ರಾಜೇಶ್ವರಿ ಎಸ್ ಹೆಗಡೆ
ಭಾರತಿಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ ಎಂದು ಹೆಣ್ಣನ್ನು ಕೊಂಡಾಡಿದ್ಧಾರೆ. ಭಾರತಿಯ ಹೆಣ್ಣು ಜನಿಸುವಿಕೆಯಲ್ಲಿಯೇ ಮಗಳಾಗಿ ಹುಟ್ಟಿ ಮುಂದೆ ಹಂತ ಹಂತವಾಗಿ ಸೋದರಿಯಾಗಿ, ಮಡದಿಯಾಗಿ, ತಾಯಿಯಾಗಿ, ಕುಟುಂಬದ ಅವಿಭಾಜ್ಯಸ್ಥಳಾಗಿದ್ಧಾಳೆ. ಸರ್ವಜ್ಞ ಕೂಡಾ ಹೆಣ್ಣಿನ ಬಗ್ಗೆ ಮಾತೆಯಿಂ ಹಿತವರಿಲ್ಲ ಕೋತಿಯಿಂ ಮರುಳಿಲ್ಲ ಜ್ಯೋತಿಯಂದದಿ ಬೆಳಕಿಲ್ಲ. ದೈವವು ಜಾತನಿಂದಲ್ಲಿ ಸರ್ವಜ್ಞ ಎಂದಿದ್ಧಾರೆ.
ಭಾರತಿಯ ಹೆಣ್ಣು ಇತ್ತೀಚಿನ ದಿನಗಳಲ್ಲಿ ದಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ, ಕ್ಷೇತ್ರಗಳಲ್ಲಿ ಮಾತ್ರವಲ್ಲದೇ, ಸಾಹಸ ಕಲೆ, ಕ್ರೀಡೆ, ಸಂಗೀತ, ಸೈನಿಕ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಪ್ರತಿನಿಧಿಸಿ ತನ್ನ ಛಾಪು ಮೂಡಿಸಿದ್ಧಾಳೆ.
ಮಹಿಳಾ ಸಬಲೀಕರಣ
ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ಬಲವನ್ನು ಹೆಚ್ಚಿಸುವದಕ್ಕೆ ಮಹಿಳಾ ಸಬಲೀಕರಣ ಎಂದು ಕರೆಯಲಾಗುತ್ತದೆ. ಸಬಲೀಕರಣ ಎಂಬುದು ಮಹಿಳೆಯರಲ್ಲಿ ಆತ್ಮ ವಿಶ್ವಾಸ ಬೆಳೆಸುವುದರೊಂದಿಗೆ ಸ್ವ ನಿರ್ಧಾರಿತ, ಗುಂಪು ನಿರ್ಧಾರಿತ, ಆತ್ಮಾಭಿಮಾನ, ಮತ್ತು ಕಳಂಕ ಮುಕ್ತ ಜೀವನ ನಡೆಸಲು ಶಕ್ತಿ ಕೊಡುತ್ತದೆ ಇದಕ್ಕೆ ಸಬಲೀಕರಣದ ಶಕ್ತಿ ಎನ್ನಲಾಗುವದು.
ಭಾರತ ದೇಶದ ಮಹಿಳೆಯರ ಸ್ಥಾನ, ಮಾನಗಳು ವಿಶೇಷವಿದ್ದು ಇವರು ಶಿಕ್ಷಣ, ಕಲೆ, ರಾಜಕೀಯ, ಸಾಂಸ್ಕೃತಿಕ, ಸೇವಾವಿಭಾಗ, ವಿಜ್ಞಾನ, ತಾಂತ್ರಿಕ, ಮುಂತಾದ ಕ್ಷೇತ್ರಗಳಲ್ಲೂ ತೊಡಗಿಸಿ ಕೊಂಡಿದ್ದಾರೆ.
ಭಾರತೀಯ ಸಂವಿಧಾನವು ಮಹಿಳಾ ಸಮಾನತೆ ಕುರಿತು ಅನುಚ್ಛೇದ,14 ಮತ್ತು 39ರ ಅಡಿಯಲ್ಲಿ ಲಿಂಗ ತಾರತಮ್ಯ ರಹಿತ ಸಮಾನ ಅವಕಾಶವನ್ನು ಕಲ್ಪಿಸಿದೆ. ಮಹಿಳೆಯರು ಮತ್ತು ಮಕ್ಕಳ ಕುರಿತoತೆ ಸರಕಾರವು ಹಲವಾರು ಸವಲತ್ತನ್ನು ಒದಗಿಸಿದೆ. ಮಹಿಳೆಯರಿಗೆ ಕೆಲಸದ ವಾತಾವರಣದ ಭದ್ರತೆ, ಮಾನವೀಯತೆಯಿಂದ ಕೂಡಿ ಕೆಲಸ ಮಾಡುವ ಅನುಕೂಲತೆ, ಮಾತೃತ್ವ ಸವಲತ್ತು ಇತ್ಯಾದಿಗಳನ್ನು ಒದಗಿಸಿದೆ.
1970 ನೇ ಸಾಲಿನಿಂದ ಸ್ತ್ರೀವಾದವು ಜಾರಿಗೆ ಬಂದು ರಾಷ್ಟ್ರಮಟ್ಟದಲ್ಲಿ ಮಹಿಳಾ ಗುಂಪುಗಳು ಹೆಡೆಯೆತ್ತಿದವು. ಮಧುರೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಹದಿಹರೆಯದ ಪತ್ನಿಯನ್ನು ಬಲತ್ಕಾರವಾಗಿ ಮಾನಭಂಗ ಮಾಡಿದರೂ ನ್ಯಾಯಾಲಯವು ನಿರಪರಾದಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ 1979, 1980ರಲ್ಲಿ ಈ ಕುರಿತು ಮಹಿಳೆಯರು ವಿರೋಧ ವ್ಯಕ್ತ ಪಡಿಸಿದರು. ಹೆಣ್ಣು ಮಗುವಿನ ಭ್ರೂಣ ಹತ್ಯೆ, ಲಿಂಗಭೇದ, ಮಹಿಳೆಯರ ಆರೋಗ್ಯ ಮತ್ತು ಸಾಕ್ಷರತೆ ಇವುಗಳ ಹೋಗಲಾಡಿಸುವಿಕೆಗಾಗಿ ಸ್ತ್ರೀ ಶಕ್ತಿ ಸಂಘಗಳು ಹುಟ್ಟಿಕೊಂಡವು. ಆಗಿನ ಕಾಲದಲ್ಲಿ ಅದಕ್ಕೆ ಸ್ತ್ರೀವಾದಿ ಸಂಘ ಎನ್ನಲಾಗುತ್ತಿತ್ತು. ಈ ಸಂಘವು ಮಹಿಳೆಯರ ಪರ ಕಾರ್ಯತತ್ಪರವಾಗಿ ಆಂದೋಲನ ಪ್ರಾರಂಭಿಸಿದವು. ಮೊಟ್ಟ ಮೊದಲಾಗಿ ಹರಿಯಾಣ, ಒರಿಸ್ಸಾ, ಆಂದ್ರಪ್ರದೇಶಗಳಲ್ಲಿ ಆರಂಭಿಸಿ ಮಹಿಳೆಯರ ಹಕ್ಕುಗಳ ಸ್ಥಾಪನೆಗೆ ಆಂದೋಲನ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ವಿದೇಶಿಯರು ದಾನದ ರೂಪದಲ್ಲಿ ನೀಡಿದ ಹಣದಿಂದ 1990 ರಲ್ಲಿ ಸ್ವಸಹಾಯ ಸಂಘಗಳು, ಸ್ವಉದ್ಯೋಗ, ಇವುಗಳನ್ನು ಶುರು ಮಾಡಿದರು. ಹಲವಾರು ಮಹಿಳೆಯರು ತಮ್ಮ ಹಕ್ಕನ್ನು ಸ್ಥಾಪನೆ ಮಾಡಿದ ನಂತರ ಒಂದೊಂದು ರೀತಿಯಲ್ಲಿ ತಮ್ಮ ಹೆಸರು ರಾರಾಜಿಸುವ ಕಾರ್ಯ ತತ್ಪರರಾದರು. ಉದಾರಣೆಗೆ ಹೇಳುವುದಾದರೆ 2001 ರಲ್ಲಿ ಮೇಧಾ ಪಾಟ್ಕರರವರು ನರ್ಮದಾ ಬಚಾವೋ ಆಂದೋಲನದ ಮೂಲಕ ತಮ್ಮ ಹೆಸರನ್ನು ನಾಯಕಿಯಾಗಿ ಗಿಟ್ಟಿಸಿ ಕೊಂಡರು. ಇದರಿಂದ ಭಾರತ ಸರಕಾರವು 2001 ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷವೆಂದು ಘೋಷಿಸಿತು. ಇದರಿಂದ ಅಂತರ್ ರಾಷ್ಟ್ರೀಯ ಮಹಿಳಾ ಸಬಲೀಕರಣ ದಿನವಾಗಿ ಜಾರಿಗೆ ಬಂದಿತು. ತದನಂತರ ಬಾಲ್ಯ ವಿವಾಹ, ಜೀತಗಾರಿಕೆ, ಹೆಣ್ಣು ಶಿಶುವಿನ ಹತ್ಯೆ, ವರದಕ್ಷಿಣೆ, ದ್ವೀ ಪತ್ನಿತ್ವ, ಮಗುವಿನ ದುರ್ಬಳಕೆ, ಇವುಗಳ ಕಡಿವಾಣಕ್ಕೆ ಕಾನೂನು ಸುವ್ಯವಸ್ಥೆಯು ಜಾರಿಗೆ ಬಂದಿತು.
ರಾಣಿ ಚೆನ್ನಮ್ಮ, ಕೆಳದಿ ಹೊನ್ನಮ್ಮ,ಝನ್ಸಿರಾಣಿ ಲಕ್ಷಿಬಾಯಿ ಇವರುಗಳು ಜನೋಪಯೋಗಿ ಕಾಯಕದ ಮೂಲಕ ಮಾದರಿಯಾದರು. ಆಗಿನ ಕಾಲದ ಮಹಿಳಾ ಮಣಿಗಳು ಒಂದಿಲ್ಲೊಂದು ರೀತಿಯಿಂದ ತಮ್ಮ ಬೆವರು ಸುರಿಸಿ ಮಹಿಳೆಯರ ಮೇಲಿನ ಹಕ್ಕು ಸ್ಥಾಪಿಸಿರುವುದರಿoದ ಇಂದು ಮಹಿಳೆಯರು ಸುರಕ್ಷಿತ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದ್ಧಾರೆ. ಅವರುಗಳಿಗೆ ಒಂದು ಸಲಾಂನ್ನು ಈ ದಿವಸ ನೀಡದಿದ್ದರೆ ನಿಜಕ್ಕೂ ತಪ್ಪಾಗುತ್ತದೆ.
ಕೇಂದ್ರ ಸರ್ಕಾರವು 81ನೇ ತಿದ್ದುಪಡೆ ಮಸೂದೆಯನ್ನು ಜಾರಿಗೆ ತರುವಾಗ ಶೇಕಡಾ 25 ಮಹಿಳಾ ಮೀಸಲಾತಿ ರೂಪಿಸಿದ್ದು, ಶರದ್ ಯಾದವ, ಮತ್ತು ಲಾಲು ಪ್ರಸಾದರವರು ಶೇಕಡಾ 33, ಮಹಿಳಾ ಮೀಸಲಾತಿ, ಮತ್ತು ಹಿಂದುಳಿದ ವರ್ಗಗಳ ಮಹಿಳೆಯರ ಮೇಲಿನ ಮೀಸಲಾತಿಯನ್ನು ಕಡ್ಡಾಯ ಗೊಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಹಲವಾರು ಮಹಿಳೆಯರು ಹೋರಾಟವನ್ನು ಮಾಡಿ ಮತದಾನದ ಹಕ್ಕನ್ನು ಪಡೆದುಕೊಂಡರು. ಈ ಹೋರಾಟದಲ್ಲಿ ಹಲವಾರು ಮಹಿಳೆಯರು ಪ್ರಾಣವನ್ನು ತೆತ್ತರು. ಪ್ರಯುಕ್ತ 1908 ಮಾರ್ಚ್ 08 ಇದು ಮಹಿಳಾ ಹೋರಾಟದ ಅವಿಸ್ಮರಣೀಯ ದಿನವಾಗಿದೆ. ನಂತರದ ದಿನಗಳಲ್ಲಿ ಇಂದಿರಾ ಗಾಂಧಿ 17 ವರ್ಷಗಳ ಕಾಲ ದೇಶದ ಆಳ್ವಿಕೆಯನ್ನು ಮಾಡಿದರು. ಮುಂದಿನ ದಿನಗಳಲ್ಲಿ ಹಲವಾರು ಹಕ್ಕುಗಳನ್ನು ಪಡೆದ ಮಹಿಳೆಯರು ದುಡಿತದ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಬೇಕು. ಮಹಿಳೆಯರಿಗೆ ದುಡಿಯುವ ಸ್ಥಳದಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು. ಮಾಲೀಕ ವರ್ಗದ ಅಮಾನವೀಯ ಶೋಷಣೆ ವಿರುದ್ದ ಬೀದಿಗೆ ಇಳಿದು ಚಳವಳಿ ನಡೆಸಿದರು. ಅಮೇರಿಕಾ, ನ್ಯೂಯಾರ್ಕಗಳಲ್ಲಿ ಚಳವಳಿ ಆರಂಭಗೊಂಡು ಕಮ್ಯುನಿಷ್ಠ ನಾಯಕಿ ಕ್ಲಾರಾ ಜೇಟಕನ್ ಇವರು ನೇತೃತ್ವ ವಹಿಸಿ 1910 ರಲ್ಲಿ ಕೂಪನ್ ಹೆಗನ್ ನಲ್ಲಿ ನಡೆದ ಸೋಶಿಯಲಿಷ್ಟ ಮಹಿಳಾ ಸಮಾವೇಶದಲ್ಲಿ 17 ದೇಶದ 100 ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರು. ಕಮ್ಯುನಿಷ್ಟ ನಾಯಕಿ ಕ್ಲಾರ ಜೇಟಕನ್ ಇವರ ಹೇಳಿಕೆಯಂತೆ ಮಾರ್ಚ್ ತಿಂಗಳ 1908 ಇದು ದುಡಿಯುವ ಮಹಿಳೆಯರ ದಿನಾಚರಣೆ ಆಗಿ ರೂಪುಗೊಂಡಿತು. ಅದನ್ನೇ ಮುಂದೆ ದುಡಿಯುವ ಪದವನ್ನು ತೆಗೆದು ಹಾಕಿ 1975 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಗಿದೆ. ಈ ದಿವಸವನ್ನು ಎಲ್ಲ ದೇಶಗಳು ಸಾಂಪ್ರದಾಯಕವಾಗಿ ಆಚರಿಸುತ್ತಾರೆ. ಹಕ್ಕಿನ ವಿರುದ್ದ ಹೋರಾಡಿದ ಮಹಿಳಾ ಪರಂಪರೆಯನ್ನು ಮರೆಮಾಚಿ ಕೆಲವೇ ಮಹಿಳೆಯರ ಆರ್ಥಿಕ, ರಾಜಕೀಯ, ಸಾಧನೆ ಗುರುತಿಸಿ ಸನ್ಮಾನಿಸುವ ದಿನವನ್ನಾಗಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.
ಮಹಿಳಾ ಉಪಯೊಗಿತ ಸೌಂದರ್ಯ ಸಾಧನೆಗಳನ್ನು ಮಾರಾಟ ಮಾಡುವ ಮೂಲಕ ಕೆಲವು ಕಂಪನಿಗಳು ಮಹಿಳಾ ದಿನವನ್ನು ಆಚರಿಸಿ ಮಾರುಕಟ್ಟೆಯ ವ್ಯವಹಾರಗಳನ್ನು ಡಿಸ್ಕೌಂಟ ಮೂಲಕ ಹೆಚ್ಛಿಸಿಕೊಳ್ಳುತ್ತಾರೆ. ಕೆಲವು ರಾಜಕಾರಣಿಗಳು ಉದ್ದಿಮೆಯ ಶ್ರೀಮಂತ ಜನರುಗಳು ಕ್ರೀಡೆ, ಹಾಗೂ ಇನ್ನಿತರೇ ಕ್ಷೇತ್ರದಲ್ಲಿ ತೊಡಗಿಸಿ ಸ್ಫರ್ಧೆ ಏರ್ಪಡಿಸುವ ಮೂಲಕ ಮಹಿಳಾ ಮಣಿಗಳಿಗೆ ಗೌರವ ಸೂಚಿಸುತ್ತಾರೆ.
ಕಾರ್ಪೊರೇಟ್ ಕಂಪನಿಗಳು ಮಹಿಳಾ ಸಾಮಗ್ರಿಗಳಾದ ಮಿಕ್ಸರ್, ಗ್ರೇoಡರ್, ಕಿಚನ್ ಸಾಮಗ್ರಿಗಳನ್ನು , ಮಹಿಳೆಯರ ಬದುಕಿನ ಅತ್ಯಗತ್ಯ ಸಾಮಗ್ರಿಗಳನ್ನು ಮಾರಾಟವನ್ನು ಮಾಡಿ ಪ್ರಚಾರವನ್ನು ಗಿಟ್ಟಿಸಿ ಕೊಳ್ಳುತ್ತಾರೆ. ಮಹಾನಗರಗಳಲ್ಲಿ ಲಕ್ಷಾಂತರ ಸಂಖೆಯಲ್ಲಿ ದುಡಿಯುತ್ತಿರುವ ಮಹಿಳಾ ಗಾರ್ಮೇoಟ್ಸ ನೌಕರರು ಐಟಿ, ಬಿಟಿ, ಕಾಲ್ ಸೆಂಟರ್, ಬೀಡಿ ಕಾರ್ಮಿಕರು ಇವರುಗಳೆಲ್ಲ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಹೆಚ್ಚಿನ ದುಡಿಮೆ, ಕಡಿಮೆ ವೇತನ ಪಡೆಯುವುದು ಇವರ ಪಾಡಾಗಿದೆ. ಲೈಂಗಿಕ ಕಿರುಕುಳ, ಅತ್ಯಾಚಾರ, ಮಾಲಿಕರ ದೌರ್ಜನ್ಯ ಇವೆಲ್ಲಾ ಒತ್ತಡಕ್ಕೆ ಸಿಲುಕಿ ದ್ಯೆಹಿಕ ಮಾನಸಿಕವಾಗಿ ಕುಗ್ಗುತ್ತಾರೆ. ಅತ್ಯಾಚಾರ ಕೊಲೆಗಳು ಆಗುವಂತ ಗಂಭೀರ ವಿಚಾರದಲ್ಲಿ ಕಾನೂನು ನಾಮಕಾವಸ್ಥೆಯ ಕಾರ್ಯ ನಡೆಸುತ್ತಿದೆ. ಈ ಬಗ್ಗೆ ಸಂಬಂಧಿಸಿದವರ ಲಕ್ಷ್ಯ, ನಿರ್ಲಕ್ಷ್ಯ ವಾಗುವಿಕೆ ಒಟ್ಟುಗೂಡುತ್ತದೆ. ಮಹಿಳಾ ಸಬಲೀಕರಣ, ಮಹಿಳಾ ದಿನಾಚರಣೆ ಇಂತಹ ಘೋಷಣೆ ಉದ್ದೇಶಗಳು ಮಹಿಳೆ ಪ್ರತಿಭೆಯಾಗಿ ಪುರುಷರಿಗೆ ಸರಿ ಸಾಟಿಯಾಗಿ ಪ್ರತಿಸ್ಪರ್ಧಿ ಆದರೂ ಲೈಂಗಿಕ ವಸ್ತುವಿನಂತೆ ಮಕ್ಕಳನ್ನು ಹೆರುವ ಯಂತ್ರದoತೆ , ಸಂಪ್ರದಾಯಿಕ ಸಂಸ್ಕೃತಿ ಉಳಿಸುವ ವಕ್ತಾರಳoತೆ ಅವಳನ್ನು ಬಿಂಬಿಸಲಾಗುತ್ತದೆ. ಅವರಿಗೆ ಸ್ಥಾನ ಮಾನ ತಕ್ಕದಾಗಿ ಸಿಗಲೇ ಇಲ್ಲ.
ಮಹಿಳೆಯನ್ನು ಅರೆ ನಗ್ನವಾಗಿ ಸಿನೇಮಾ, ಜಾಹಿರಾತುಗಳಲ್ಲಿ ತೋರಿಸಿ ಅವಳ ದೇಹವನ್ನು ಮಾರಾಟದ ತಂತ್ರವಾಗಿ ಬಳಸಲಾಗುತ್ತದೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಇಂಟರ್ ನೆಟ್, ಮೊಬೈಲ್, ಹರಿದಾಡುವ ಮೆಸೇಜ್, ನೀಲಿಚಿತ್ರ, ಇವುಗಳು ಮಹಿಳೆಯರ ವ್ಯಕ್ತಿತ್ವವನ್ನು ಗೌಣಗೊಳಿಸಿ ಯುವ ಜನಾಂಗದ ಹಾದಿಯನ್ನು ತಪ್ಪಿಸುವಂತಾಗಿದೆ. ಈ ತರದ ಸಂದರ್ಭೋಚಿತ ಘಟನೆಗಳು ಒಂದು ಕೈ ಚಪ್ಪಾಳೆಯಿಂದ ನಡೆಯುವಂತಿಲ್ಲಾ. ಮಹಿಳೆಯರು ಕೂಡಾ ತಮ್ಮ ಸಂಸ್ಕೃತಿ, ಹಿರಿಯರು ಬೆಳೆದು ಬಂದ ಪರಿಣಾಮವಾಗಿ ಮೈ ಮುಚ್ಚುವಂತೆ ಧರಿಸಬೇಕಾದ ಉಡುಪು ಇವುಗಳನ್ನು ಧರಿಸುಸುತ್ತಾರೆ. ಸಮಾಜದಲ್ಲಿ ತಾನು ಗೌರವದಿಂದ ಬಾಳುವ ಉಡುಪು ಧರಿಸಿ ಹಡೆದವರ ಹೆಸರನ್ನು ಉಳಿಸಲು ಇವರು ಹೋಗದಿರುವದು ಒಂದು ಬಲವಾದ ಕಾರಣವೆನ್ನ ಬಹುದಾಗಿದೆ.
ಹೆಣ್ಣು ಸಂಸ್ಕೃತಿಯ ಪ್ರತಿಬಿಂಬ ಎಂದು ಎಲ್ಲಾ ಹೊಣೆಗಾರಿಕೆ ಅವಳ ಮೇಲೆ ಹೇರುತ್ತಿರುವ ಸಾಮಾಜಿಕ ಧಾರ್ಮಿಕ, ಸಂಸ್ಥೆ ಒಂದೆಡೆಯಾದರೆ ರಾಜಕೀಯದಲ್ಲಿ ಶೇಕಡಾ 33 ಸ್ಥಾನವನ್ನು ಗಿಟ್ಟಿಸಿ ಕೊಳ್ಳಲು ಕೂಡಾ ವಿಧೇಯಕಗಳು ಇನ್ನು ಆಗಬೇಕಿದೆ. ಶೇಕಡಾ 10 ಮೀಸಲಾತಿ ದಾಟಿಲ್ಲ. ಮಹಿಳೆಯರು ಸಹನೆಯ ಪರದಿ ದಾಟಿ ವೈಚಾರಿಕವಾಗಿ ತಮ್ಮ ಬoಧನದ ಬದುಕಿನ ಬಗ್ಗೆ, ಸಿಗಬೆಕಾದ ಹಕ್ಕಿನ ಬಗ್ಗೆ ಜಾಗೃತರಾಗಿ ಹೋರಾಟವನ್ನು ನಡೆಸಿ ದುಡಿಮೆಗೆ ತಕ್ಕ ಫಲವನ್ನು ಕಾನೂನು ಹೊರಾಟದಿಂದ ಪಡೆದಿದ್ದಾರೆ. ಈಗ ರಾಜಕೀಯ ಪ್ರಾತಿನಿಧ್ಯ, ಉದ್ಯೋಗ , ಆರ್ಥಿಕ ಸ್ವಾತoತ್ರ್ಯ ಗಳು ಬದಲಾವಣೆ ಗೊಂಡಿದೆ. ಮಹಿಳೆಯರಿಗೆ ಎಲ್ಲೂ ಸುರಕ್ಷತೆಗಳಿಲ್ಲ ಎನ್ನುವ ನಿರ್ಮಿತ ವಾತಾವರಣ ಮನೆ ಮಠ, ಶಾಲೆ ಕಾನೂನು , ಪೊಲೀಸ್, ಎಲ್ಲ ಕಡೆ ಅವಳ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತದೆ.
ಇತ್ತೀಚಿನ ದಿನಗಳಲ್ಲಿ ಮುಗ್ದ ಮಕ್ಕಳಿಂದ ವಯೋವೃದ್ಧರವರೆಗೂ ಅತ್ಯಾಚಾರ ನಡೆದು ದೈಹಿಕ, ಮಾನಸಿಕವಾಗಿ ಕುಗ್ಗುತ್ತ ಅವಳ ವ್ಯಕ್ತಿತ್ವವನ್ನು ಬೆತ್ತಲೆಯಾಗಿ ನೋಡುವ ಮೃಗನಂತ ಮನಸ್ಥಿತಿ ಬoದೊದಗುತ್ತದೆ. ಇದರಿಂದ ಮಹಿಳಾ ದಿನಾಚರಣೆ ಎಂಬುದು ಒಂದು ಸಾಂಪ್ರದಾಯಕ ಆಚರಣೆ ಆಗಿದೆ. ಮಹಿಳೆಯ ಮನಸ್ಸಿನ ವಿರುದ್ದದ ಸಮಾನತೆಯ ಬದುಕಿನ ಆರೋಗ್ಯಕರ ಸಮಾಜಕ್ಕಾಗಿ ಹೋರಾಟದ ದಿನವನ್ನಾಗಿ ನಡೆಸಬೇಕು. ಹೆಣ್ಣು ಅತ್ಯಾಚಾರಕ್ಕೊಳಗಾದರೆ ಅಣ್ಣ, ತಂದೆ, ತಮ್ಮ ಎಲ್ಲರಿಗೂ ನೋವು, ದುಖ, ಆಗುವದರಿಂದ ಅತ್ಯಾಚಾರ ಮುಕ್ತ ಶೋಷಣೆ ರಹಿತ ಸಮಾಜವನ್ನು ಸ್ತ್ರೀ ಪುರುಷರು ಅವಶ್ಯಕವಾಗಿ ನಿರ್ಮಿಸಿದರೆ ಆರೋಗ್ಯಕರ ಹೋರಾಟ ಸ್ತ್ರೀ ಪುರುಷರು ಸೇರಿ ನಡೆಸಿದರೆ ಮಹಿಳಾ ಸಬಲೀಕರಣ ಸಾಧ್ಯವಾಗುವದರಲ್ಲಿ ಸಂಶಯವಿಲ್ಲ.
ಮಹಿಳಾಪರ ವಿಚಾರ ಮಂಡನೆಗೆ ಡಾ. ಅಂಬೇಡ್ಕ್ ರ ರಿಗೆ ಬಲವಾದ ಆಧಾರಗಳಿದ್ದು ಮಹಿಳಾ ಮೀಸಲಾತಿ, ಆಸ್ತಿ ಹಕ್ಕು, ಕುರಿತು ಜ್ಯೋತಿಬಾ ಪುಲೆ, ಮುಂತಾದವರು ಬೇರೆ ಬೇರೆ ದೇಶದ ಸಮಾಜ ಮುಖಿ ಮಹಿಳಾ ಚಿಂತಕರು ಅಧ್ಯಯನವನ್ನು ಮಾಡಿ ಭಾರತದಲ್ಲಿ ಮಹಿಳಾ ಹಕ್ಕು ಬದ್ಡತೆಗೆ, ಪಾರ್ಲಿಮೆಂಟ್ ನಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ದೊರೆಯದ ಕಾರಣದಿಂದ ಅಂಬೇಡ್ಕರ್ ರವರು ತಮ್ಮ ಮಂತ್ರಿಪದವಿಗೆ ರಾಜಿನಾಮೆ ನೀಡಿದರು. ಸಂವಿಧಾನದಲ್ಲಿ ಡಾ. ಅಂಬೇಡ್ಕರ ರವರು ಬರೆದಂತೆ ಹಂತ ಹಂತವಾಗಿ ಜಾರಿಗೆ ಬಂದಿತು.
ರಾಷ್ಟ್ರಕ್ಕೆ ರಕ್ಷಣೆಯನ್ನು ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನು ರಕ್ಷಿಸಿಕೊಳ್ಳ ಬಲ್ಲಳೆ ಎಂಬ ಒಂದು ಉತ್ತಮ ಪ್ರಶ್ನೆ ಉದ್ಬವಿಸಿತು.
ಯತ್ರನಾರ್ಯಸ್ತು ಪೂಜ್ಯಂತೆ ತತೃ ರಮಂತೆ ತತ್ರ ದೇವತೆ ಎಂಬ ಮಾತು ಕೇವಲ ಮಾತಾಗಿ ಇರದೇ ಆಚರಣೆಗೆ ಬಂದಾಗ ಅದರ ಕಾರ್ಯ ರೂಪ ಗಟ್ಟಿ ನೆಲೆ ನಿಂತಾಗ ಮಹಿಳೆಗೆ ಒಳ್ಳೆಯ ಸ್ಥಾನ ಸಿಗಲು ಸಾಧ್ಯ, ಮಹಿಳಾ ದಿನಾಚರಣೆ ಉದ್ಧೇಶವೂ ಅರ್ಥಪೂರ್ಣವಾಗುತ್ತದೆ. ಮಾರ್ಚ 08 ಮಹಿಳಾ ದಿನಾಚರಣೆ. ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14 ಮಹಿಳಾ ಸಿಬ್ಬo ದಿಗಳನ್ನು ಫೈರ್ ಫ್ಯಾಟರ್ಸ, ಏರ್ ಕ್ರಾಫ್ಟಸೊ ಮತ್ತು ಫೈರ ಫೈಟಿಂಗ್ ವಿಭಾಗಕ್ಕೆ 4 ತಿಂಗಳ ತರಬೇತಿ ಮೂಲಕ ಆಯ್ಕೆ ಮಾಡಲಾಗಿದೆ. ಇದು ಪ್ರಥಮ ವಾಗಿ ನಡೆದ ನೇಮಕಾತಿ ಆಗಿದೆ. ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರು ಹೆಣ್ಣಿನ ಕುರಿತು ಕವನದ ಮೂಲಕ ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ ಸಾಕೆ, ಎಂದು ಕವನದ ಮೂಲಕ ಹಾಡಿ ಹೊಗಳಿದ್ದಾರೆ. ಹೆಣ್ಣು ವಿಶೇಷ ಶಕ್ತಿಗಳ ಸಂಗಮ, ಮಮತೆ, ಕರುಣೆ, ಅಕ್ಕರೆ, ವಾತ್ಸಲ್ಯ, ತಾಳ್ಮೆ, ಇರುವವಳು, ಸ್ತ್ರೀ ಪ್ರಭಲ ಶಕ್ತಿ ,ಅಬಲೆಯೆಂದು ಹಿಂದಿನಿಂದ ಕಡೆಗಣಿಸಲಾಗಿದೆ. ಸ್ತ್ರೀ ಅಥವಾ ಮಹಿಳೆ ಎಂಬುದು ಸಂಸ್ಕೃತ ಭಾಷೆಯ ಪದವಾಗಿದೆ. ಕನ್ನಡದಲ್ಲಿ ಹೆಣ್ಣು ಎಂದು ಬಂದಿದೆ. ಇದು ಪುರುಷ ಪದದ ಸಮಾನಾರ್ತಕ ಪದವಾಗಿದೆ. ಹಿಂದಿನಿಂದಲೂ ಹೆಣ್ಣಿಗೆ ಒಂದಲ್ಲಾ ಒಂದು ಶಾಪವಿದೆ. 1. ಹೆಣ್ಮಕ್ಕಳು ಸುಳ್ಳು ಹೇಳ್ತಾರೆ, 2. ಹೆಣ್ಣುಮಕ್ಕಳು ಮುಚ್ಚಿಡ್ತಾರೆ. 3.ಹೆಣ್ಣು ಮಕ್ಕಳು ಮೋಸ ಮಾಡ್ತಾರೆ, ಹೆಣ್ಣಮಕ್ಕಳು ವಂಚಿಸ್ಠಾರೆ. ಆದರೆ ಇದಕ್ಕೆಲ್ಲ ಉತ್ತರ ಅವಳು ಸಹನಾ ಮೂರ್ತಿ ಅವಳು ಸಹನೆಯ ಸಖಿ ಎಲ್ಲ ವಂಚನೆ, ಕಷ್ಟಗಳನ್ನು ತಾನೇ ತಾನಾಗಿ ಅನುಭವಿಸುವಳು ಎಂಬುದು ಸಂದರ್ಭೋಚಿತವಾಗಿ ಕಂಡ ಉತ್ತರವಾಗಿದೆ. ಈ ಅಂಶವನ್ನು ಈ ಹಿಂದೆಯೇ ಕಾಣಲಾಗಿದೆ. ಆದಾಗ್ಯೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಾಧನೆ ಮಾಡುವುದು ಸುಲಭವೇನೂ ಅಲ್ಲ. ಮಹಿಳೆಯು ತನ್ನ ಸ್ವಂತ ಪರೀಶ್ರಮದಿಂದ ಗುರಿ ಮುಟ್ಟುವ ಛಲ ಬಿಡದೆ ಸಾಧನೆಯನ್ನು ಸಾಧಿಸ ಹೊರಟರೆ ಮಾತ್ರ ಸ್ವಾವಲoಬನೆಯಿಂದ ಬದುಕು , ಅಧಿಕಾರ ನಡೆಸುವ ಕನಸು ಕಾಣಬಹುದಾಗಿದೆ. ಆಗ ಹಿಂದಿನವರು ದೊರಕಿಸಿ ಕೊಟ್ಟ ವಿಶ್ವ ಮಹಿಳಾ ದಿನಾಚರಣೆಗೂ ಒಂದು ಪರಿಪೂರ್ಣ ಅರ್ಥ ದೊರೆತoತೆ ಆಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ