Belagavi NewsBelgaum NewsCrimeKannada NewsKarnataka News

*ಪಟಾಕಿ ಸದ್ದಿಗೆ ಕಾಲುವೆಗೆ ಬಿದ್ದು 80 ಕುರಿಗಳ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರಾವಣ ಮಾಸದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕುರಿಗಾಹಿಗಳು ಒಟ್ಟಾಗಿ ಸೇರಿ ಶ್ರೀ ಕುರಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದರು. ಈ ವೇಳೆ ಪಟಾಕಿ ಸದ್ದಿಗೆ ಕಾಲುವೆಗೆ ಕುರಿಗಳು ಬಿದ್ದು ಸಾವನ್ನಪ್ಪಿವೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 20 ರೂ. ಲಕ್ಷ ಮೌಲ್ಯದ 75 ಕುರಿಗಳು ಹಾಗೂ 5 ಕುರಿಮರಿಗಳು ಮೃತಪಟ್ಟಿವೆ ಎನ್ನಲಾಗಿದೆ.

Home add -Advt

ಕುರಿಗಾಹಿಗಳ ಕುಟುಂಬಗಳಿಗೆ ಅಪಾರ ನಷ್ಟ ಉಂಟಾಗಿದೆ. ಜಾತ್ರೆಯ ಸಂಭ್ರಮದ ನಡುವೆ ನಡೆದ ಈ ಹೃದಯವಿದ್ರಾವಕ ಘಟನೆ ಕುರಿಗಾಹಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.

ಘಟನೆ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟಾಕಿ ಸಿಡಿಸಿದ ಪರಿಣಾಮವೇ ಕುರಿಗಳು ಕಾಲುವೆಗೆ ಬಿದ್ದಿವೆಯೇ ಅಥವಾ ಘಟನೆಯ ಹಿಂದೆ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಪೊಲೀಸ್ ತನಿಖೆಯ ಬಳಿಕವೇ ಸಂಪೂರ್ಣವಾಗಿ ತಿಳಿದುಬರಬೇಕಿದೆ. 

ಮೃತ ಕುರಿಗಳ ನಿಖರ ಸಂಖ್ಯೆ ಹಾಗೂ ಸಂಭವಿಸಿದ ನಷ್ಟದ ಕುರಿತು ಅಧಿಕಾರಿಗಳ ಪರಿಶೀಲನೆ ಮತ್ತು ಪೊಲೀಸ್ ತನಿಖೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

Related Articles

Back to top button