ಬಜೆಟ್ ಪ್ರತಿಗಾಗಿ ಗದ್ದಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು 7ನೇ ಬಾರಿ ಬಜೆಟ್​ ಮಂಡಿಸಿದ್ದು, ಬಜೆಟ್​ ಮೇಲಿನ ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷದ ನಾಯಕರು ಬಜೆಟ್​ ಪ್ರತಿ ನೀಡುವಂತೆ ಒತ್ತಾಯಿಸಿ ಗದ್ದಲವೆಬ್ಬಿಸಿದ ಘಟನೆ ನಡೆದಿದೆ.

ಬಜೆಟ್​ ಭಾಷಣ ಆರಂಭವಾಗುತ್ತಿದ್ದಂತೆ ಬಜೆಟ್ ಪ್ರತಿ ಸದನದ ಎಲ್ಲಾ ಸದಸ್ಯರಿಗೆ ನೀಡುವುದು ಸಂಪ್ರದಾಯ. ಆದರೆ, ಈ ಬಾರಿ ಬಜೆಟ್​ ಮುಗಿಯುವವರಿಗೆ ಯಾರಿಗೂ ಬಜೆಟ್ ಪ್ರತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ವಿಪಕ್ಷ ಸದಸ್ಯರು ಇದಕ್ಕೆ ಆಅಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್​ ನಾಯಕ ಆರ್​.ವಿ. ದೇಶಪಾಂಡೆ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದರು.

ಇದರಿಂದಾಗಿ ಸದನದಲ್ಲಿ ಕೆಲ ಗೊಂದಲದ ವಾತಾವರಣ ನಿರ್ಮಾನವಾಯಿತು. ಈ ವೇಳೆ ಸ್ಪಷ್ಟನೆ ನೀಡಿದ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಕಳೆದ ವರ್ಷ ನೀವು ಆರಂಭಿಸಿದ ಸಂಪ್ರದಾಯವನ್ನೇ ಈ ವರ್ಷ ನಾವು ಮುಂದುವರೆಸುತ್ತಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದರು.

ಅಂತಿಮವಾಗಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸೂಚನೆ ಮೇರೆಗೆ ಎಲ್ಲರಿಗೂ ಬಜೆಟ್​ ಪ್ರತಿ ನೀಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button