Kannada NewsLatestNationalPolitics

*ಮಗಳ ಮದುವೆ ಸಮಾರಂಭದಲ್ಲಿ ತನ್ನ ಚಾಲಕನಿಗೆ ಒದ್ದ ಶಾಸಕ*

ಪ್ರಗತಿವಾಹಿನಿ ಸುದ್ದಿ: ಶಾಸಕರೊಬ್ಬರು ಮಗಳ ಮದುವೆ ಸಮಾರಂಭದಲ್ಲಿ ತನ್ನ ಚಾಲಕನಿಗೆ ಒದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲಿ ಭಾರಿ ವೈರಲ್ ಆಗಿದೆ.

ಕಾರಿನ ಸನ್‌ರೂಫ್‌ನಿಂದ ಹೊರಬಂದು ಜನರಿಗೆ ಸ್ವಾಗತ ಕೋರುವಾಗ ಶಾಸಕ ಅನಂತ್ ಸಿಂಗ್ ಚಾಲಕನಿಗೆ ಕಾಲಿನಿಂದ ಒದ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಾಸಕರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಛೋಟೆ ಸರ್ಕಾರ್’ ಎಂದೇ ಖ್ಯಾತಿ ಪಡೆದಿರುವ ಅನಂತ್ ಸಿಂಗ್ ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ. ಪಾಟ್ನಾದಲ್ಲಿ ತಮ್ಮ ಮಗಳ ಮದುವೆ ಸಮಾರಂಭದಲ್ಲಿ ಕಾರಿನ ಸನ್‌ರೂಫ್‌ನಿಂದ ಹೊರಬಂದು ಅತಿಥಿಗಳಿಗೆ ಕೈಬೀಸಿ ಸ್ವಾಗತಿಸುತ್ತಿದ್ದ ವೇಳೆ, ಚಾಲಕನಿಗೆ ಒದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅನಂತ್ ಸಿಂಗ್ ಅವರು ಎಸ್‌ಯುವಿ ಕಾರಿನ ಸನ್‌ರೂಫ್‌ನಿಂದ ಹೊರಬಂದು ಜನರತ್ತ ಕೈಬೀಸುತ್ತಿರುವುದು ಕಾಣಿಸುತ್ತದೆ. ಕಾರಿನ ಸುತ್ತಲೂ ಬೆಂಬಲಿಗರು ಮತ್ತು ಅತಿಥಿಗಳು ಸೇರಿದ್ದು, ಶಾಸಕರನ್ನು ನೋಡಲು ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಚಾಲಕನ ಮೇಲೆ ಕೋಪಗೊಂಡಂತೆ ಕಾಣಿಸಿಕೊಂಡು, ಸನ್‌ರೂಫ್‌ನಿಂದಲೇ ಆತನಿಗೆ ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಎಕ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಶಾಸಕರ ವರ್ತನೆ ಕುರಿತು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಸಮಾರಂಭದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನವೆಂಬರ್ 25ರಂದು ಬಿಹಾರದ ಪಾಟ್ನಾ ಜಿಲ್ಲೆಯ ನದ್ವಾನ್ ಗ್ರಾಮದಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಸಾವಿರಾರು ಅತಿಥಿಗಳು ಭಾಗವಹಿಸಿದ್ದ ಈ ಮದುವೆಯಲ್ಲಿ ಭವ್ಯವಾದ ಊಟದ ವ್ಯವಸ್ಥೆ, ಕುದುರೆ ಓಟ ಹಾಗೂ ಐಷಾರಾಮಿ ವಾಹನಗಳ ಪ್ರದರ್ಶನವೂ ಗಮನ ಸೆಳೆದಿತ್ತು. ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಚಾಲಕನಿಗೆ ಒದೆಯುತ್ತಿರುವ ದೃಶ್ಯವೂ ಚರ್ಚೆಗೆ ಗ್ರಾಸವಾಗಿದೆ.


Related Articles

Back to top button