Belagavi NewsBelgaum NewsCrimeKarnataka NewsLatest

*ಗೋಕಾಕದ ಕುಖ್ಯಾತ ರೌಡಿ ಗೂಂಡಾ ಕಾಯ್ದೆಯಡಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಗೋಕಾಕ: ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕುಖ್ಯಾತ ರೌಡಿ ವಿಶಾಲ ತಾಯಿ ಸರೋಜಾ ಮೇಸ್ತ್ರಿ (29) ನನ್ನು ಗೋಕಾಕ ಶಹರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಆರೋಪಿ ಮೇಲೆ 10 ಗಂಭೀರ ಪ್ರಕರಣ:

ಆದಿಜಾಂಬವ ನಗರದ ನಿವಾಸಿಯಾದ ಈತನ ಮೇಲೆ ಗೋಕಾಕ ಶಹರ ಠಾಣೆಯಲ್ಲಿ 01-ಕೊಲೆ ಪ್ರಕರಣ, 03-ಕೊಲೆಗೆ ಯತ್ನ, 01-ಆಯುಧ ಕಾಯ್ದೆ, 01-ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು 03-ಇತರೆ ಪ್ರಕರಣಗಳು ಹಾಗೂ ಗೋಕಾಕ ಗ್ರಾಮೀಣ ಠಾಣೆಯಲ್ಲಿ 01-ಆಯುಧ ಕಾಯ್ದೆ ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತನ ಸಮಾಜ ಘಾತುಕ ಕೃತ್ಯಗಳನ್ನು ನಿಯಂತ್ರಿಸಲು 2020 ರಲ್ಲಿಯೇ ರೌಡಿಶೀಟ್ ತೆರೆಯಲಾಗಿತ್ತು.

ಬೆಳಗಾವಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ:

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ (ಭಾ.ಪೊ.ಸೇ) ಹಾಗೂ ಗೋಕಾಕ ಉಪವಿಭಾಗದ ಡಿವೈಎಸ್ಪಿ ಶ್ರೀ ರಾಮಗೊಂಡ ಬಿ ಬಸರಗಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಆರೋಪಿಯ ವಿರುದ್ಧ ಸ್ಥಾನ ಭದ್ರತೆಯ (Detention) ಆದೇಶ ಹೊರಡಿಸಿ, ಅತ್ಯಂತ ಯಶಸ್ವಿಯಾಗಿ ಬಂಧಿಸಲಾಗಿದೆ. ಪ್ರಸ್ತುತ ಆರೋಪಿಯನ್ನು ದಿನಾಂಕ: 27-07-2026 ರಿಂದ ಒಂದು ವರ್ಷದ ಅವಧಿಯವರೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಈ ಸಂದರ್ಭದಲ್ಲಿ ಗೋಕಾಕ ಡಿವೈಎಸ್ಪಿ ಶ್ರೀ ರವಿ ಡಿ ನಾಯ್ಕ, ಪ್ರಭಾರ ಸಿಪಿಐ ಗೋಕಾಕ ಶ್ರೀಶೈಲ್ ಬ್ಯಾಕೋಡ, ಪಿಎಸ್ಐ (ಕಾ&ಸು) ಶ್ರೀ ಕಿರಣ ಮೋಹಿತೆ, ಗೋಕಾಕ ಶಹರ ಠಾಣೆ ಮತ್ತು ಸಿಬ್ಬಂದಿಗಳಾದ ಶಾನೂರ ಹುನೂರ, ಕೆ.ಎನ್.ಇಳಿಗೇರ, ಮಂಜುನಾಥ ಹುಚಗೌಡರ ಇದ್ದರು. ಅಲ್ಲದೆ ಇತನ ಸಹಚರರ ಮೇಲೆ ಕೂಡ ತೀವ್ರ ನಿಗಾ ವಹಿಸಿದ್ದು ಇರುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button