Kannada NewsKarnataka NewsLatest

*ನಾಪತ್ತೆಯಾಗಿದ್ದ 9ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯಿಂದ ನಾಪತ್ತೆಯಾಗಿದ್ದ ಪುಷ್ಪಾ ಮಹಲಿಂಗಪ್ಪ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಚನ್ನಗಿರಿಯಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.

ದಿಗಂತ್ ಎಂಬ 9ನೇ ತರಗತಿ ವಿದ್ಯಾರ್ಥಿ ಶಾಅಲೆಯಲ್ಲಿ ಇತರ ವಿದ್ಯಾರ್ಥಿಗಳ ರ್ಯಾಗಿಂಗ್ ಗೆ ಹೆದರಿ ಏಕಾಏಕಿ ನಾಪತ್ತೆಯಾಗಿದ್ದ. ಪೋಷ್ಕರು ಕಂಗಾಲಾಗಿ ಕಣ್ಣೀರಿಟ್ಟಿದ್ದರು.

ಇದೀಗ ಚೆನ್ನಗಿರಿಯಲ್ಲಿ ಪತ್ತೆಯಾಗಿದ್ದು, ಬಸ್ ಏಜೆಂಟರೊಬ್ಬರ ಫೋನ್‌ನಿಂದ ತಾಯಿಗೆ ಕರೆ ಮಾಡಿ ತಾನು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ ನಂತರ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಾಲೆಯೊಳಗಿನ ರಾಗಿಂಗ್ ಮತ್ತು ಸಹಪಾಠಿಗಳಿಂದ ನಿರಂತರ ಕಿರುಕುಳದಿಂದಾಗಿ ಮನನೊಂದ ದಿಗಂತ್ ನಾಪತ್ತೆಯಾಗಿದ್ದ. ಕಳೆದ 15 ದಿನಗಳ ಹಿಂದೆ ದಿಗಂತ್ ಮೇಲೆ ಹಲ್ಲೆ ನಡೆದಿತ್ತು. ಆತನ , ಬಾಯಿ ಮತ್ತು ಮೂಗಿನಿಂದ ರಕ್ತ ಬಂದಿತ್ತು ಎಂದು ಆರೋಪಿಸಲಾಗಿದೆ. ಇದೇ ಕಾರಣದಿಂದ ನಿರಂತರ ಕಿರುಕುಳಕ್ಕೆ ಬೇಸತ್ತು ದಿಗಂತ್ ಶಾಲೆಯಿಂದ ಹೊರ ಹೋಗಿದ್ದಾಗಿ ಹೇಳಲಾಗಿದೆ.

ಇದು ಪುಷ್ಪಾ ಮಹಲಿಂಗಪ್ಪ ಶಾಲೆಯಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಸದ್ಯ ಜಿಲ್ಲಾಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button