Kannada NewsLatestWorld

* ರಷ್ಯಾ ಡ್ರೋನ್ ದಾಳಿ: ಭಾರತದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸ*

ಪ್ರಗತಿವಾಹಿನಿ ಸುದ್ದಿ: ಉಕ್ರೇನ್‌ನ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಭಾರತದ ಬೃಹತ್ ಔಷಧ ತಯಾರಿಕಾ ಘಟಕ ಧ್ವಂಸಗೊಂಡಿದ್ದು, ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಸುಮಿ ಪ್ರದೇಶದಲ್ಲಿ ರಷ್ಯಾ ದಾಳಿ ನಡೆಸಿದೆ. ಈ ವೇಳೆ ಭಾರತದ ಕುಸುಮ್ ಗ್ರೂಪ್‌ಗೆ ಸೇರಿದ ಬೃಹತ್ ಔಷಧ ಘಟಕ ಧ್ವಂಸವಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ರಷ್ಯಾ ಡ್ರೋನ್ ದಾಳಿಯಿಂದ ಫಾರ್ಮಾ ಘಟಕದ ಮುಖ್ಯ ಕಟ್ಟಡ ಬಹುತೇಕ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಮೃತಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್‌ಗಳು ದಾಳಿ ನಡೆಸಿದ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ಹೊಗೆ ಮೇಲಕ್ಕೆ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕುಸುಮ್ ಗ್ರೂಪ್ 1994ರಲ್ಲಿ ಉಕ್ರೇನ್‌ಗೆ ಭಾರತೀಯ ಔಷಧಗಳನ್ನು ರಫ್ತು ಮಾಡುವ ವಿತರಕ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಭಾರತೀಯ ಮೂಲದ ರಾಜೀವ್ ಗುಪ್ತಾ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.


2002ರಲ್ಲಿ ಇತರ ಕಂಪನಿಗಳ ಉತ್ಪನ್ನಗಳ ವಿತರಣೆಯನ್ನು ನಿಲ್ಲಿಸಿದ ಸಂಸ್ಥೆ, ತನ್ನದೇ ಬ್ರ‍್ಯಾಂಡ್‌ಗಳ ಔಷಧಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಆರಂಭಿಸಿತು. ಬಳಿಕ ಔಷಧ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿತು. 2007ರಲ್ಲಿ ಭಾರತದಲ್ಲಿ ಔಷಧ ತಯಾರಿಕಾ ಘಟಕವನ್ನು ಆರಂಭಿಸಿದ ಸಂಸ್ಥೆ, 2009ರಲ್ಲಿ ಉಕ್ರೇನ್‌ನ ಸುಮಿಯಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಿತು. ನಂತರ ಭಾರತದಲ್ಲಿ ಇನ್ನೂ ಎರಡು ತಯಾರಿಕಾ ಘಟಕಗಳನ್ನು ಆರಂಭಿಸಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button