Kannada NewsKarnataka NewsLatest

*ನಿಮ್ಮ ಹೆಸರಿಗೂ ಬಂತು ಬಿರುದು Tr.*: *ಹೊರಬಿತ್ತು ಸರಕಾದ ಅಧಿಕೃತ ಆದೇಶ*


: ಶಿಕ್ಷಕರ ದಿನಾಚರಣೆಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್: ಇನ್ನುಮುಂದೆ ಶಿಕ್ಷಕರ ಹೆಸರಿನ ಮುಂದೆ ‘Tr.’ ಬಳಸಲು ಅನುಮತಿ!

Home add -Advt

ಪ್ರಗತಿವಾಹಿನಿ ಸುದ್ದಿ/

ಬೆಂಗಳೂರು : ರಾಜ್ಯದ 4.5 ಲಕ್ಷ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ (ಸೆ.5, 2026) ಅಂಗವಾಗಿ ಕರ್ನಾಟಕ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಇನ್ನುಮುಂದೆ ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (Teacher – ಶಿಕ್ಷಕ) ಎಂಬ ಪೂರ್ವ ಪ್ರತ್ಯಯ (Title) ಬಳಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ.

ಸರ್ಕಾರಿ ಆದೇಶ ಸಂಖ್ಯೆ: 216 ಎಸ್‌ಎಲ್‌ಬಿ 2026, ದಿನಾಂಕ: 05.09.2026 ರಂದು ಈ ಮಹತ್ವದ ಆದೇಶ ಹೊರಬಿದ್ದಿದೆ.

ಆದೇಶದಲ್ಲಿ ಏನಿದೆ?

“ಉತ್ತಮ ಸಮಾಜ ನಿರ್ಮಾಣದಲ್ಲಿ ಮತ್ತು ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನದ ಪ್ರಸಾರ-ಅರ್ಚನೆ, ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸುವ ಮೂಲಕ ಅವರ ಭವಿಷ್ಯದ ಬಗೆಗೆ ಅಡಿಪಾಯ ಹಾಕುತ್ತಾರೆ. ರಾಜ್ಯವನ್ನು ನಿರ್ಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಒಬ್ಬ ಶಿಕ್ಷಕ ನಿರ್ಮಿಸುತ್ತಾನೆ” ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

“ಇದು ಕೇವಲ ಎರಡು ಅಕ್ಷರಗಳಲ್ಲವೇ, ಇದು ಅವರ ಜೀವನಾವಧಿಯ ಸೇವೆಯನ್ನು ಪ್ರತಿನಿಧಿಸುತ್ತದೆ. Tr. ಎಂಬುದು ಶೀರ್ಷಿಕೆಗಿಂತ ಹೆಚ್ಚಿನದಾಗಿದ್ದು, ಇದು ಇತರರ ಜೀವನವನ್ನು ರೂಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಸಮಾಜವು ನೀಡುವ ಮನ್ನಣೆಯಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಮಾಜ ನಿರ್ಮಾಣ ಮತ್ತು ಪ್ರಗತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೌರವಪೂರ್ವಕವಾಗಿ ಎಲ್ಲಾ ಶಿಕ್ಷಕರಿಗೆ ಹೆಸರಿನ ಮುಂದೆ Tr. (Teacher) ಎಂಬ ಶೀರ್ಷಿಕೆ (Title) ಪೂರ್ವಪ್ರತ್ಯಯವನ್ನು ಇನ್ನು ಮುಂದೆ ಬಳಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಇನ್ನುಮುಂದೆ ಹೀಗೆ ಬರೆಯಬಹುದು:
ಉದಾ: Tr. ರಮೇಶ ಕುಮಾರ್, Tr. ಶುಭಾ ರೀತಿಯಲ್ಲಿ ಡಾಕ್ಟರ್ (Dr.), ಇಂಜಿನಿಯರ್ (Er.) ಮಾದರಿಯಲ್ಲಿ ಶಿಕ್ಷಕರೂ ತಮ್ಮ ಹೆಸರಿನ ಮುಂದೆ Tr. ಎಂದು ಬಳಸಬಹುದು.

ಈ ಆದೇಶಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರೌಢ) ಎಸ್. ಪ್ರಕಾಶ್ ಅವರು ಸಹಿ ಹಾಕಿದ್ದು, ರಾಜ್ಯಪಾಲರ ಅಪ್ಪಣೆ ಮೇರೆಗೆ ಹೊರಡಿಸಲಾಗಿದೆ.


Related Articles

Back to top button