Belagavi NewsBelgaum NewsKannada NewsKarnataka NewsLatest

*ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಡಾ. ಪ್ರಭಾಕರ ಕೋರೆ ಅವರಿಗೆ ಗೌರವ ಸನ್ಮಾನ*

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಡಾ. ಪ್ರಭಾಕರ ಕೋರೆ ಅವರಿಗೆ ಗೌರವ ಸನ್ಮಾನ

ಬೆಳಗಾವಿ 19: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವತಿಯಿಂದ ಬೆಳಗಾವಿಯಲ್ಲಿ ಪದ್ಮಶ್ರೀ ಪುರಸ್ಕೃತ, ಕೆಎಲ್‌ಇ ಸಂಸ್ಥೆಯ ಕಾಹೆರ್‌ ಹಾಗೂ ತಾಂತ್ರಿಕ ವಿವಿ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರನ್ನು ಗೌರವಪೂರ್ವಕವಾಗಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ಡಾ. ಪ್ರಭಾಕರ ಕೋರೆ ಅವರು ಸಂತಸ ವ್ಯಕ್ತಪಡಿಸಿ,ಕೆಎಸ್‌ಸಿಎ ಪದಾಧಿಕಾರಿಗಳು ಹಾಗೂ ಕ್ರಿಕೆಟ್ ಸಂಸ್ಥೆಯ ಬಳಗದವರು ತಮ್ಮ ಮೇಲೆ ತೋರಿದ ಪ್ರೀತಿ, ಅಭಿಮಾನ ಮತ್ತು ಗೌರವಕ್ಕೆ ತಾವು ಅತ್ಯಂತ ಕೃತಜ್ಞರಾಗಿರುವುದಾಗಿ ತಿಳಿಸಿದರು.
 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಬಿ.ಕೆ. ವೆಂಕಟೇಶ ಪ್ರಸಾದ್, ಉಪಾಧ್ಯಕ್ಷರಾದ ಸುಜಿತ್ ಸೋಮಸುಂದರ್, ಗೌರವ ಕಾರ್ಯದರ್ಶಿಗಳಾದ ಸಂತೋಷ್ ಮೆನನ್ ಹಾಗೂ ಸಂಸ್ಥೆಯ ಮಾಜಿ ಆಡಳಿತ ಮಂಡಳಿ ಸದಸ್ಯರಾದ ಅವಿನಾಶ್ ಆರ್. ಪೊತದಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Back to top button