*ಬೆಳಗಾವಿಯಲ್ಲಿ ನಾಳೆ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 25ರಂದು ಬೆಳಗಾವಿ ನಗರದ ವಿವಿಧ ಬಡಾವಣೆಗಳು ಹಾಗೂ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಹುವಿಸಕಂನಿ ವತಿಯಿಂದ 220 ಕೆವಿ ಬೆಳಗಾವಿಯಿಂದ 110 ಕೆವಿ ವಡಗಾಂವ, ನೆಹರು ನಗರ ಎಕ್ಸ್ಪ್ರೆಸ್ ಲೈನ್ ಹಾಗೂ ಕಣಬರ್ಗಿ-ಫೋರ್ಟ್ ಮತ್ತು ಕಣಬರ್ಗಿ ವಿದ್ಯುತ್ ಮಾರ್ಗಗಳಲ್ಲಿ ಹಾನಿಗೊಳಗಾದ ಜಂಪ್ಗಳನ್ನು ಬದಲಾಯಿಸಿ ಹೊಸ ಜಂಪ್ಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 25ರಂದು ಬುಧವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 110 ಕೆವಿ ವಡಗಾಂವ, ನೆಹರು ನಗರ, ಕಣಬರ್ಗಿ ಹಾಗೂ 33 ಕೆವಿ ಫೋರ್ಟ್ ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಕೆಎಲ್ಇ, ಯುಕೆ-27, ಮ್ಯಾರಿಯಟ್ ಹೋಟೆಲ್, ವೆಲಕಮ್ ಹೋಟೆಲ್, ವುಡರೋಸ್, ಮಾಳಮಾರುತಿ ಬಡಾವಣೆ, ಶಿವಾಜಿನಗರ, ವೈಭವ ನಗರ, ಶಿವಬಸವ ನಗರ, ಅಶೋಕ ನಗರ, ಸದಾಶಿವ ನಗರ, ಜೈನಾಬಕೂಲ್, ಸಿವಿಲ್ ಆಸ್ಪತ್ರೆ, ಚೆನ್ನಮ್ಮ ವೃತ್ತ, ಸುಭಾಷ ನಗರ, ವಿಶ್ವೇಶ್ವರಯ್ಯ ನಗರ, ಕಣಬರ್ಗಿ, ರಾಮತೀರ್ಥ ನಗರ, ಶಿವಾಲಯ, ಯಮನಾಪುರ, ಆಯುರ್ವೇದಿಕ್ ಕಾಲೇಜು, ಆಜಾದ್ ನಗರ, ಫೋರ್ಟ್ ರಸ್ತೆ, ಬಸವನ ಕುಡಚಿ, ಶೆಟ್ಟಿ ಗಲ್ಲಿ, ಖಡೆಬಜಾರ್, ಧಾರವಾಡ ರಸ್ತೆ, ಮಾಳಿ ಗಲ್ಲಿ, ಬಜಾರ್ ಗಲ್ಲಿ, ವಡಗಾಂವ, ಹಳೆ ಬೆಳಗಾವಿ, ಹೊಸೂರು, ಸುಭಾಷ ಮಾರ್ಕೆಟ್, ವಿದ್ಯಾನಗರ, ಭಾಗ್ಯನಗರ ಹಾಗೂ ಯಳ್ಳೂರು ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಈ ಕುರಿತು ಹುವಿಸಕಂನಿ ಕಾರ್ಯ ಮತ್ತು ಪಾಲನೆ, ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




