*ಸಂಚಾರಿ ನಿಯಮ ಉಲ್ಲಂಘನೆಗೆ ಇನ್ಮುಂದೆ ತೆರಬೇಕಾಗುತ್ತೆ ಭಾರೀ ದಂಡ: ಯಾವ ನಿಯಮ ಉಲ್ಲಂಘನೆಗೆ ಎಷ್ಟು ಫೈನ್? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ದಂಡದ ಮೊತ್ತವನ್ನು ಅತಿ ಹೆಚ್ಚು ಏರಿಸಲು ಮುಂದಾಗಿದೆ.
ಹೌದು. ಸರ್ಕರ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ನಡುವೆ ಚರ್ಚೆ ನಡೆದಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಚಾರ ನಿಯಮಗಳ ಉಲ್ಲಂಘನೆಯೂ ಪ್ರಮುಖ ಕಾರಣವಾಗಿರುವ ಹಿನ್ನೆಲೆಯಲ್ಲಿ ದಂಡ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ.
ಸಂಚಾರಿ ನಿಯಮ ಉಲ್ಲಂಘನೆಯು ಪ್ರಮುಖವಾಗಿ ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಫುಟ್‌ಪಾತ್ ಮೇಲೆ ಚಾಲನೆ, ಅನಧಿಕೃತ ಪಾರ್ಕಿಂಗ್, ನೋ ಪಾರ್ಕಿಂಗ್ ಉಲ್ಲಂಘನೆ, ಸಿಗ್ನಲ್ ಜಂಪ್ ಹಾಗೂ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಯನ್ನು ಒಳಗೊಂಡಿದ್ದು, ದಂಡ ಹೆಚ್ಚಿಸಲು ನಿರ್ಧರಿಸಲಾಗಿದೆ.
ಟ್ರಾಫಿಕ್ ಫೈನ್ ಬಗ್ಗೆ ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ? ಪ್ರಸ್ತಾವಿತ ದಂಡದ ವಿವರ ಈ ಕೆಳಗಿನಂತಿದೆ.
ಫುಟ್‌ಪಾತ್ ಪಾರ್ಕಿಂಗ್
ಪ್ರಸ್ತುತ ಮೊದಲ ಉಲ್ಲಂಘನೆಗೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಫುಟ್‌ಪಾತ್ ಮೇಲೆ ಚಾಲನೆ
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಅನಧಿಕೃತ ಪಾರ್ಕಿಂಗ್
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ನೋ ಪಾರ್ಕಿಂಗ್ ಉಲ್ಲಂಘನೆ
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಸಿಗ್ನಲ್ ಜಂಪ್
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅಡ್ಡಿ
ಪ್ರಸ್ತುತ ಮೊದಲ ಉಲ್ಲಂಘನೆ: ₹500
ಮರುಕಳಿಸಿದರೆ: ₹1,000
ಮೊದಲ ಉಲ್ಲಂಘನೆಗೆ ಪ್ರಸ್ತಾವಿತ ದಂಡ: ₹3,000
ಮರುಕಳಿಸಿದರೆ: ₹5,000
ಅಪಾಯಕಾರಿ ಚಾಲನೆಗೂ ದಂಡ ಹೆಚ್ಚಳ ಪ್ರಸ್ತಾವನೆ
ದ್ವಿಚಕ್ರ ವಾಹನ
ಪ್ರಸ್ತುತ ಮೊದಲ ತಪ್ಪಿಗೆ: ₹1,500
ಪ್ರಸ್ತಾವಿತ ದಂಡ: ₹3,000
ಲಘು ಮೋಟಾರು ವಾಹನ
ಪ್ರಸ್ತುತ ಮೊದಲ ತಪ್ಪಿಗೆ: ₹3,000
ಪ್ರಸ್ತಾವಿತ ದಂಡ: ₹5,000
ಇತರ / ಭಾರೀ ವಾಹನಗಳು
ಪ್ರಸ್ತುತ ಮೊದಲ ತಪ್ಪಿಗೆ: ₹5,000
ಪ್ರಸ್ತಾವಿತ ದಂಡ: ₹10,000
ಸಂಚಾರ ನಿಯಮ ಉಲ್ಲಂಘನೆಗಳಿಗೆ ಹೆಚ್ಚಿನ ದಂಡ ವಿಧಿಸುವ ಪ್ರಸ್ತಾವನೆ ಕುರಿತು ಈಗಾಗಲೇ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಅನುಷ್ಠಾನದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


