*ಪ್ರವಾಸೋದ್ಯಮಕ್ಕೆ ಹೂಡಿಕೆಯ ಉತ್ತೇಜನ*: *1,080.97 ಕೋಟಿ ಮೊತ್ತದ 78 ಯೋಜನೆಗಳಿಗೆ ಒಪ್ಪಿಗೆ: ಸಚಿವ ಕೆ.ಜೆ. ಜಾರ್ಜ್*

ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಖಾಸಗಿ ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿಯ 6ನೇ ಅಧಿಕಾರಯುಕ್ತ (ಎಂಪವರ್ಡ್) ಸಮಿತಿ ಸಭೆಯಲ್ಲಿ ರಾಜ್ಯದ ಹೋಟೆಲ್ ವಲಯದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಪ್ರವಾಸೋದ್ಯಮ ನೀತಿಯಡಿ 8 ಪ್ರೀಮಿಯಂ ಹಾಗೂ 10 ಬಜೆಟ್ ಹೋಟೆಲ್ಗಳು ಸೇರಿದಂತೆ ಒಟ್ಟು 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಮೂಲಕ ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ ₹314.93 ಕೋಟಿ ಹೂಡಿಕೆಯಾಗಿದ್ದು, 655 ಹೋಟೆಲ್ ಕೊಠಡಿಗಳು ಸೇರ್ಪಡೆಯಾಗಿವೆ ಹಾಗೂ 1,542 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಯೋಜನೆಗಳಿಗೆ ಅಂದಾಜು ₹47.23 ಕೋಟಿ ಸಹಾಯಧನವನ್ನು ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
2024–29ರ ನೀತಿಯಡಿ ₹1,080.97 ಕೋಟಿ ಹೂಡಿಕೆ
ಸಭೆಯಲ್ಲಿ 2024–29ರ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ 35 ಪ್ರೀಮಿಯಂ ಹಾಗೂ 43 ಬಜೆಟ್ ಹೋಟೆಲ್ಗಳು ಸೇರಿದಂತೆ ಒಟ್ಟು 78 ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲಾಯಿತು.
ಈ ಯೋಜನೆಗಳು ಅನುಷ್ಠಾನಗೊಂಡ ಬಳಿಕ ರಾಜ್ಯದಲ್ಲಿ ₹1,080.97 ಕೋಟಿ ಹೂಡಿಕೆಯಾಗಲಿದ್ದು, 3,424 ಹೊಸ ಹೋಟೆಲ್ ಕೊಠಡಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ 3,707 ಉದ್ಯೋಗಗಳು ಸೃಷ್ಟಿಯಾಗಲಿವೆ.
ಹೊಸ ಹೋಟೆಲ್ ಯೋಜನೆಗಳಿಂದ ಪ್ರವಾಸಿ ತಾಣಗಳಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಹೆಚ್ಚುವುದರ ಜೊತೆಗೆ, ಖಾಸಗಿ ಹೂಡಿಕೆ, ಸ್ಥಳೀಯ ಉದ್ಯೋಗ ಹಾಗೂ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.
“ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿದ್ದು, ಅದಕ್ಕೆ ಪೂರಕವಾಗಿ ಗುಣಮಟ್ಟದ ವಸತಿ ಮತ್ತು ಆತಿಥ್ಯ ಮೂಲಸೌಕರ್ಯವನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ಹೊಸ ಪ್ರವಾಸೋದ್ಯಮ ನೀತಿಯಡಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದರ ಜೊತೆಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ಯೋಗ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ₹1,080 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ 78 ಹೊಸ ಹೋಟೆಲ್ ಯೋಜನೆಗಳಿಗೆ ದೊರೆತಿರುವ ತಾತ್ವಿಕ ಅನುಮೋದನೆ ರಾಜ್ಯದ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತಮ ಸೂಚನೆಯಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು ಕೆ.ಜೆ. ಜಾರ್ಜ್ ತಿಳಿಸಿದರು.
“ಹೊಸ ಹೋಟೆಲ್ ಯೋಜನೆಗಳ ಮೂಲಕ ಕೇವಲ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಪ್ರವಾಸಿಗರಿಗೆ ವಿವಿಧ ಬೆಲೆ ಶ್ರೇಣಿಗಳಲ್ಲಿ ಉತ್ತಮ ವಸತಿ ಆಯ್ಕೆಗಳನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. 35 ಪ್ರೀಮಿಯಂ ಮತ್ತು 43 ಬಜೆಟ್ ಹೋಟೆಲ್ ಯೋಜನೆಗಳು ಅನುಷ್ಠಾನಗೊಂಡಾಗ 3,424 ಕೊಠಡಿಗಳು ಹಾಗೂ 3,707 ಉದ್ಯೋಗಗಳು ಸೇರ್ಪಡೆಯಾಗಲಿವೆ. ಯೋಜನೆಗಳ ಅನುಷ್ಠಾನವನ್ನು ನಿಗದಿತ ಅವಧಿಯಲ್ಲಿ ಮುಂದುವರಿಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ಅವರು ತಿಳಿಸಿದರು.
Boost to Tourism Investment in Karnataka: Subsidy Approved for 18 Hotel Projects Worth ₹314.93 Crore; In-Principle Approval for 78 Projects Worth ₹1,080.97 Crore: Minister K.J. George
In a major push to strengthen tourism infrastructure and encourage greater private investment in Karnataka, several important hotel projects were approved at the 6th Empowered Committee Meeting under the Karnataka Tourism Policy, chaired by Energy and Tourism Minister Shri K.J. George.
Under the Tourism Policy, approval was granted to 18 projects comprising 8 premium and 10 budget hotels, These projects have brought in an investment of ₹314.93 crore, added 655 hotel rooms and generated 1,542 jobs. An estimated ₹47.23 crore in subsidy for these projects was approved at today’s meeting.
₹1,080.97 Crore Investment Under Tourism Policy 2024–29
At the meeting, in-principle approval was also granted to 78 projects comprising 35 premium and 43 budget hotelsunder the Karnataka Tourism Policy 2024–29.
Once implemented, these projects are expected to attract an investment of ₹1,080.97 crore, add 3,424 new hotel rooms and generate 3,707 jobs across the State.
The new hotel projects are expected to improve the availability of quality accommodation at tourism destinations while giving a further boost to private investment, local employment and tourism-led economic activity.
“Karnataka has immense tourism potential, and expanding quality accommodation and hospitality infrastructure is one of our key priorities. Through the new Tourism Policy, we aim to encourage private investment while creating employment and strengthening local economic activity across different parts of the State. The in-principle approval for 78 new hotel projects involving an investment of more than ₹1,080 crore is a positive indicator of the growth potential of Karnataka’s tourism sector.”
“The objective of these new hotel projects is not merely to increase room inventory, but also to provide tourists with better accommodation options across different price segments. Once the 35 premium and 43 budget hotel projects are implemented, they are expected to add 3,424 rooms and generate 3,707 jobs. The Department will take the necessary steps to facilitate timely implementation of these projects.”

