Kannada NewsLatestNational

*ಮೊಮ್ಮಗ ಅರೆಸ್ಟ್‌ ಆಗುತ್ತಿದ್ದಂತೆ ಮನೆಯಿಂದ ಬಂತು ಆಘಾತಕಾರಿ ಸುದ್ದಿ*: *ಅಭಿಜಿತ್ ದೀಪ್ಕೆ ಅಜ್ಜಿ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಪೊಲೀಸರಿಂದ ತಡೆ ಎದುರಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಅಗೂ ಇತರ ನಾಯಕರನ್ನು ದೆಹಲಿ ವಿಮಾನದಲ್ಲಿ ವಿಮಾನದಲ್ಲಿಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ತ ಮೊಮ್ಮಗನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದ ಬೆನ್ನಲ್ಲೇ ಇತ್ತ ಅಭಿಜಿತ್ ದೀಪ್ಕೆ ಮನೆಯಲ್ಲಿ ಅವರ ಅಜ್ಜಿ ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ದೀಪ್ಕೆ ಅಜ್ಜಿ ಸಾವಿತ್ರಿಬಾಯಿ ಶಂಕರ್ ದೀಪ್ಕೆ ಮೃತಪಟ್ಟಿದ್ದು, ಕುಟುಂಬಕ್ಕೆ ತೀವ್ರ ಆಘಾತ ತಂದಿದೆ.

ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಅಭಿಜಿತ್‌ ದೀಪ್ಕೆಗೆ ಆಘಾತಕಾರಿ ಸುದ್ದಿಯೊಂದು ಮನೆಯಿಂದ ಬಂದಿದ್ದು, ದೀಪ್ಕೆ ಅಜ್ಜಿ ಸಾವಿತ್ರಿಬಾಯಿ ಶಂಕರ್ ದಿಪ್ಕೆ ದೀರ್ಘಕಾಲದ ವಯೋಸಹಜ ಕಾಯಿಲೆಯಿಂದಾಗಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಜಿಲ್ಲೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಾಂತುಕ್ ಪಿಂಪ್ರಿ ಗ್ರಾಮದಲ್ಲಿ ಸಾವಿತ್ರಿಬಾಯಿ ಶಂಕರ್ ದೀಪ್ಕೆ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರಿಗೆ ಮಗನ ಬಂಧನದ ಆಘಾತದ ನಡುವೆ, ಸದ್ಯ ಮನೆಯ ಹಿರಿಯ ವ್ಯಕ್ತಿಯನ್ನು ಕಳೆದುಕೊಂಡಿರುವ ಭಾರಿ ವೈಯಕ್ತಿಕ ನಷ್ಟವುಂಟಾಗಿದೆ. ಸದ್ಯ ದೆಹಲಿ ಪೊಲೀಸ್‌ ಕಸ್ಟಡಿಯಲ್ಲಿ ಅಭಿಜಿತ್‌ ದೀಪ್ಕೆ ಇದ್ದು, ಅವರು ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಸಿಗಲಿದೆಯೇ ಇಲ್ಲವೇ ಎಂಬುದು ಪ್ರಸ್ತುತ ಅಸ್ಪಷ್ಟವಾಗಿದೆ.

ಅಭಿಜಿತ್ ದೀಪ್ಕೆಯವರನ್ನು ಪೊಲೀಸರು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಸಿಜೆಪಿ ಸದಸ್ಯ ಅಜಿಂಕ್ಯಾ ಶಿಂಧೆ ನೇತೃತ್ವದಲ್ಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯುತ್ತುದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button