Kannada NewsKarnataka News

*ಪಶ್ಚಿಮಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ*: *ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಅಕ್ಟೋಬರ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ*

**Save Western Ghats – Massive Protest at Freedom Park Bengaluru on Oct 10 Against Bedti Varada River Linking

*ಪಶ್ಚಿಮಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ: ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಅಕ್ಟೋಬರ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ*

*ಬೆಂಗಳೂರು:* ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ (ಗಂಗಾವಳಿ)-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ, *ಅಕ್ಟೋಬರ್ 10, 2026 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಕಾರ್ಯಕ್ರಮ* ಹಮ್ಮಿಕೊಳ್ಳಲಾಗಿದೆ.

*ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಶಿರಸಿ (ಉ.ಕ.)* ಹಾಗೂ *ಧರಣಿ ಆಯೋಜನಾ ಬಳಗ, ಬೆಂಗಳೂರು* ಇವರ ನೇತೃತ್ವದಲ್ಲಿ ಈ ಶಾಂತಿಯುತ ಹೋರಾಟ ನಡೆಯಲಿದೆ. ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಪರಮಪೂಜ್ಯ ಗುರುಗಳು, ಶ್ರೀಮನ್ಮಡಿವಾಳ ಮಠದ ಗುರುಗಳು, ರಾಮಚಂದ್ರಾಪುರ ಮಠದ ಗುರುಗಳು, ಜಿಲ್ಲೆಯ ಎಲ್ಲಾ ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರು ಆಶೀರ್ವಾದ ಪೂರ್ವಕ ಬೆಂಬಲ ನೀಡಿದ್ದಾರೆ.

*ಹೋರಾಟದ ಹಿನ್ನೆಲೆ:*
ಉತ್ತರ ಕನ್ನಡದ ಜನಜೀವನ, ಪರಿಸರ ಹಾಗೂ ಜನವಸತಿಗೆ ಮಾರಕವಾಗಿರುವ ಈ ಯೋಜನೆಗಳಿಂದ ಮಲೆನಾಡು-ಕರಾವಳಿ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬೇಡ್ತಿ-ವರದಾ ನದಿ ತಿರುವು ಯೋಜನೆಯ DPR ಹಂತ ತಲುಪಿದ್ದು, ಯೋಜನೆ ಸ್ಥಳದ ಸಮೀಕ್ಷೆ ಮಾಡಲು ಖಾಸಗಿ ಕಂಪನಿಗೊಂದು ಟೆಂಡರ್ ನೀಡಲಾಗಿದೆ. ಇದು ಉತ್ತರ ಕನ್ನಡದ ಜನರ ಬದುಕಿನ ಅಳಿವು-ಉಳಿವಿನ ಪ್ರಶ್ನೆ ಎಂದು ಸಮಿತಿ ಹೇಳಿದೆ.

*ಯೋಜನೆಗಳನ್ನು ಏಕೆ ಕೈಬಿಡಬೇಕು? ಸಮಿತಿ ನೀಡಿರುವ ಪ್ರಮುಖ ಕಾರಣಗಳು:*

– *ಹೆಚ್ಚುವರಿ ನೀರಿಲ್ಲ:* ಜುಲೈ-ಸೆಪ್ಟೆಂಬರ್‌ನಲ್ಲಿ ಮಾತ್ರ ಮಳೆಯ ಪ್ರವಾಹವಿದ್ದು, ಉಳಿದ 9 ತಿಂಗಳು ಹರಿವು ಕಡಿಮೆ.

– *ಕುಡಿಯುವ ನೀರಿನ ಕೊರತೆ ಎದುರಾಗಲಿದೆ*

– *ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಧಕ್ಕೆ:* ಪಶ್ಚಿಮಘಟ್ಟದ ಅಮೂಲ್ಯ ಕಾಡು, ಗೋಮಾಳ ನಾಶ.

– *ಕರಾವಳಿ ಪರಿಸರದ ನಾಶ:* ನದಿಗಳ ಹರಿವು ಕಡಿಮೆಯಾಗಿ ಮತ್ಸ್ಯಸಂಪತ್ತು, ಮೀನುಗಾರರ ಜೀವನೋಪಾಯಕ್ಕೆ ಹೊಡೆತ.

– *ಭೂಕುಸಿತದ ಅಪಾಯ ಹೆಚ್ಚಳ*

ಉತ್ತರ ಕನ್ನಡದ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿದ್ದು, ಆದರೂ ಸರ್ಕಾರ ಯೋಜನೆಗಳನ್ನು ಕೈಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ.

ಈ ಧರಣಿಯಲ್ಲಿ ಉತ್ತರ ಕನ್ನಡದ ಸಾಧಕರು, ಸಾಹಿತಿಗಳು, ಪರಿಸರ ತಜ್ಞರು, ರೈತರು, ಮೀನುಗಾರರು ಭಾಗವಹಿಸಲಿದ್ದಾರೆ.

*ಸಂಪರ್ಕ:* 97410 33442 / 98453 06625

*ಘೋಷವಾಕ್ಯ:* _ಬನ್ನಿ, ಪಶ್ಚಿಮಘಟ್ಟ ಉಳಿಸೋಣ | ನದಿಕಣಿವೆ ಸಂರಕ್ಷಿಸೋಣ | ಕೃಷಿಕ-ವನವಾಸಿ-ಮೀನುಗಾರರ ಬದುಕು ಉಳಿಸೋಣ | ನಮ್ಮೆಲ್ಲರ ಮಕ್ಕಳ ಭವಿಷ್ಯಕ್ಕಾಗಿ ಕಂಕಣಬದ್ಧರಾಗೋಣ_

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button