*ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹುಟ್ಟಿದ ಎರಡೇ ದಿನಕ್ಕೆ ನಾಲ್ಕು ಸಿಂಹದ ಮರಿಗಳು ಸಾವು*

ಪ್ರಗತಿವಾಹಿನಿ ಸುದ್ದಿ: ನಾಲ್ಕು ಸಿಂಹದ ಮರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನಡೆದಿದೆ.
ಅಳವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನು ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿತ್ತು. ಈ ಪೈಕಿ 5 ವರ್ಷದ ಏಷ್ಯಾಟಿಕ್ ಸಿಂಹ ‘ಸಾರಾ’ ಹೆಸರಿನ ಸಿಂಹಿಣಿ ಇತ್ತೀಚಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಈಗ ನಾಲ್ಕೂ ಮರಿಗಳು ಮೃತಪಟ್ಟಿದ್ದು, ಮೃಗಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ.
ಮರಿಗಳಿಗೆ ತಾಯಿ ಸಾರಾ ಸರಿಯಾಗಿ ಹಾಲು ನೀಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಮರಿಗಳು ಮೃತಪಟ್ಟಿವೆ ಎನ್ನುವುದು ಮೃಗಾಲಯದ ಅಧಿಕಾರಿಗಳ ವಾದ. ಹೇಳುತ್ತಿದ್ದಾರೆ.
2025 ರಲ್ಲಿ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ತರಲಾಗಿತ್ತು. ಒಂದೇ ವರ್ಷದಲ್ಲಿ ಸಾರಾ ಸಿಂಹ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಹುಟ್ಟಿದ ಎರಡೇ ದಿನಕ್ಕೆ ನಾಲ್ಕು ಮರಿಗಳು ಮೃತಪಟ್ಟಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



