Kannada NewsLatestWorld

*ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ*: *12 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರ ಮೇಲೆ ಹೌತಿಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ 12 ಜನರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ವಿಮಾನ ನಿಲ್ದಾಣದ ಮೇಲೆ ಇರಾನ್‌ ಬೆಂಬಲಿತ ಹೌತಿಗಳು ಕ್ಷಿಪಣಿ ದಾಳಿ ನಡೆಸಿದ್ದು, 12 ಜನರು ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ದಾಳಿಗೆ ನೆರೆಯ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರೇ ಕಾರಣ ಎಂದು ಸೌದಿ ಆರೋಪಿಸಿದೆ.

ಇರಾನ್ ಯುದ್ಧ ಆರಂಭವಾದ ನಂತರ ಕೊಲ್ಲಿ ಅರಬ್ ರಾಷ್ಟ್ರವೊಂದರಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ಯುದ್ಧದ ವ್ಯಾಪ್ತಿಯು ಇತ್ತೀಚೆಗೆ ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ಪಡೆಗಳ ನಡುವಿನ ಸಂಘರ್ಷಕ್ಕೂ ವಿಸ್ತರಿಸಿದೆ.

ದೇಶೀಯ ವಿಮಾನಗಳ ಟರ್ಮಿನಲ್ 3 ಮತ್ತು 4 ಅನ್ನು ಒಳಗೊಂಡಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಕೀರ್ಣಕ್ಕೆ ಕ್ಷಿಪಣಿಯೊಂದು ಅಪ್ಪಳಿಸಿದೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಸೌದಿ ಪ್ರಜೆಗಳು, ಇಬ್ಬರು ಬಾಂಗ್ಲಾದೇಶಿಯರು ಹಾಗೂ ಪ್ಯಾಲೆಸ್ಟೈನ್, ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ ಮತ್ತು ಸುಡಾನ್‌ನ ತಲಾ ಒಬ್ಬ ಪ್ರಜೆ ಸೇರಿದ್ದಾರೆ ಎಂದು ಸೌದಿ ಪ್ರಕಟಣೆ ತಿಳಿಸಿದೆ. ಗಾಯಾಳುಗಳಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

Related Articles

Back to top button