ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ಬಿಐ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರದವರೆಗೆ ಮಾತ್ರ ಹಣ ಹಿಂಪಡೆಯಲು ಅವಕಾಶ ನೀಡಿ ಗರಿಷ್ಠ ಮಿತಿ ವಿಧಿಸಿದೆ.
ಬ್ಯಾಂಕ್ ಆದೇಶದ ಬೆನ್ನಲ್ಲೇ ಕಂಗಾಲಾಗಿರುವ ಗ್ರಾಹಕರು ದೇಶಾದ್ಯಂತ ಯೆಸ್ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣವನ್ನು ವಿತ್ ಡ್ರಾ ಮಾಡಲು ಮುಂದಾಗಿದ್ದಾರೆ. ಆದರೆ ಯೆಸ್ ಬ್ಯಾಂಕ್ ಎಟಿಎಂ ನಲ್ಲಿಯೂ ಹಣ ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ಶಾಖೆಗಳ ಮುಂದೆ ಜನರು ಜಮಾವಣೆಗೊಂಡಿದ್ದಾರೆ.
ಯೆಸ್ ಬ್ಯಾಂಕ್ ಗೆ ನಿಷೇಧದ ಆದೇಶ ಹೊರಡಿಸಿರುವ ಆರ್ಬಿಐ ತೊಂದರೆಗೆ ಒಳಗಾಗಿರುವ ಖಾಸಗಿ ಬ್ಯಾಂಕಿಂಗ್ ಸಂಸ್ಥೆ ಯೆಸ್ ಬ್ಯಾಂಕ್ನ ಎಲ್ಲಾ ಕಾರ್ಯ ಚಟುವಟಿಕೆಗಳ ಪ್ರಾರಂಭ ಅಥವಾ ಮುಂದುವರಿಕೆ ಮೇಲೆ ತಡೆಯಾಜ್ಞೆ ನೀಡಿದೆ. ಈ ಸಂಬಂಧ ಗುರುವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿರುವ ಆರ್ಬಿಐ, ಯೆಸ್ ಬ್ಯಾಂಕ್ ಮಂಡಳಿಯನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ವಶಕ್ಕೆ ಪಡೆಯಲಾಗಿದೆ. ಮತ್ತು ಎಸ್ಬಿಐನ ಮಾಜಿ ಸಿಇಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ