ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು, ಈ ಬಾರಿ 2 ಲಕ್ಷ 37 ಸಾವಿರ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ.
7ನೇ ಬಾರಿಗೆ ಬಜೆಟ್ ಮಂಡಿಸಿರುವ ಸಿಎಂ ಯಡಿಯೂರಪ್ಪ,ಈ ಬಾರಿ 6 ವಲಯಗಳಾಗಿ ಬಜೆಟ್ ವಿಂಗಡಿಸಿ ಮಂಡಿಸಿದರು.
ಬಜೆಟ್ ಪ್ರಮುಖಾಂಶಗಳು:
* ಹೊಸ ಕೃಷಿ ನೀತಿ ಜಾರಿಗೆ ಚಿಂತನೆ
* ಅತಿ ಸಣ್ಣ ರೈತರಿಗೆ ವರ್ಷಕ್ಕೆ 10 ಸಾವಿರ ರೂ ಯೋಜನೆ ಮುಂದುವರಿಕೆ
* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮರು ಘೋಷಣೆ
* ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ಮೀಸಲು
* ಕೃಷಿಗೆ ಶೇ.9.5ರಷ್ಟು ಅನುದಾನ ಮೀಸಲು
* ಬಾದಿತ ರೈತರಿಗೆ ಪ್ರತಿ ಹೆಕ್ಟೇರ್ ಗೆ 10 ಲಕ್ಷ ಪರಿಹಾರ
* ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಸ್ಥಾಪನೆ
* ರೈತರ ಮನೆ ಬಾಗಿಲಿಗೆ ಕೀಟನಾಶಕ
* ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
* ಸಾವಯವ ಕೃಷಿ ಪ್ರೋತ್ಸಾಹಿಸುವುದಕ್ಕೆ 200ಕೋಟಿ
*1 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
* ರಾಜ್ಯದ ವಿವಿಧ ಏತ ನೀರಾವರಿಗಳಿಗೆ – 5000 ಕೋಟಿ ರೂ ಅನುದಾನ
* ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲೆ ಬಳಿ ಪರ್ಯಾಯ ಸಮತೋಲನ ಜಲಾಶಯ ನಿರ್ಮಾಣಕ್ಕೆ 20 ಕೋಟಿ ರೂ.ನಲ್ಲಿ ಯೋಜನಾ ವರದಿ
* ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಸಾವಿರ ಕೋಟಿ
* ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ
* ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ
* ಕ್ರೈಸ್ತಸಮಯದಾಯದ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ
* 276 ಪಬ್ಲಿಕ್ ಶಾಲೆಗಳ ಆರಂಭಕ್ಕೆ ೧00 ಕೋಟಿ ಅನುದಾನ
* ಶಿಕ್ಷಕ ಮಿತ್ರ ಅಭಿವೃದ್ಧಿ ಮೊಬೈಲ್ ಆ್ಯಪ್ ಅಭಿವೃದ್ಧಿ, ಮನೆ ಮನೆಗೆ ಗಂಗೆ 10 ಲಕ್ಷ ಮನೆಗಳಿಗೆ ನೀರಿನಸಂಪರ್ಕ
* 110 ಕಿತ್ತೂರು ರಾಣಿ ಚೆನ್ನಮ್ಮಶಿಶುಪಾಲನ ಕೇಂದ್ರ ಆರಂಭ,ಕಟ್ಟಡ ಕಾರ್ಮಿಕರಿಗೆ 10 ಮೊಬೈಲ್ ಕ್ಲಿನಿಕ್
* ಬೆಂಗಳೂರು ಕೆರೆಗಳ ಅಭಿವೃದ್ಧಿಯ ಕ್ರಿಯಾಯೋಜನೆಗೆ 100 ಕೋಟಿ ರೂಗೆ ಅನುಮೋದನೆ
* ಕೆರೆಗಳ ಅಭಿವೃದ್ಧಿಗೆ 317 ಕೋಟಿ ರೂ ಮೀಸಲು
* ರಾಜಾ ಕಾಲುವೆಗಳ ಅಭಿವೃದ್ಧಿಗೆ – 200 ಕೋಟಿ ರುಯ ನಿಗದಿ
* ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು 200 ಕೋಟಿ ರೂ ನಿಗದಿ
* ಬೆಂಗಳೂರಲ್ಲಿ ಫಿಲ್ಮ್ ಸಿಟಿ ನಿರ್ಮಾಣ-500 ಕೋಟಿ
* ಕೆಂಪೇಗೌಡ ಪ್ರತಿಮೆ ನಿರ್ಮಾಣ – 66 ಕೋಟಿ
* ಬಿಎಂಟಿಸಿ ಅಭಿವೃದ್ದಿಗೆ 700 ಕೋಟಿ
* 110 ಹಳ್ಳಿಗಳಿಗೆ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿಗೆ 1000 ಕೋಟಿ ರೂ ಮೀಸಲು. ಈಸಾಲಿನಲ್ಲಿ 500 ಕೋಟಿ ರೂ ಅನುದಾನ
* 5 ಮೊರಾರ್ಜಿ ಶಾಲೆ ಪಿಯುಗೆ ಏರಿಕೆ
* ಸರ್ವರಿಗೂ ಸೂರು ಕಲ್ಪಿಸಲು ವಸತಿ ಯೋಜನೆ ಪೂರ್ಣಕ್ಕೆ ಕ್ರಮ
* ರಾಜೀವ್ ವಸತಿ ನಿಗಮಕ್ಕೆ 10 ಸಾವಿರ ಕೋಟಿ.
* ಶಿರಸಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ
* ಕಿವುಡುತನ ನಿವಾರಣೆಗೆ ಯೋಜನೆ
* 5 ಜಿಲ್ಲೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ
* 28 ಕೋ. ವೆಚ್ಚದಲ್ಲಿ ಹೊಸ ಯೋಜನೆ
* ಎಲ್ಲಾ ಆಸ್ಪತ್ರೆಗೆ ಐಸಿಯೂ ಘಟಕ
* 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ಮೆಂಟ್ ನೋಂದಣಿ
* ಶೇ. 5ರಿಂದ ಶೇ 2 ನೋಂದಣಿ ಶುಲ್ಕ ಇಳಿಕೆ
* ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆ ಅಡಿ 1 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್
* ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ – 5 ಕೋಟಿ
* ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ 3,060 ಕೋಟಿ
* ಕೃಷಿ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ
* ಸರ್ಕಾರದಿಂದ ಎಲೆಕ್ಟ್ರಿಕಲ್ ಟ್ಯಾಕ್ಸಿ ಸೇವೆ
* ನೇಕಾರರ ಸಾಲ ಮನ್ನಾ ಯೋಜನೆ ಮುಂದುವರಿಕೆ
* ಸಾಲ ಮನ್ನಾಕ್ಕೆ 79 ಕೋಟಿ ಅನುದಾನ ಮೀಸಲು
* ಜವಳಿ ಪಾರ್ಕ್ ಸ್ಥಾಪನೆ – 3 ಸಾವಿರ ಉದ್ಯೋಗ ಸೃಷ್ಟಿ
* ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ 1.5 ಕೋಟಿ
* ಉತ್ತರ ಕನ್ನಡದಲ್ಲಿ ರಾಜ್ಯದ ಮೊದಲ ಕಡಲದಾಮ.
* ರಾಮನಗರದಲ್ಲಿ ಸಾರ್ವಜನಿಕ- ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣ ಘಟಕ ಸ್ಥಾಪನೆ.
* ಹಂದಿ ಸಾಕಾಣಿಕೆ ಹೆಚ್ಚಳ ಮಾಡಲು “ಸಮಗ್ರ ವರಹಾ ಅಭಿವೃದ್ಧಿ ಯೋಜನೆ”ಪ್ರಾರಂಭ.
* ಕಾವೇರಿ ನೀರು ಸರಬರಾಜು ಐದನೇ ಹಂತದ ಕಾಮಗಾರಿಗೆ 5,550 ಕೋಟಿ ರೂ ನಿಗದಿ.
* 18 ವರ್ಷ ಒಳಗಿನ ಮಕ್ಕಳ ಅಭಿವೃದ್ಧಿಗೆ ಯೋಜನೆ.ಇದಕ್ಕಾಗಿ 36340 ಕೋಟಿ ಬಜೆಟ್.
* 279 ಕಾರ್ಯಕ್ರಮಗಳು ಮಕ್ಕಳಿಗಾಗಿ ಅನುಷ್ಟಾನ.
* ಕೇಂದ್ರದ ಸಹಕಾರದಿಂದ ರಾಜ್ಯದಲ್ಲಿ 7 ಬಾಲ ಮಂದಿರ ನಿರ್ಮಾಣ.
* ಬಾಲಮಂದಿರದಿಂದ 21 ವರ್ಷದ ನಂತರ ಬಿಡುಗಡೆಯಾದವರಿಗೆ ಉದ್ಯೋಗ ಪ್ರಾರಂಭಿಸಲು, ಜೀವನ ರೂಪಿಸಿಕೊಳ್ಳಲು ಆರ್ಥಿಕ – ಸಹಾಯ.
* ಪ್ರತಿ ತಿಂಗಳು 5 ಸಾವಿರ ಆರ್ಥಿಕ ನೆರವು. ಗರಿಷ್ಠ ಮೂರು ವರ್ಷ ಆರ್ಥಿಕ ನೆರವು. ಇದಕ್ಕಾಗಿ 1 ಕೋಟಿ ಅನುದಾನ
* ಕಿಡ್ನಿ ವೈಫಲ್ಯಗೊಂಡ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಡಯಾಲಿಸೀಸ್ ಯೋಜನೆ.
* ರಾಜ್ಯದ 5 ಜಿಲ್ಲೆಯಲ್ಲಿ 5 ಕೋಟಿ ವೆಚ್ಚದಲ್ಲಿ ಡಯಾಲಿಸೀಸ್ ಕೇಂದ್ರ ಸ್ಥಾಪನೆ.
* ಕೆಸಿ ಜನರಲ್ ಆಸ್ಪತ್ರೆ ಮತ್ತು ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಹೃದಯ ಚಿಕಿತ್ಸೆಗಾಗಿ ಕ್ಯಾತ್ ಲ್ಯಾಬ್ ಸ್ಥಾಪನೆ
* ಬೆಂಗಳೂರಿನ ಕೆಸಿ ಜನರಲ್ ಮತ್ತು 5 ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ
* ಪೆಟ್ರೋಲ್ ಮೇಲಿನ ತೆರಿಗೆ ದರ ಹೆಚ್ಚಳ
* ಪೆಟ್ರೋಲ್ ಮೇಲಿನ ತೆರಿಗೆ ದರ 32 ರಿಂದ 35ಕ್ಕೆ ಏರಿಕೆ
* ಡೀಸಲ್ ಮೇಲಿನ ತೆರಿಗೆ ದರ 21 ರಿಂದ 24 ಕ್ಮೆ ಏರಿಕ
* ಈ ಮೂಲಕ ಪೆಟ್ರೋಲ್ ದರ ಲೀಟರ್ ಗೆ 1.60 ರೂಪಾಯಿ
* ಡೀಸಲ್ ಮೇಲಿನ ದರ ಲೀಟರ್ ಗೆ 1.59 ರಷ್ಟು ಏರಿಕೆ
* ಧಾರವಾಡ -ಬೆಳಗಾವಿ ನಡುವೆ ನೂತನ ರೈಲು ಮಾರ್ಗ – 121 ಕಿ.ಮೀ ಇದ್ದ ಅಂತರ 73 ಕಿ.ಮೀಗೆ ಇಳಿಕೆ
* ಕೇಂದ್ರ ಹಾಗೂ ರಾಜ್ಯದಿಂದ ಪಾಲುದಾರಿಕೆಯಲ್ಲಿ ಅಭಿವೃದ್ಧಿ- 1 ಗಂಟೆ ಪ್ರಯಾಣದ ಅವಧಿ ಇಳಿಕೆ
* 60 ವರ್ಷ ಮೀರಿದ ಬಿಪಿಎಲ್ ಕಾರ್ಡ್ ದಾರರಿಗೆ ಜೀವನಚೈತ್ರ ಯೋಜನೆ
* ಜೀವನ ಚೈತ್ರ ಯೋಜನೆಗೆ 20 ಕೋಟಿ ಮೀಸಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ