*ಕರ್ನಾಟಕದ ವಿದ್ಯುತ್ ಗ್ರಿಡ್ ರಕ್ಷಣೆಗೆ ಭಾರತದಲ್ಲೇ ಮೊದಲ ಕಾರ್ಯಾಚರಣಾ ತಂತ್ರಜ್ಞಾನ ಸೈಬರ್ ಭದ್ರತಾ ಯೋಜನೆ*: *ಕೆ.ಜೆ. ಜಾರ್ಜ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಹೆಚ್ಚುತ್ತಿರುವ ಸೈಬರ್ ಅಪಾಯಗಳಿಂದ ರಕ್ಷಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಭಾರತದಲ್ಲೇ ಮೊದಲ ಬಾರಿಗೆ ಕಾರ್ಯಾಚರಣಾ ತಂತ್ರಜ್ಞಾನ (OT) ಸೈಬರ್ ಭದ್ರತಾ ಯೋಜನೆಯನ್ನು ಆರಂಭಿಸಿದೆ ಎಂದು ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
Integrated Secure Infrastructure Solution ಯೋಜನೆಯಡಿ KPTCLನ 1,474 ಉಪಕೇಂದ್ರಗಳು ಮತ್ತು 6 Area Load Despatch Centre (ALDC) ಕೇಂದ್ರಗಳನ್ನು ಒಂದೇ ಸಮಗ್ರ ಸೈಬರ್ ಭದ್ರತಾ ವ್ಯವಸ್ಥೆಯಡಿ ತರಲಾಗುತ್ತದೆ.
ವಿದ್ಯುತ್ ಉಪಕೇಂದ್ರಗಳ ಕಾರ್ಯಾಚರಣೆ ಈಗ ಹೆಚ್ಚಾಗಿ ಡಿಜಿಟಲ್ ನಿಯಂತ್ರಣ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸೈಬರ್ ದಾಳಿಗಳು ಕೇವಲ ಕಂಪ್ಯೂಟರ್ಗಳಿಗೆ ಸೀಮಿತವಾಗದೆ, ವಿದ್ಯುತ್ ಗ್ರಿಡ್ನ ಕಾರ್ಯಾಚರಣೆಯನ್ನೂ ಅಡ್ಡಿಪಡಿಸುವ ಅಪಾಯವಿದೆ. ಈ ಸೈಬರ್ ಅಪಾಯಗಳಿಂದ ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರಕ್ಷಿಸುವುದೇ KPTCLನ ಹೊಸ ಕಾರ್ಯಾಚರಣಾ ತಂತ್ರಜ್ಞಾನ (OT) ಸೈಬರ್ ಭದ್ರತಾ ಯೋಜನೆಯ ಪ್ರಮುಖ ಗುರಿಯಾಗಿದೆ.
“ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಗ್ರಿಡ್ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ, ಈ ಡಿಜಿಟಲ್ ಪರಿಸರ ವ್ಯವಸ್ಥೆ ಸೈಬರ್ ಭದ್ರತೆ ವಿದ್ಯುತ್ ಮೂಲಸೌಕರ್ಯದ ಅವಿಭಾಜ್ಯ ಭಾಗವಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಕೈಗೊಳ್ಳುತ್ತಿರುವ ಈ ಯೋಜನೆ ಕರ್ನಾಟಕದ ವಿದ್ಯುತ್ ಪ್ರಸರಣ ಜಾಲದ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಯೋಜನೆಯ ಪ್ರಾರಂಭದ ಸಭೆ ಬೆಂಗಳೂರಿನ ಇಂಧನ ಭವನದಲ್ಲಿ KPTCL ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯೋಜನೆಯಡಿ OT firewalls, network segmentation, Zero Trust access, advanced threat prevention ಹಾಗೂ USB, laptop ಮತ್ತು removable mediaಗಳ security scanning ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. KPTCLನ Data Centre ಮತ್ತು Disaster Recovery ಕೇಂದ್ರಗಳಿಂದ ಕೇಂದ್ರೀಕೃತ ಮೇಲ್ವಿಚಾರಣೆ ನಡೆಯಲಿದೆ.
“ಇದು ಕೇವಲ ಮಾಹಿತಿ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆ ಅಷ್ಟೇ ಅಲ್ಲ. ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ನೇರವಾಗಿ ನಿಯಂತ್ರಿಸುವ ಕಾರ್ಯತಂತ್ರ ತಂತ್ರಜ್ಞಾನಕ್ಕೆ (Operational Technologyಗೆ) ಬಹುಪದರ ಭದ್ರತೆ ಒದಗಿಸುವ ಯೋಜನೆಯಾಗಿದೆ. ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿರುವ 1,474 ಉಪಕೇಂದ್ರಗಳು ಮತ್ತು 6 ALDC ಕೇಂದ್ರಗಳನ್ನು ಒಂದೇ OT cyber security architecture ಅಡಿ ತರಲಾಗುತ್ತಿರುವುದು ದೇಶದ ವಿದ್ಯುತ್ ಪ್ರಸರಣ ವ್ಯವಸ್ಥೆಯ ಸುಸ್ಥಿರ ಸೈಬರ್ ವ್ಯವಸ್ಥೆಯ (power-sector cyber resilienceಗೆ) ಹೊಸ ಮಾನದಂಡ ರೂಪಿಸಲಿದೆ,” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಸಭೆಯಲ್ಲಿ ಸಭೆಯಲ್ಲಿ ಕೆಪಿಸಿಎಲ್ ಯೋಜನಾ ನಿರ್ದೇಶಕರು, ಹಣಕಾಸು ನಿರ್ದೇಶಕರು, ಮುಖ್ಯ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ), CEE ಹಾಗೂ SEE (SCADA), KPTCLನ OT ಮತ್ತು IT ವಿಭಾಗಗಳ ಅಧಿಕಾರಿಗಳು ಭಾಗವಹಿಸಿದ್ದರು. System Integrator ಆಗಿರುವ ITI Limited ಹಾಗೂ technology partners Cisco ಮತ್ತು OPSWAT ಪ್ರತಿನಿಧಿಗಳೂ ಉಪಸ್ಥಿತರಿದ್ದರು.




