*ಅ.1 ರಿಂದ ಬೆಳಗಾವಿ-ದೆಹಲಿ ನಡುವೆ ಇಂಡಿಗೋ ವಿಮಾನ ಸೇವೆ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರುವ 1ನೇ ಅಕ್ಟೋಬರ್ ರಿಂದ ನವ-ದೆಹಲಿ – ಬೆಳಗಾವಿ – ನವ-ದೆಹಲಿ ನಡುವೆ ಇಂಡಿಗೋ ವಿಮಾನ ಸಂಸ್ಥೆ ತನ್ನ ದಿನನಿತ್ಯದ ಸಂಚಾರ ಪುನರಾರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.
ಈ ಮೊದಲು ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರಸ್ತಾಪಿತ ಮಾರ್ಗದಲ್ಲಿ ದಿನನಿತ್ಯದ ಸೇವೆ ಒದಗಿಸುತ್ತಿದ್ದು, ಕೆಲವು ತಿಂಗಳುಗಳ ಹಿಂದಷ್ಟೆ ಈ ಸೇವೆಯನ್ನು ಸಪ್ತಾಹದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಸಿಮೀತಗೊಳಿಸಿತ್ತು, ಈ ಕುರಿತು ಇಲ್ಲಿನ ಉದ್ಯಮದಾರರಿಗೆ, ವ್ಯಾಪಾರಸ್ಥರಿಗೆ, ಡಾಕ್ಟರಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿ, ಕೂಡಲೆ ಈ ಮೊದಲಿನಂತೆ ಎಲ್ಲ ದಿನಗಳಲ್ಲಿ ವಿಮಾನ ಸೇವೆಯನ್ನು ಒದಗಿಸಲು ಕ್ರಮ ಜರುಗಿಸಲು ಕೋರಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ರಾಮಮೋಹನ ನಾಯ್ಡು ಇವರನ್ನು ಖುದ್ದಾಗಿ ಭೇಟಿ ಮಾಡಿದರು.
ಮನವಿಗೆ ಮನ್ನಣೆ ನೀಡಿ ಇಂಡಿಗೋ ವಿಮಾನ ಸಂಸ್ಥೆಯು ಅಕ್ಟೋಬರ ರಿಂದ ನವ-ದೆಹಲಿ-ಬೆಳಗಾವಿ-ನವ-ದೆಹಲಿ ನಡುವೆ ಪ್ರತಿ ದಿನ ದೆಹಲಿಯಿಂದ ಬೆಳ್ಳಿಗ್ಗೆ : 06.15 ಕ್ಕೆ ಹೊರಟು ಬೆಳಗಾವಿಯನ್ನು ಬೆಳ್ಳಗ್ಗೆ :08.40 ಕ್ಕೆ ತಲುಪಿ, ತದನಂತರ ಅದೆ ದಿನ ಬೆಳ್ಳಿಗ್ಗೆ : 09.10 ಕ್ಕೆ ಬೆಳಗಾವಿಯಿಂದ ಹೊರಟು ದೆಹಲಿಯನ್ನು 11.40 ಕ್ಕೆ ತಲುಪಲಿದೆ.
ಅದರಂತೆ ಇಂಡಿಗೋ ಸಂಸ್ಥೆ ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಕೇವಲ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರ ಬೆಳ್ಳಿಗ್ಗೆ ಹಾಗೂ ಮಂಗಳವಾರ, ಗುರುವಾರ ಹಾಗೂ ಶನಿವಾರ ದಂದು ಸಾಯಂಕಾಲ ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಇದನ್ನು ಸಹ ಈ ಮೊದಲಿನಂತೆ ದಿನನಿತ್ಯದ ಸೇವೆ ಒದಗಿಸಸುವ ಬಗ್ಗೆಯೂ ಸಹ ಇಂಡಿಗೋ ಸಂಸ್ಥೆ ಅಧಿಕಾರಿಗಳು ಸಂಸದರಿಗೆ ಭರವಸೆಯನ್ನು ನೀಡಿರುವ ಬಗ್ಗೆ ಸಂಸದರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


