BusinessKannada NewsLatest

*ಗೋಲ್ಡ್ ಲೋನ್ ಪಡೆದವರಿಗೆ ನೋಟಿಸ್ ಬರುತ್ತಿದೆಯೇ?*: *ಹಾಗಾದರೆ ಏನು ಮಾಡಬೇಕು?*

ಪ್ರಗತಿವಾಹಿನಿ ಸುದ್ದಿ: ನೀವು ಗೋಲ್ಡ್ ಲೋನ್ ಪಡೆದಿದ್ದೀರಾ? ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ನಿಮಗೆ ನೋಟಿಸ್ ಬರುತ್ತಿದೆಯೇ? ಹಾಗಾದರೆ ನೀವು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬಂಗಾರದ ಬೆಲೆ ಈಗ ಕುಸಿತವಾಗಿರುವುದರಿಂದ ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಬರಬಹುದು. ನೋಟಿಸ್ ಬಂದ ಮಾತ್ರಕ್ಕೆ ಆತಂಕಪಡುವ ಅಗತ್ಯವಿಲ್ಲ.

ಚಿನ್ನದ ಬೆಲೆ ಕುಸಿದಿರುವುದರಿಂದ ಲೋನ್ ಪಡೆದವರಿಗೆ ಕೆಲವು ಸವಾಲುಗಳು ಎದುರಾಗಬಹುದು. ಲೋನ್ ಟು ವ್ಯಾಲ್ಯೂ (LTV) ರೇಶಿಯೋ ಕಡಿಮೆಯಾದಾಗ, ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು (ಉದಾಹರಣೆಗೆ ಮುತ್ತೂಟ್, ಮಣ್ಣಪ್ಪುರಂ, ಐಐಎಫ್ಎಲ್) ಸಾಲದ ಮೊತ್ತವನ್ನು ಸರಿದೂಗಿಸಲು ಹೆಚ್ಚುವರಿ ಮಾರ್ಜಿನ್ ಮನಿ ಕೇಳಿ ನೋಟಿಸ್ ನೀಡಬಹುದು.

ಇಂತಹ ಸಂದರ್ಭದಲ್ಲಿ ಕಂಗಾಲಾಗಬೇಕಿಲ್ಲ. ನೋಟಿಸ್ ಬಂದ ತಕ್ಷಣ ಬ್ಯಾಂಕನ್ನು ಸಂಪರ್ಕಿಸಿ. ನೀವು ಹೆಚ್ಚುವರಿ ಚಿನ್ನವನ್ನು ಅಡವಿಟ್ಟು LTV ರೇಶಿಯೋವನ್ನು ಸಮತೋಲನಗೊಳಿಸಬಹುದು ಅಥವಾ ಬಾಕಿ ಇರುವ ಮಾರ್ಜಿನ್ ಹಣವನ್ನು ಪಾವತಿಸಬಹುದು. ನಿಮ್ಮ ಚಿನ್ನ ಅಡವಿಟ್ಟಿದ್ದರೆ ಹರಾಜಾಗುವವರೆಗೆ ಕಾಯಬೇಡಿ, ಏಕೆಂದರೆ ಒಮ್ಮೆ ನೋಟಿಸ್ ನೀಡಿದ ನಂತರ ಹರಾಜಿಗೆ ಸೀಮಿತ ಅವಧಿ ಮಾತ್ರ ಇರುತ್ತದೆ.

ಹಾಗಾಗಿ ತಜ್ಞರ ಪ್ರಕಾರ, ಬಂಗಾರದ ಬೆಲೆಗಳು ತಾತ್ಕಾಲಿಕವಾಗಿ ಇಳಿದರೂ, ದೀರ್ಘಾವಧಿಯಲ್ಲಿ ಯಾವಾಗಲೂ ಹೆಚ್ಚಳ ಕಾಣುತ್ತವೆ. ಆದ್ದರಿಂದ, ನಿಮ್ಮ ಅಡವಿಟ್ಟ ಚಿನ್ನವನ್ನು ಕಳೆದುಕೊಳ್ಳದಂತೆ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯ. ನಿಮ್ಮ ಚಿನ್ನವನ್ನು ಉಳಿಸಿಕೊಳ್ಳಲು ಸ್ನೇಹಿತರ ಅಥವಾ ಕುಟುಂಬದವರ ಸಹಾಯ ಪಡೆಯಲು ಸಾಧ್ಯವಾದರೆ ಪಡೆದುಕೊಳ್ಳಬಹುದು.

Related Articles

Back to top button