಯಮಿಗಳ ಸಮಸ್ಯೆಗಳನ್ನು ಪರಿಹರಿಸಲು ಗರಿಷ್ಠ ಪ್ರಯತ್ನ : ಸ್ವಪ್ನಿಲ್ ಶಹ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ವಾಣಿಜ್ಯೋದ್ಯಮ ಸಂಘದ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹ ಹೇಳಿದ್ದಾರೆ.
ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಎಲ್ಲರನ್ನೂ ಸೇರಿಸಿಕೊಂಡು, ಎಲ್ಲರ ಸಲಹೆ ಪಡೆದು
ಸರಕಾರದ ಯೋಜನೆಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಬಹಳ ಕಾಲದಿಂದ ಇರುವ ಸಮಸ್ಯೆಗಳನ್ನು ಪರಿಹರಿಸಲು ಗರಿಷ್ಠ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಮಾಜಿ ಅಧ್ಯಕ್ಷರುಗಳಾದ ವಿನಯ ಜಠಾರ, ಪ್ರಭಾಕರ ನಾಗರಮುನೋಳಿ, ಬಸವರಾಜ ಜವಳಿ, ರೋಹನ್ ಜುವಳಿ, ಮಾಜಿ ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಅಪ್ಪಾಸಾಹೇಬ ಗುರವ್ ಮೊದಲಾದವರು ಮಾತನಾಡಿ, ವಾಣಿಜ್ಯೋದ್ಯಮಿಗಳು ಎದುರಿಸುತ್ತಿರುವ ಬಹಳಷ್ಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿಲ್ಲ. ಬೆಳಗಾವಿಗೆ ಮಂಜೂರಾದ ಯೋಜನೆಗಳು ಜಾರಿಯಾಗುತ್ತಿಲ್ಲ, ಪಾರ್ಕಿಂಗ್ ಸಮಸ್ಯೆ ಪರಿಹಾರವಾಗಿಲ್ಲ. ಆಧ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಸರಕಾರದ ಮಟ್ಟದಲ್ಲಿ ಗಟ್ಟಿ ಧ್ವನಿ ಎತ್ತೋಣ ಎಂದರು.
ಭಾರತೀಯ ರೈಲ್ವೆ ಇಲಾಖೆಯ ಪ್ರವಾಸೋದ್ಯಮ ನಿಗಮದ (ಐಆರ್ ಸಿಟಿಸಿ) ನಿರ್ದೇಶಕರಾಗಿ ನೇಮಕವಾಗಿರುವ ಸಚಿನ್ ಸಬ್ನಿಸ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ಬೆಳಗಾವಿಯ ಅಭಿವೃದ್ಧಿಗೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಸಚಿನ್ ಸಬ್ನಿಸ್ ಹೇಳಿದರು.
ಬಿಸಿಸಿಐ ಗೌರವ ಕಾರ್ಯದರ್ಶಿ ಮನೋಜ ಮತ್ತಿಕೊಪ್, ಹಿರಿಯ ಉಪಾಧ್ಯಕ್ಷ ಉದಯ ಜೋಶಿ, ಜಂಟಿ ಕಾರ್ಯದರ್ಶಿ ವಿನೀತ್ ಹರಕುಣಿ, ದ್ವಿತೀಯ ಉಪಾಧ್ಯಕ್ಷ ರಾಜೇಂದ್ರ ಮುತಗೇಕರ್ ವೇದಿಕೆಯಲ್ಲಿದ್ದರು.
ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Best Efforts to Resolve Issues of Business Community: Swapnil Shah
Belagavi: All-out and sincere efforts will be made to resolve the various issues faced by industrialists and traders in Belagavi, said Swapnil Shah, President of the Belagavi Chamber of Commerce and Industries (BCCI).
He was speaking after hoisting the national flag at the BCCI office in Belagavi on the occasion of the 80th Independence Day.
Shah said that the BCCI would work by taking everyone along and seeking suggestions from all stakeholders. Efforts would also be made to ensure that various government schemes reach the concerned entrepreneurs and traders.
“Several issues have been pending for a long time. I will make every possible effort to find solutions to these problems,” he assured.
Former BCCI presidents Vinay Jathar, Prabhakar Nagarmunoli, Basavaraj Javali and Rohan Javali, along with former secretary Satish Kulkarni and Appasaheb Gurav, also spoke on the occasion.
They pointed out that several issues concerning the business and industrial community in Belagavi continue to remain unresolved. Though various projects have been sanctioned for Belagavi, many of them have not been implemented. The parking problem in the city also remains unresolved.
They called upon the business community to work together to address these issues on a priority basis and raise a strong voice with the government for the development of Belagavi.
On the occasion, Sachin Sabnis, who has been appointed as a Director of the Indian Railway Catering and Tourism Corporation (IRCTC), was felicitated.
Sabnis said that all stakeholders should work together to exert pressure on both the Central and State governments and make concerted efforts for the overall development of Belagavi.
BCCI Honorary Secretary Manoj Mattikop, Senior Vice-President Uday Joshi, Joint Secretary Vineet Harakuni and Second Vice-President Rajendra Mutgekar were present on the dais.
BCCI directors, former presidents, former office-bearers and members were also present.
व्यापारी-उद्योजकांच्या समस्या सोडविण्यासाठी सर्वतोपरी प्रयत्न : स्वप्नील शहा
बेळगाव : बेळगावातील उद्योजक आणि व्यापारी बांधवांना भेडसावणाऱ्या विविध समस्या सोडविण्यासाठी प्रामाणिकपणे आणि सर्वतोपरी प्रयत्न केले जातील, अशी ग्वाही बेळगाव चेंबर ऑफ कॉमर्स अँड इंडस्ट्रीज (BCCI) चे अध्यक्ष स्वप्नील शहा यांनी दिली.
बेळगाव चेंबर ऑफ कॉमर्स अँड इंडस्ट्रीजच्या कार्यालयात ८०व्या स्वातंत्र्यदिनानिमित्त ध्वजारोहण केल्यानंतर ते बोलत होते.
सर्वांना सोबत घेऊन तसेच सर्वांच्या सूचना आणि सल्ले विचारात घेऊन शासनाच्या विविध योजना संबंधित उद्योजक व व्यापाऱ्यांपर्यंत पोहोचविण्याचे काम केले जाईल. अनेक वर्षांपासून प्रलंबित असलेल्या समस्या मार्गी लावण्यासाठी आपण जास्तीत जास्त प्रयत्न करू, असे स्वप्नील शहा यांनी सांगितले.
यावेळी माजी अध्यक्ष विनय जठार, प्रभाकर नागरमुन्नोळी, बसवराज जवळी, रोहन जुवळी, तसेच माजी सचिव सतीश कुलकर्णी, अप्पासाहेब गुरव आदींनी मनोगत व्यक्त केले.
बेळगावातील उद्योजक व व्यापाऱ्यांना भेडसावणाऱ्या अनेक समस्या अद्याप कायम आहेत. बेळगावसाठी मंजूर झालेल्या अनेक योजना प्रत्यक्षात राबविल्या जात नाहीत. शहरातील पार्किंगची समस्याही अद्याप सुटलेली नाही. या सर्व प्रश्नांना प्राधान्य देऊन त्यावर तोडगा काढण्यासाठी सर्वांनी एकजुटीने काम करण्याची गरज आहे. तसेच शासनाच्या पातळीवर ठोस आणि प्रभावी आवाज उठविला पाहिजे, असे त्यांनी सांगितले.
भारतीय रेल्वेच्या पर्यटन महामंडळाच्या (IRCTC) संचालकपदी नियुक्ती झाल्याबद्दल सचिन सबनीस यांचा यावेळी सत्कार करण्यात आला.
केंद्र आणि राज्य सरकारवर आवश्यक दबाव निर्माण करून बेळगावच्या विकासासाठी सर्वांनी एकत्रितपणे प्रयत्न करणे गरजेचे आहे, असे सचिन सबनीस यांनी सांगितले.
यावेळी BCCI चे मानद सचिव मनोज मत्तिकोप, वरिष्ठ उपाध्यक्ष उदय जोशी, संयुक्त सचिव विनीत हरकुणी, द्वितीय उपाध्यक्ष राजेंद्र मुतगेकर आदी पदाधिकारी व्यासपीठावर उपस्थित होते.
संघाचे संचालक, माजी अध्यक्ष, माजी पदाधिकारी आणि सदस्य मोठ्या संख्येने उपस्थित होते.




