Kannada NewsKarnataka NewsLatest

*ಆಸ್ಪತ್ರೆಗಳಿಗೆ ಸಚಿವ ಖಾದರ್ ಖಡಕ್ ಎಚ್ಚರಿಕೆ*: ಮೃತದೇಹದ ಮೇಲೆ ಬಿಲ್ ವಸೂಲಿ ಮಾಡಿದರೆ ಬೀಳುತ್ತೆ ಕೇಸ್*

ಪ್ರಗತಿವಾಹಿನಿ ಸುದ್ದಿ: ಹಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚದ ಬಿಲ್ ಪಾವತಿಸದ ಕಾರಣಕ್ಕೆ ಮೃತದೇಹಗಳನ್ನು ನೀಡದೆ ಸತಾಯಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು, ಅಂತಹ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮೊಕದ್ದಮೆ ದಾಖಲಿಸಲು ಆರೋಗ್ಯ ಇಲಾಖೆ ಹೊಸ ಕಾನೂನು ರೂಪಿಸಲು ಮುಂದಾಗಿದೆ.

ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​ ಮಾಹಿತಿ ನೀಡಿದ್ದಾರೆಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ತಯಾರಿ ನಡೆದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದ್ರೂ ಮೃತಪಟ್ಟರೆ ದುಡ್ಡು ಕಟ್ಟಿ ಮೃತದೇಹ ಪಡೆಯಬೇಕು. ದುಡ್ಡು ಇಲ್ಲ ಎಂದು ಪರದಾಡುವ ಕುಟುಂಬಕ್ಕಿದು ಆರ್ಥಿಕ ಹೊರೆಯಾಗಲಿದೆ. ದುಡ್ಡಿಗಾಗಿ ಮೃತದೇಹ ಇಟ್ಟಕೊಂಡು ಸತಾಯಿಸುವ ಕೆಲಸ ಆಗಬಾರದು. ಈ ಬಗ್ಗೆ 2007-18 ಎರಡೂ ಸಲ ಕಾನೂನು ಬಂದಿದ್ರು ಸಮರ್ಪಕ ಅನುಷ್ಠಾನವಾಗಿಲ್ಲ. ಆದರೆ ನಾನು ಇದನ್ನ ಶೇ.100ರಷ್ಟು ಅನುಷ್ಠಾನ ಮಾಡುತ್ತೇನೆ ಎಂದರು.

2018ರಲ್ಲಿ ಶ್ಯೂರಿಟಿ ಪಡೆದು ಬಾಡಿ ನೀಡುವ ಕಾನೂನು ಮಾಡಲಾಗಿತ್ತು. ಆಸ್ಪತ್ರೆಗಳ ಬಿಲ್ ನೀಡಿಲ್ಲ ಅಂದರೆ ಕೇಸ್ ಹಾಕಬಹುದು ಅಂತಲೂ ಇತ್ತು. ಹೀಗಾಗಿ ಕೇಸ್ ಯಾಕೆ ಅಂತ ಸಾಲ ಮಾಡಿ ಜನರು ದುಡ್ಡು ಕಟ್ಟುತ್ತಿದ್ದಾರೆ. ಹೀಗಾಗಿ ಈ ಕಾನೂನಿನ ಬದಲಾವಣೆ ಮಾಡಬೇಕಿದೆ. ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button