ಯಾದಗಿರಿಗೆ ಕೊರೊನಾ ವೈರಸ್ ಬರಲ್ಲ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಯಾದಗಿರಿ ಬಿಸಿಲಿಗೆ ಕೊರೊನಾ ವೈರಸ್ ಬರುವುದಿಲ್ಲ. ನಮ್ಮಲ್ಲಿ ಕೊರೊನಾಗಿಂತ ಕರುಣಾಕರ ರೆಡ್ಡಿಯೇ ಇದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾನ್ ವ್ಯಂಗ್ಯವಾಡಿದ್ದಾರೆ.

ಯಾದಗಿರಿ ಜಿಲ್ಲಾಸ್ಪತ್ರೆಯ ಕೊರೊನಾ ವೈರಸ್ ವಿಶೇಷ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾದಗಿರಿಯಲ್ಲಿ ಬಿಸಿಲು ಹೆಚ್ಚಿದೆ ಕೊರೊನಾ ವೈರಸ್ ಭಯಪಡುತ್ತದೆ. ಇಲ್ಲಿನ ಬಿಸಿಲಿಗೆ ಕೊರೊನಾ ಸತ್ತು ಹೋಗುತ್ತೆ ಎಂದರು.

ಕೊರೊನಾ ವೈರಸ್‍ಗೆ ಯಾವುದೇ ರೀತಿಯಲ್ಲಿ ಬೆದರುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಸುದ್ದಿ ಹರಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,00,774ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ ಇದುವರೆಗೆ 3412 ಮಂದಿ ಸಾವನ್ನಪ್ಪಿದ್ದಾರೆ.

Home add -Advt

 

Related Articles

Back to top button