Latest

ಭಾರತ್ ಬಂದ್: ಆರ್ ಸಿಯು, ವಿಟಿಯು ಪರೀಕ್ಷೆಗಳು ಮುಂದೂಡಿಕೆ

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಂಗಳವಾರ ಮತ್ತು ಬುಧವಾರ ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಈ ಎರಡು ದಿನ ನಿದಿಯಾಗಿರುವ ಪರೀಕ್ಷೆಗಳನ್ನು ಮುಂದೂಡಿವೆ.

ಬಂದ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಹುದು ಎನ್ನುವ ಕಾರಣದಿಂದ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ವಿಶ್ವವಿದ್ಯಾಲಯಗಳ ಪ್ರಕಟಣೆ ತಿಳಿಸಿದೆ.

ಆರ್ ಸಿಯು ಪರೀಕ್ಷೆಗಳನ್ನು ಈಗ ನಿಗದಿಯಾಗಿರುವ ಪರಿಕ್ಷೆಗಳೆಲ್ಲ ಮುಗಿದ ನಂತರ ಜ.24 ಮತ್ತು 25ಕ್ಕೆ ನಡೆಸಲಾಗುವುದು ಎಂದು ಕುಲಪತಿ ಶಿವಾನಂದ ಹೊಸಮನಿ ಹಾಗೂ ಕುಲಸಚಿವ ರಂಗರಾಜ ವನದುರ್ಗ  ಪ್ರಗತಿವಾಹಿನಿಗೆ ತಿಳಿಸಿದ್ದಾರೆ. 

ವಿಟಿಯು ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಗಾಗಿ ವಿಟಿಯು ಅಧಿಕೃತ ವೆಬ್ ಸೈಟ್ ನೋಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button