Kannada NewsKarnataka NewsLatest

*ದರ್ಶನ್‌ ಪರ ವಕೀಲರ ಅರ್ಜಿ ಅಂಗೀಕಾರ*: *ಪ್ರದೋಷ್‌ ಎಸ್ಕಾರ್ಟ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ!*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್‌ಗೆ ನೀಡಲಾಗುತ್ತಿದ್ದ ಎಸ್ಕಾರ್ಟ್ ಹಾಗೂ ಭದ್ರತೆ ವಿಚಾರವಾಗಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ಪ್ರದೋಷ್‌ ಜೊತೆ ಕೆಲವರು ಮಾತುಕತೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ, ಸಾಕ್ಷಿಯನ್ನು ಇತರರ ಸಂಪರ್ಕದಿಂದ ದೂರವಿಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಇದೀಗ ಈ ಅರ್ಜಿಯ ವಿಚಾರಣೆ ನಡೆಸಿದ 59ನೇ ಸೆಷನ್ಸ್ ಕೋರ್ಟ್, ಪ್ರದೋಷ್‌ರನ್ನು ಇನ್ನು ಮುಂದೆ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್‌ನಲ್ಲಿ ಕರೆತರುವ ಅಗತ್ಯವಿಲ್ಲ ಎಂದು ಸೂಚಿಸಿದೆ.

ಇದೇ ವೇಳೆ ಮಾಫಿ ಸಾಕ್ಷಿ ಪ್ರದೋಷ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ಸಿಎಆರ್ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಪ್ರದೋಷ್‌ರನ್ನು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಜವಾಬ್ದಾರಿಯನ್ನು ಸಿಎಆರ್ ಡಿಸಿಪಿಗೆ ವಹಿಸಲಾಗಿದೆ.

ಪ್ರದೋಷ್‌ನನ್ನು ಸೂಕ್ತ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಬೇಕು. ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಪ್ರದೋಷ್‌ರ ಭದ್ರತೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಆರ್ ಡಿಸಿಪಿಗೆ 59ನೇ ಸೆಷನ್ಸ್ ಕೋರ್ಟ್ ನಿರ್ದೇಶನ ನೀಡಿದೆ.

*ಕಾಂತಾರ ಬಳಿಕ ರಿಷಬ್ ಶೆಟ್ಟಿ-ಹೊಂಬಾಳೆ ನಡುವೆ ಬಿರುಕು?* *ಪೋಸ್ಟ್‌ಗಳಿಂದಲೇ ಶುರುವಾಯಿತೇ ಕೋಲ್ಡ್ ವಾರ್* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button