CrimeKarnataka NewsLatest

*ಮದುವೆ ನಿಶ್ಚಯವಾಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ಯುವತಿ*: *ಕೊರಳಲ್ಲಿ ಅರಿಶಿನದ ಕೊಂಬು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಮದುವೆ ನಿಶ್ಚಯವಾಗಿ ಹಸಮಣೆಯೇರಲು ಸಿದ್ಧವಾಗಿದ್ದ ಯುವತಿ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಆಕೆಯ ಕೊರಳಲ್ಲಿ ಅರಿಶಿನದ ಕೊಂಬು ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

24 ವರ್ಷದ ಭೂಮಿಕಾ ನೇಣಿಗೆ ಶರಣಾದ ಯುವತಿ. ಭೂಮಿಕಾ ಆತ್ಮಹತ್ಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಮದುವೆಗೂ ಮುನ್ನ ಯುವತಿ ಕೊರಳಲ್ಲಿ ಅರಿಶಿನ ಕೊಂಬು ಪತ್ತೆಯಾಗಿರುವುದು ಹತ್ತು ಹಲವು ಸಂಶಯ ಮೂಡಿಸಿದೆ.

ಈ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಕಡಪಸ್ವಾಮಿ ಮಠದ ಬಳಿ ನಡೆದಿದೆ. ಕಿರಣ್ ಎನ್ನುವ ಯುವಕನ ಜೊತೆ ಭೂಮಿಕಾಳ ಮದುವೆ ನಿಶ್ಚಯವಾಗಿದ್ದು, ಜನವರಿವರಿಯಲ್ಲಿ ಮದ್ವೆ ಫಿಕ್ಸ್ ಆಗಿತ್ತು. ಆದ್ರೆ, ಮದುವೆಗೂ ಮುನ್ನ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಮೃತ ಭೂಮಿಕಾಳ ಕೊರಳಲ್ಲಿ ಅರಿಶಿನ ಕೊಂಬು ಪತ್ತೆಯಾಗಿದೆ. ಹಾಗಾದ್ರೆ, ಭೂಮಿಕಾ ಕೊರಳಲ್ಲಿ ಪತ್ತೆಯಾದ ಅರಿಶಿನ ಕೊಂಬು ಯಾವುದು? ಕಿರಣ್ ಜೊತೆ ಮದುವೆ ನಿಶ್ಚಯಕ್ಕೂ ಮುನ್ನ ಭೂಮಿಕಾ ಬೇರೆಯವನ ಜೊತೆಗೆ ವಿವಾಹವಾಗಿದ್ದಳಾ? ಅದನ್ನು ಮನೆಯವರಿಂದ ಮುಚ್ಚಿಟ್ಟಿದ್ದಳಾ? ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದಾ? ಎಂಬ ಅನುಮಾನ ವ್ಯಕ್ತವಾಗಿದೆ.

ಇನ್ನು ಭೂಮಿಕಾ ಆತ್ಮಹತ್ಯೆಗೂ ಮುನ್ನ ಕಾಲೇಜು ಸ್ನೇಹಿತ ಗೌತಮ್​​ಗೆ ಕರೆ ಮಾಡಿದ್ದಾಳೆ. ಗೌತಮ್ ಜೊತೆಗೆ ಆತ್ಮೀಯವಾಗಿದ್ದ ಭೂಮಿಕಾ, ಅತೀ‌ ಹೆಚ್ಚು ಕರೆ, ವಿಡಿಯೋ ಮಾಡುತ್ತಿದ್ದಳು. ಅಲ್ಲದೇ 2 ತಿಂಗಳ ಹಿಂದೆ ಹಳೇ ಕಾಲೇಜು ಸ್ನೇಹಿತರ ಜತೆ ಪ್ರವಾಸಕ್ಕೆ ಹೋಗಿದ್ದಳು. ಆತ್ಮೀಯ ಸ್ನೇಹಿತ ಗೌತಮ್ ಎಂಬಾತ ಕೂಡ ಹೋಗಿದ್ದ. ಸಾವಿಗೂ ಮುನ್ನ ಕೊನೆಯದಾಗಿ ಗೌತಮ್ ಗೆ ಕರೆ ಮಾಡಿದ್ದಾಳೆ. ಹೀಗಾಗಿ ಭೂಮಿಕಾಳ ಸ್ನೇಹಿತ ಗೌತಮ್ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

Related Articles

Back to top button