Belagavi NewsBelgaum NewsLatest

*ಬೆಳಗಾವಿಯಲ್ಲಿ ಪ್ರತಿಭಟಿಸಿದ ಮಾಜಿ ಸೈನಿಕರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮಾಜಿ ಸೈನಿಕರು ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಇಂದು ಬೆಳಗಾವಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾಜಿ ಸೈನಿಕರ ಸಂಘಟನೆಗಳ ಮಹಾ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪೂಜಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮಾಜಿ ಸೈನಿಕರು, ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Home add -Advt

ರಾಜ್ಯ ಸರ್ಕಾರಿ ನೌಕರಿಯಲ್ಲಿ 10ರಷ್ಟು ಮೀಸಲಾತಿ ಕೊಡಬೇಕು, ಬೆಳಗಾವಿಯಲ್ಲಿ ಸೈನಿಕರ ಭವನ ನಿರ್ಮಾಣಕ್ಕೆ ಜಾಗೆ ಕೊಡಬೇಕು , ಪೊಲೀಸ್ ಕಾನಸ್ಟೆಬಲ್  ನೇಮಕಾತಿಯಲ್ಲಿ 179ಜನರಿಗೆ ಅವಕಾಶ ಕೊಟ್ಟಿದ್ದಾರೆ, ಶಿಕ್ಷಕರ ನೇಮಕಾತಿಯಲ್ಲಿ ಮಾಜಿ ಸೈನಿಕರಿಗೆ ಮೀಸಲಾತಿ ಪ್ರಕಟಿಸಿಲ್ಲ ಎಂದರು.

ಕಡ್ಡಾಯ ಕನಿಷ್ಠ ಅಂಕಗಳಿಂದ ಮಾಜಿ ಸೈ‌ನಿಕರಿಗೆ ಅನ್ಯಾಯ ಆಗುತ್ತೆ, ಟೋಲ್ ಪ್ಲಾಜಾ ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಮಾಜಿ ಸೈನಿಕರಿಗೆ, ವೀರನಾರಿಯರಿಗೆ ವಿನಾಯಿತಿ ನೀಡಬೇಕು, ಮಾಜಿ ಸೈನಿಕರಿಗೆ ಭೂಮಿ,ನಿವೇಶನ ಹಂಚಿಕೆ ಗೊಂದಲ ತಪ್ಪಿಸಬೇಕು, ಮಾಜಿ ಸೈನಿಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿದರು.

Related Articles

Back to top button