Belagavi NewsBelgaum NewsKarnataka NewsLatest

*ಆಟೋಕ್ಯಾಡ್ ತಂತ್ರಜ್ಞಾನ ಮತ್ತು ವಿನ್ಯಾಸ ಕ್ಷೇತ್ರದ ಹೊಸ ಸಾಧ್ಯತೆಗಳ ಅನಾವರಣ*: *ನ. 30ರಂದು ‘AutoCAD ELEVATE 360’*

ಬೆಳಗಾವಿ: ಡಿಸೈನ್ ಕ್ಷೇತ್ರದ ವೃತ್ತಿಪರರಿಗೆ ಉತ್ಪಾದಕತೆ ಹೆಚ್ಚಿಸುವ, ವಿನ್ಯಾಸ ಕಾರ್ಯಗಳನ್ನು ಸರಳಗೊಳಿಸುವ ಹಾಗೂ ಆಟೊಮೇಷನ್ ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ಪರಿಚಯಿಸುವ ಉದ್ದೇಶದಿಂದ ನ. 30ರಂದು ಬೆಳಗಾವಿಯಲ್ಲಿ ‘AutoCAD ELEVATE 360’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಹಾಗೂ ಲಘು ಉದ್ಯೋಗ ಭಾರತಿ ಕರ್ನಾಟಕದ ಬೆಳಗಾವಿ ಘಟಕದ ಸಂಯುಕ್ತ ಆಶ್ರಯದಲ್ಲಿ, ಬ್ಲೂ ಬೆಲ್ ಎಂಜಿನಿಯರಿಂಗ್, ಆಟೋಡೆಸ್ಕ್ ಮತ್ತು ಟೆಕ್ ಡಾಟಾ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

ನ. 30ರಂದು ಸೋಮವಾರ ಉದ್ಯಮಬಾಗದಲ್ಲಿರುವ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 3ರಿಂದ 4.30ರವರೆಗೆ ಮೊದಲ ಅವಧಿ ಹಾಗೂ ಸಂಜೆ 5.30ರಿಂದ 7ರವರೆಗೆ ಎರಡನೇ ಅವಧಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಆಟೋಕ್ಯಾಡ್‌ನ ಇತ್ತೀಚಿನ ಬೆಳವಣಿಗೆಗಳು, ವಿನ್ಯಾಸ ಕಾರ್ಯಕ್ಷಮತೆ ಹೆಚ್ಚಿಸುವ ಆಧುನಿಕ ತಂತ್ರಜ್ಞಾನಗಳು, ಉದ್ಯಮ ನಿರ್ದಿಷ್ಟ ಟೂಲ್‌ಸೆಟ್‌ಗಳು ಹಾಗೂ ಆಟೊಮೇಷನ್ ಸೌಲಭ್ಯಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ತಾಂತ್ರಿಕ ಮಾಹಿತಿ ನೀಡಲಾಗುತ್ತದೆ. ಲೈವ್ ಆಟೋಕ್ಯಾಡ್ ಡೆಮೋ, ಸಂವಾದಾತ್ಮಕ ಪ್ರಶ್ನೋತ್ತರ ಹಾಗೂ ವಿನ್ಯಾಸ ಸವಾಲಿನ ಮೂಲಕ ಭಾಗವಹಿಸುವವರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಟೆಕ್ ಡಾಟಾದ ಸೊಲ್ಯೂಷನ್ ಕನ್ಸಲ್ಟೆಂಟ್ ಅಜಿತ್‌ಪ್ರಭಾಕರ್ ಆರ್. ಹಾಗೂ ಆಟೋಡೆಸ್ಕ್‌ನ ಪಾರ್ಟ್ನರ್ ಅಕೌಂಟ್ ಮ್ಯಾನೇಜರ್ ಶಿಖಿನ್ ಅಗರ್ವಾಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ವಿನ್ಯಾಸ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು, ಮ್ಯಾನೇಜರ್‌ಗಳು ಹಾಗೂ ಉದ್ಯಮಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಸಿಸಿಐ ಅಧ್ಯಕ್ಷ ಸ್ವಪ್ನಿಲ್ ಶಾ, ಲಘು ಉದ್ಯೋಗ ಭಾರತಿ ಅಧ್ಯಕ್ಷ ಮಹೇಶ್ ಇನಾಮದಾರ್, ಬಿಸಿಸಿಐ ಗೌರವ ಕಾರ್ಯದರ್ಶಿ ಮನೋಜಕುಮಾರ ಮತ್ತಿಕೊಪ್ಪ ಹಾಗೂ ಲಘು ಉದ್ಯೋಗ ಭಾರತಿ ಕಾರ್ಯದರ್ಶಿ ಪ್ರಶಾಂತ ಪಾಟೀಲ ಅವರು ಮನವಿ ಮಾಡಿದ್ದಾರೆ.

ಸ್ಥಳ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ನಂ. 48 ಮತ್ತು 49, ಖಾನಾಪುರ ರಸ್ತೆ, ಉದ್ಯಮಬಾಗ, ಬೆಳಗಾವಿ.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳಿದ್ದು, ಆಸಕ್ತರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

Related Articles

Back to top button