Kannada NewsKarnataka NewsLatest

*ನಾಡಹಬ್ಬ ದಸರಾ ಉದ್ಘಾಟನೆಗೂ ಮುನ್ನ ಅವಘಡ*: *ಮುರಿದು ಬಿದ್ದ ನಂದಿಧ್ವಜ*

ಪ್ರಗತಿವಾಹಿನಿ ಸುದ್ದಿ: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ದಸರಾ ಉದ್ಘಾಟನೆಗೂ ಮುನ್ನ ಅವಘಡವೊಂದು ಸಂಭವಿಸಿದೆ.

ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ನಂದಿಧ್ವಜದ ಕಂಬ ಮುರಿದು ಬಿದ್ದಿದೆ. ಸಧ್ಯ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ. ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು, ಅವರ ಸ್ವಾಗತಕ್ಕೆಂದು ನಂದಿಧ್ವಜ ತಂದಿದ್ದ ವೇಳೆ ಏಕಾಏಕಿ ಮುರಿದು ಬಿದ್ದಿದೆ.

ನಂದಿ ಧ್ವಜ ಹಿಡಿದು ಕುಣಿಯುತ್ತಿದ್ದಾಗ ನಂದಿಧ್ವಜ ಮುರಿದು ಬಿದ್ದಿದೆ. ತಕ್ಷಣ ಕಲಾವಿದರು ನಂದಿಧ್ವಜವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಆದರೆ ದಸರಾ ಉದ್ಘಾಟನೆಗೂ ಮುನ್ನ ನಡೆದ ಈ ಅವಘಡ ನೆರೆದಿದ್ದ ಜನರಲ್ಲಿ ಕಸಿವಿಸಿಯುಂಟುಮಾಡಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button