*ನಾನು ನೆಪವಷ್ಟೇ*: *ದರ್ಶನ್ ನಿಜವಾದ ಟಾರ್ಗೆಟ್*: *ಅವರಿಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದ ನಟ ಧನ್ವೀರ್*

ಪ್ರಗತಿವಾಹಿನಿ ಸುದ್ದಿ: ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್ ನಡುವಿನ ಕೋಲ್ಡ್ ವಾರ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಬ್ಬರ ನಡುವಿನ ಫೈಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಧನ್ವೀರ್ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಅತ್ತ ವಿಜಯಲಕ್ಷ್ಮೀ ವಿರುದ್ಧ ಧನ್ವೀರ್ ತಂದೆ ಕೇಸ್ ದಾಖಲಿಸಿದ್ದಾರೆ.
ಈ ಎಲ್ಲಾ ಘಟನೆಗಳ ಬೆನ್ನಲ್ಲೇ ನಟ ಧನ್ವೀರ್ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ್ದು, ನಾನು ನೆಪವಷ್ಟೇ ಅವರ ಟಾರ್ಗೆಟ್ ದರ್ಶನ್. ದರ್ಶನ್ ಗೆ ಅನ್ಯಾಯವಾಗಲು ನಾನು ಬಿಡಲ್ಲ ಎಂದಿದ್ದಾರೆ.
ನಾನು ಎಲ್ಲದಕ್ಕೂ ಅಡ್ಡಗಾಲಾಗಿದ್ದೆ. ಕೇಸ್ ವಿಚಾರದಲ್ಲಿ ಕಳೆದ 6-7 ತಿಂಗಳಲ್ಲಿ ಆದ ಬೆಳವಣಿಗೆ ಏನಿದೆ. ನಾನು ಅದಕ್ಕೆಲ್ಲ ಅಡ್ಡಗಾಲಾಗಿದ್ದೆ. ಹಾಗಾಗಿ ಏನಾದ್ರೂ ಮಾಡಿ ನನ್ನನ್ನ ದೂರ ಕಳಿಸಬೇಕಿತ್ತು ಅನ್ನೋ ಪ್ಲ್ಯಾನ್‌ನಲ್ಲಿ ಕೆಲವರಿದ್ದರು. ಅದರಂತೆ ನಡೆದುಕೊಳ್ತಿದ್ದಾರೆ, ಇದೆಲ್ಲ ಕೊನೆಯಾಗಬೇಕು. ಜೈಲಲ್ಲಿ ನೋವು ತಿನ್ನುತ್ತಿರೋದು ದರ್ಶನ್, ಇನ್ಯಾರು ಅವರ ಬಗ್ಗೆ ಯೋಚನೆ ಮಾಡ್ತಿಲ್ಲ ಎಂದಿದ್ದಾರೆ ಧನ್ವೀರ್.
ಜೀವ ಮಾನದಲ್ಲೂ ನನ್ನ ದರ್ಶನ್ ಅಣ್ಣನ್ನ ದೂರ ಮಾಡೋಕಾಗಲ್ಲ. ಅವರೇನು ಚಿಕ್ಕ ಮಗು ಅಲ್ಲ, ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿರುತ್ತೆ. ಎಲ್ಲವನ್ನೂ ನೋಡಿರ್ತಾರೆ. ಇದು ನಿರ್ಣಾಯಕ ಹೋರಾಟ, ಅವರಿಗೆ ಯಾರೇ ಅನ್ಯಾಯ ಮಾಡಿದ್ರೂ, ದರ್ಶನ್ ವಿರೋಧವಾಗಿ ಬಂದ್ರೂ ನಾನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ದರ್ಶನ್ ಅಣ್ಣನ ಹೊರಗೆ ಕರೆದುಕೊಂಡು ಬರಬೇಕು ಅಂತಿದ್ದರೆ, ನನ್ನನ್ನ ಯಾಕೆ ತಡೆಯುತ್ತಿದ್ದೀರಾ? ಮೊದಲು ನಾನು ನನ್ನ ಕೈಲಾದ ಕೆಲಸ ಮಾಡ್ತಿದ್ದೆ. ಈಗ ಅವರೇ ತೋಡಿದ ಹಳ್ಳಕ್ಕೆ ಬೀಳ್ತಿದ್ದಾರೆ. ಸ್ವಲ್ಪ ದಿನದಲ್ಲಿ ಎಲ್ಲವೂ ಹೊರಗೆ ಬರುತ್ತೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



