Kannada NewsKarnataka NewsLatest

*19 ಇನ್ಸ್ ಪೆಕ್ಟರ್ ಗಳ ದಿಢೀರ್ ವರ್ಗಾವಣೆ*: *ಇಲ್ಲಿದೆ ಪಟ್ಟಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗಿದೆ. 19 ಸಿವಿಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಹಾಗೂ ವಿವಿಧ ಸ್ಥಳಗಳಿಗೆ ನಿಯೋಜಿಸಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ (ಡಿಜಿ-ಐಜಿಪಿ) ಕಚೇರಿ ಆದೇಶ ಹೊರಡಿಸಿದೆ.

ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಕರ್ನಾಟಕ ಲೋಕಾಯುಕ್ತ, ಬೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂನ ಜಾಗೃತ ದಳಗಳು, ಪೊಲೀಸ್ ತರಬೇತಿ ಶಾಲೆಗಳು ಸೇರಿದಂತೆ ವಿವಿಧ ವಿಭಾಗಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ವರ್ಗಾವಣೆಗೊಂಡ 19 ಪಿಎಸ್ ಐ ಗಳ ಪಟ್ಟಿ:

  1. ಕುಮಾರ್ ಎ.ವಿ. — ಬೆಂಗಳೂರು ನಗರ ವಿಶೇಷ ಶಾಖೆಯಿಂದ ತಿರುಮಕೂಡ್ಲು ಪೊಲೀಸ್ ಠಾಣೆ, ಮೈಸೂರು ಜಿಲ್ಲೆಗೆ.
  2. ಸುಂದರ — ತಿರುಮಕೂಡ್ಲು ಪೊಲೀಸ್ ಠಾಣೆ, ಮೈಸೂರು ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  3. ರಮೇಶ್ ಸೀತಪ್ಪ ಲಮಾಣಿ — ಕರ್ನಾಟಕ ಲೋಕಾಯುಕ್ತದಿಂದ ಹೊಸಪೇಟೆ ಟೌನ್ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆಗೆ.
  4. ಅಶ್ವಿನ್ ಕುಮಾರ್ ಆರ್.ಜಿ. — ಆಂತರಿಕ ಭದ್ರತಾ ವಿಭಾಗದಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಗೆ.
  5. ಮಂಜುನಾಥ ಬಿ. ನಡವಿನಮನಿ — ಕರ್ನಾಟಕ ಲೋಕಾಯುಕ್ತದಿಂದ ಹೆಸ್ಕಾಂ ಜಾಗೃತ ದಳ, ಕಾರವಾರಕ್ಕೆ.
  6. ಗೋಪಾಲ್ ಆರ್. — ಹೆಸ್ಕಾಂ ಜಾಗೃತ ದಳ, ಕಾರವಾರದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  7. ವಿಜಯಕುಮಾರ್ — ಡಿ.ಸಿ.ಆರ್.ಬಿ., ಕಲಬುರಗಿಯಿಂದ ಜೆಸ್ಕಾಂ ಜಾಗೃತ ದಳ, ಬೀದರ್‌ಗೆ.
  8. ದೇವೇಂದ್ರಪ್ಪ ಕೆ.ಎಸ್. — ಸಿ.ಸಿ.ಬಿ., ಬೆಂಗಳೂರು ನಗರದಿಂದ ಬೆಸ್ಕಾಂ ಜಾಗೃತ ದಳ, ಕೋಲಾರಕ್ಕೆ.
  9. ರಾಘವೇಂದ್ರ ಹೆಚ್. ಹಳ್ಳೂರು — ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶ ರದ್ದು; ಪೊಲೀಸ್ ತರಬೇತಿ ಶಾಲೆ, ಧಾರವಾಡದಲ್ಲೇ ಮುಂದುವರಿಕೆ.
  10. ಪ್ರವೀಣ್ ಜಿ. ನೀಲಮ್ಮನವರ್ — ಪೊಲೀಸ್ ತರಬೇತಿ ಶಾಲೆ, ಧಾರವಾಡದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  11. ದೇವಾನಂದ ಎಸ್. — ಡಿ.ಎಸ್.ಬಿ., ಚಿಕ್ಕಮಗಳೂರಿನಿಂದ ನಗರ ವಿಶೇಷ ಶಾಖೆ, ಹುಬ್ಬಳ್ಳಿ-ಧಾರವಾಡಕ್ಕೆ.
  12. ಮಹೆಬೂಬಾಲಿ ಎಂ. ನದಾಫ್ — ನಗರ ವಿಶೇಷ ಶಾಖೆ, ಹುಬ್ಬಳ್ಳಿ-ಧಾರವಾಡದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  13. ಅನಿತಾ ಕುಮಾರಿ ಎಂ. — ಆಂತರಿಕ ಭದ್ರತಾ ವಿಭಾಗದಿಂದ ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ, ಬೆಂಗಳೂರಿಗೆ.
  14. ಅಣ್ಣಪ್ಪಗೌಡ ಪಾಟೀಲ್ — ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ, ಬೆಂಗಳೂರಿನಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  15. ಕಿರಣ್ ಎಸ್.ಆರ್. — ಡಿ.ಸಿ.ಆರ್.ಬಿ., ಚಾಮರಾಜನಗರದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  16. ಸಿದ್ಧೇಶ್ ಆರ್. — ಸಿ.ಸಿ.ಬಿ., ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  17. ಬಸವರಾಜ್ ಎಂ. ಅಡಕಿ — ಕರ್ನಾಟಕ ಲೋಕಾಯುಕ್ತದಿಂದ ಸಿಐಡಿಗೆ ವರ್ಗಾವಣೆಗೊಂಡು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದವರು; ಈಗ ಪೊಲೀಸ್ ತರಬೇತಿ ಶಾಲೆ, ಖಾನಾಪುರಕ್ಕೆ.
  18. ಶೇಖರ್ ಧರ್ಮಾರ್ — ಪೊಲೀಸ್ ತರಬೇತಿ ಶಾಲೆ, ಖಾನಾಪುರದಿಂದ ಕರ್ನಾಟಕ ಲೋಕಾಯುಕ್ತಕ್ಕೆ.
  19. ರಮೇಶ್ ಎಂ. — ಸಿ.ಸಿ.ಬಿ., ಬೆಂಗಳೂರು ನಗರದಿಂದ ವಿ.ವಿ.ಐ.ಪಿ. ಭದ್ರತೆ, ಬೆಂಗಳೂರು ನಗರಕ್ಕೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button