Belagavi NewsBelgaum NewsKannada NewsKarnataka NewsLatest

*ಪತ್ರಕರ್ತರ ಸೋಗಿನಲ್ಲಿ 50 ಸಾವಿರ ಸುಲಿಗೆ – FIR ನಲ್ಲಿ ಬಯಲಾಯ್ತು CCTV ಸಾಕ್ಷ್ಯ!*

ಪತ್ರಕರ್ತರ ಸೋಗಿನಲ್ಲಿ 50 ಸಾವಿರ ಸುಲಿಗೆ – FIR ನಲ್ಲಿ ಬಯಲಾಯ್ತು CCTV ಸಾಕ್ಷ್ಯ!

ಪ್ರಗತಿವಾಹಿನಿ ಸುದ್ದಿ/ ಹಾರೂಗೇರಿ – ಎರಡು ದಿನ ಹೆಚ್ಚು ರಜಾ ಹಾಕಿದ್ದನ್ನೇ ನೆಪ ಮಾಡಿಕೊಂಡು ಪತ್ರಕರ್ತರ ಸೋಗಿನಲ್ಲಿ ಬಂದ ನಾಲ್ವರು ಅನಾರೋಗ್ಯ ಪೀಡಿತ ಶಿಕ್ಷಕಿಯೊಬ್ಬರನ್ನು ಬೆದರಿಸಿ, ಕಿರುಕುಳ ನೀಡಿ ಸುಮಾರು ೫೦ ಸಾವಿರ ವಸೂಲು ಮಾಡಿದ್ದಾರೆಂದು ಅವರ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಗಳಖೋಡದ ಗೋಕಾಕ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ರಾಯಮಾನೆಯವರು ಕ್ಯಾನ್ಸರ್ ಪೀಡಿತರಾಗಿದ್ದು ಆ ಕಾರಣ ಕೆಲವು ದಿನ ಹೆಚ್ಚು ರಜೆ ಪಡೆದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಚೇತಕ್ ನ್ಯೂಸ್ ಮಾಧ್ಯಮದವರು ಎಂದು ಎಂದು ಹೇಳಿಕೊಂಡ ಆರೋಪಿಗಳಾದ ಶಿವಾನಂದ ಐಹೊಳೆ, ಮಹಾಂತೇಶ ಕಾಂಬಳೆ, ವಿನೋದ ಮಂಗಾ ಹಾಗೂ ನಿಶಾ ಕೋಳಿ ಎಲ್ಲರೂ ರಾಯಬಾಗ ತಾಲೂಕಿನ ಕುಡಚಿಯವರು ಶಿಕ್ಷಕಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಸಿ ಒಂದೂವರೆ ಲಕ್ಷಕ್ಕೆ ಬೇಡಿಕೆಯಿಟ್ಟು ಕೊನೆಗೆ ರೂ. ೫೦ ಸಾವಿರ ವಸೂಲು ಮಾಡಿದ್ದಾರೆಂದು FIR ನಲ್ಲಿ ಆರೋಪಿಸಲಾಗಿದೆ.

ಹಾರೂಗೇರಿ ಠಾಣೆಯ ಪಿಎಸ್ಐ ಮಲ್ಲಪ್ಪ ಅವರು ಪ್ರಕರಣ ದಾಖಲಿಸಿಕೊಂಡಿದ್ದು ಪಿಸಿ ಶಿವಾನಂದ ಗುಡದಾರ ಅವರು ನ್ಯಾಯಲಯಕ್ಕೆ FIR ಹಾಜರುಪಡಿಸಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button